ಗಿಲ್ಲಿ ಆಸೆಗೆ ಫ್ಯಾನ್ಸ್ ಅಸ್ತು- ಮಿಲಿಯನ್ ಗಡಿ ದಾಟಿದ ನಟನ ಇನ್ಸ್ಟಾ ಖಾತೆ
ಬಿಗ್ ಬಾಸ್ ಮನೆಯ ಆಟ ಇನ್ನೇನು ಕೆಲವೇ ದಿನಗಳಲ್ಲಿ ಮುಗಿಯಲಿದೆ. ಮುಂದಿನ ವಾರಾಂತ್ಯ ಬಿಗ್ ಬಾಸ್ ಕನ್ನಡ 12ರ (Bigg Boss Kannada 12) ವಿನ್ನರ್ ಯಾರು ಎಂಬ ಪ್ರಶ್ನೆಗೆ ಉತ್ತರ ಸಿಗಲಿದೆ. ಈ ನಡುವೆ ಗಿಲ್ಲಿ ಬಿಗ್ ಮನೆಯಲ್ಲಿ ಕೊಟ್ಟಿರೋ ಹೇಳಿಕೆಯನ್ನು ಫ್ಯಾನ್ಸ್ ಫಾಲೋ ಮಾಡಿದ್ದಾರೆ. ನೆಚ್ಚಿನ ಸ್ಪರ್ಧಿ ಗಿಲ್ಲಿ ಆಸೆಯನ್ನು ಫ್ಯಾನ್ಸ್ ನೆರವೇರಿಸಿದ್ದಾರೆ. ಇದನ್ನೂ ಓದಿ: ಬೂಟುಗಾಲಲ್ಲಿ ಬುಲೆಟ್ಸ್ ಬಿಟ್ಟ ರಾಕಿ ಭಾಯ್- ಹಾಲಿವುಡ್ ರೇಂಜ್‌ನಲ್ಲಿ ‘ಟಾಕ್ಸಿಕ್’ ಟೀಸರ್ ಔಟ್
View this post on Instagram
ಗಿಲ್ಲಿ (Gilli) ಆಟ, ಕಾಮಿಡಿ ಸೆನ್ಸ್ ಎಲ್ಲವೂ ಅಭಿಮಾನಿಗಳಿಗೆ ಇಷ್ಟ ಆಗಿದೆ. ಪ್ರೇಕ್ಷಕರು ಮೆಚ್ಚಿದ್ರೆ ತಲೆ ಮೇಲಿಟ್ಟು ಮೆರೆಸುತ್ತಾರೆ ಎಂಬುದು ಮತ್ತೆ ಸಾಬೀತಾಗಿದೆ. ಬಿಗ್ ಬಾಸ್ ಮನೆಯಲ್ಲಿ ಗಿಲ್ಲಿ, ಕಾವ್ಯಾ ಜೊತೆ ಮಾತನಾಡುವಾಗ 1 ಮಿಲಿಯನ್ ಫಾಲೋವರ್ಸ್ ಆದರೆ ಕಾವು ಎಂದು ಹೇಳಿಕೊಂಡಿದ್ದರು. ಇದೀಗ ಅವರ ಮಹದಾಸೆಯನ್ನು ಫ್ಯಾನ್ಸ್ ನೆರವೇರಿಸಿದ್ದಾರೆ. ಒಂದು ಮಿಲಿಯನ್‌ಗೂ ಅಧಿಕ ಹಿಂಬಾಲಕರು ಗಿಲ್ಲಿ ಇ ಖಾತೆ ಫಾಲೋ ಮಾಡ್ತಿದ್ದಾರೆ. ಈ ಶೋ ಮುಗಿದ ಮೇಲೆ ಗಿಲ್ಲಿಗೆ ಅಚ್ಚರಿ ಆದರೂ ಆಶ್ವರ್ಯವೇನಿಲ್ಲ.
View this post on Instagram
ಗಿಲ್ಲಿ ಬಿಗ್ ಮನೆಗೆ ಕಾಲಿಟ್ಟ ಸಂದರ್ಭದಲ್ಲಿ ಸೋಷಿಯಲ್ ಮೀಡಿಯಾದಲ್ಲಿ 102000 ಫಾಲೋವರ್ಸ್ ಹೊಂದಿದ್ದರು. ಈಗ ಒಂದು ಮಿಲಿಯನ್ ಗಡಿ ದಾಟಿದ ಖುಷಿಯಲ್ಲಿ ಅವರ ಖಾತೆಯ ಮೂಲಕ ಅಭಿಮಾನಿಗಳಿಗೆ ಧನ್ಯವಾದ ತಿಳಿಸಿದ್ದಾರೆ.
View this post on Instagram
ಇನ್ನೂ ಇನ್ಸ್ಟಾಗ್ರಾಂನಲ್ಲಿ ಧ್ರುವಂತ್‌ಗೆ 13000 ಫಾಲೋವರ್ಸ್, ರಕ್ಷಿತಾ ಶೆಟ್ಟಿಗೆ (Rakshitha Shetty) 473000, ರಾಶಿಕಾ ಶೆಟ್ಟಿಗೆ 173000, ರಾಘು 240000, ಅಶ್ವಿನಿ ಗೌಡ 201000, ಧನುಷ್ ಗೌಡ (Dhanush Gowda) 268000, ಕಾವ್ಯ ಶೈವಾ 490000 ಫಾಲೋವರ್ಸ್ ಹೊಂದಿದ್ದಾರೆ. ಇವರೆಲ್ಲರಿಗಿಂತ ಗಿಲ್ಲಿ 1 ಮಿಲಿಯನ್‌ಗಿಂತ ಅಧಿಕ ಫಾಲೋವರ್ಸ್ ಗಳಿಸುವ ಮೂಲಕ ಮುಂದಿದ್ದಾರೆ.

