ರೊಮ್ಯಾಂಟಿಕ್‌ ಆಗಿದೆ ಶಿಶಿರ್‌, ಐಶ್ವರ್ಯಾ ಫೋಟೋಸ್-‌ ಬೇಗ ಮದುವೆ ಸುದ್ದಿ ಕೊಡಿ ಎಂದ ಫ್ಯಾನ್ಸ್

ರೊಮ್ಯಾಂಟಿಕ್‌ ಆಗಿದೆ ಶಿಶಿರ್‌, ಐಶ್ವರ್ಯಾ ಫೋಟೋಸ್-‌ ಬೇಗ ಮದುವೆ ಸುದ್ದಿ ಕೊಡಿ ಎಂದ ಫ್ಯಾನ್ಸ್

ಟಿವಿ ಲೋಕದ ಮುದ್ದಾದ ಜೋಡಿ ಅಂದರೆ ಅದು ಶಿಶಿರ್‌ ಶಾಸ್ತ್ರಿ, ಐಶ್ವರ್ಯಾ ಸಿಂಧೋಗಿ. ಸದಾ ಒಂದಲ್ಲಾ ಒಂದು ರೀಲ್ಸ್‌, ಫೋಟೋಶೂಟ್‌ ಮೂಲಕ ಸದ್ದು ಮಾಡುತ್ತಲೇ ಇರುತ್ತಾರೆ. ಇದೀಗ ರೊಮ್ಯಾಂಟಿಕ್‌ ಫೋಟೋವೊಂದನ್ನು ಹಂಚಿಕೊಂಡಿದ್ದಾರೆ. ಇದನ್ನು ನೋಡ್ತಿದ್ದಂತೆ ಬೇಗ ಮದುವೆ ಆಗಿ, ಸುದ್ದಿ ಕೊಡಿ ಎಂದಿದ್ದಾರೆ.

ಬಿಗ್‌ ಬಾಸ್‌ ಕನ್ನಡ 10ರ ಸೀಸನ್‌ನಲ್ಲಿ ಐಶ್ವರ್ಯಾ, ಶಿಶಿರ್‌ (Shishir Shastry) ಮುಖಾ ಮುಖಿಯಾಯ್ತು. ಇಬ್ಬರೂ ಇಲ್ಲಿ ಸ್ಪರ್ಧಿಗಳಾಗಿದ್ದರು. ಈ ಶೋ ಬಳಿಕ ಹಲವು ಕಾರ್ಯಕ್ರಮಗಳಿಗೆ ಜೊತೆಯಾಗಿ ತೆರಳುತ್ತಿದ್ದಾರೆ. ಶಿಶಿರ್‌, ಐಶ್ವರ್ಯಾ (Aishwarya Shindogi) ಜತೆಯಾಗಿ ಟ್ರಿಪ್‌, ಫೋಟೋಶೂಟ್‌ ಮಾಡ್ತಿದ್ದಾರೆ. ಸಾಕಷ್ಟು ಜಾಹೀರಾತುಗಳಲ್ಲಿ ಜೊತೆಯಾಗಿ ನಟಿಸಲು ಡಿಮ್ಯಾಂಡ್‌ ಹೆಚ್ಚಾಗಿದೆ. ಹೀಗಾಗಿ ಸಹಜವಾಗಿ ಇಬ್ಬರೂ ಲವ್‌ ಮಾಡ್ತಿದ್ದಾರಾ? ಎಂಬ ಅನುಮಾನ ಅಭಿಮಾನಿಗಳಲ್ಲಿ ಮೂಡಿದೆ.

ದೊಡ್ಮನೆಯಲ್ಲೂ ಜೋಡಿಯಾಗಿ ಹೈಲೆಟ್‌ ಆಗಿದ್ರು. ಇಂದಿಗೂ ಆ ಬಾಂಧವ್ಯ ಹಾಗೇ ಇದೆ. ಆದರೆ ಮದುವೆ ಬಗ್ಗೆ ಪ್ರಶ್ನೆ ಎದುರಾದಾಗಲೆಲ್ಲಾ ನಾವಿಬ್ರು ಜಸ್ಟ್‌ ಫ್ರೆಂಡ್ಸ್‌ ಎಂದು ಉತ್ತರ ಹೇಳಿದ್ದಾರೆ.‌ ಅಧಿಕೃತವಾಗಿ ಯಾವುದೇ ಹೇಳಿಕೆ ನೀಡಿಲ್ಲ. ಇತ್ತೀಚಿನ ಇಬ್ಬರ ಓಡಾಟ, ಒಡನಾಟ ನೋಡಿದ್ರೆ ಫ್ಯಾನ್ಸ್‌ ಇವರಿಬ್ಬರೂ ಡೇಟಿಂಗ್‌ ಮಾಡ್ತಿದ್ದಾರೆ, ಎಂಗೇಜ್‌ ಆಗಿದ್ದಾರೆ ಎಂದೇ ಊಹಿಸುತ್ತಿದ್ದಾರೆ. ಈ ಜೋಡಿಯ ರೊಮ್ಯಾಂಟಿಕ್‌ ಫೋಟೋಶೂಟ್‌ ನೋಡಿ ಬೇಗ ಮದುವೆ ಬಗ್ಗೆ ಗುಡ್‌ ನ್ಯೂಸ್‌ ಕೊಡಿ ಎನ್ನುತ್ತಿದ್ದಾರೆ ಫ್ಯಾನ್ಸ್.‌ ಈ ಜೋಡಿ ಮದುವೆ ಕುರಿತು ನ್ಯೂಸ್ ಕೊಡ್ತಾರಾ? ಕಾದುನೋಡಬೇಕಿದೆ.

News Desk Sandalwood Times

error: Content is protected !!