ಮಹಾಕಾಳಿ ಸಿನಿಮಾಗೆ ಬಾಲಿವುಡ್‌ನ ನ್ಯಾಷನಲ್ ಕ್ರಶ್ ಖ್ಯಾತಿಯ ರೋಹಿತ್ ಸರಾಫ್ ಎಂಟ್ರಿ
ಹನುಮಾನ್ ಚಿತ್ರ ಖ್ಯಾತಿಯ ಡೈರೆಕ್ಟರ್ ಪ್ರಶಾಂತ್ ವರ್ಮಾ (Prashanth Varma) ಬರೆದ ಮಹಾಕಾಳಿ ಸಿನಿಮಾಗೆ ಬಾಲಿವುಡ್ ನ್ಯಾಷನಲ್ ಕ್ರಶ್ ಖ್ಯಾತಿಯ ರೋಹಿತ್ ಸರಾಫ್ ಎಂಟ್ರಿ ಕೊಟ್ಟಿದ್ದಾರೆ. ಇತ್ತೀಚೆಗೆ ಅವರು ತಮ್ಮ ಭಾಗದ ಚಿತ್ರೀಕರಣವನ್ನು ಹೈದ್ರಾಬಾದ್ ನಲ್ಲಿ ಪೂರ್ಣಗೊಳಿಸಿದ್ದಾರೆ.

ಉತ್ತರ ಭಾರತದಲ್ಲಿ ರೋಹಿತ್ ಗೆ ತಮ್ಮದೇ ಆದ ಅಭಿಮಾನಿ ಬಳಗವಿದೆ. ಅದರಲ್ಲಿಯೂ ಯುವ ಸಮೂಹ ಅವರ ಅಭಿನಯವನ್ನು ಹೆಚ್ಚು ಇಷ್ಟಪಡುತ್ತಾರೆ. ಹೀಗಾಗಿ
ಮಹಾಕಾಳಿ ಸ್ಟ್ರೆಂಥ್ ಮತ್ತಷ್ಟು ಹೆಚ್ಚಾದಂತೆ ಆಗಿದೆ. ಈ ಚಿತ್ರದಲ್ಲಿ ಮಹಾಕಾಳಿ ಪಾತ್ರವನ್ನ ಭೂಮಿ ಶೆಟ್ಟಿ (Bhoomi Shetty) ಮಾಡುತ್ತಿದ್ದಾರೆ. ಅಕ್ಷಯ್ ಖನ್ನಾ ಸೇರಿದಂತೆ ಹಲವರು ನಟಿಸಿದ್ದಾರೆ. ಇವರಿಬ್ಬರ ಲುಕ್ ಈಗಾಗಲೇ ಬಿಡುಗಡೆಯಾಗಿದ್ದು, ಸಾಕಷ್ಟು ಒಳ್ಳೆ ಮೆಚ್ಚುಗೆ ಸಿಕ್ಕಿದೆ.
View this post on Instagram
ಬಹುನಿರೀಕ್ಷಿತ ಪ್ಯಾನ್ ಇಂಡಿಯಾ ಸಿನಿಮಾಗಳಲ್ಲಿ ಒಂದಾದ ಮಹಾಕಾಳಿ ಸಿನಿಮಾವನ್ನು ಆರ್‌ಕೆಡಿ ಸ್ಟುಡಿಯೋಸ್ ಬ್ಯಾನರ್ ಅಡಿಯಲ್ಲಿ ಆರ್‌ಕೆ ದುಗ್ಗಲ್ ಮತ್ತು ರಿವಾಜ್ ರಮೇಶ್ ದುಗ್ಗಲ್ ಅವರು ಅದ್ಧೂರಿ ನಿರ್ಮಾಣ ಮಾಡುತ್ತಿದೆ.
‘ಡಿಯರ್ ಜಿಂದಗಿ’ ಚಿತ್ರದಲ್ಲಿ ಆಲಿಯಾ ಭಟ್ (Alia Bhatt) ಅವರ ಕಿರಿಯ ಸಹೋದರನಾಗಿ ಬಾಲಿವುಡ್ ಪ್ರಯಾಣವನ್ನು ಪ್ರಾರಂಭಿಸಿದ ರೋಹಿತ್ ಸರಾಫ್. ಪೂಜಾ ಅಪರ್ಣಾ ಕೊಲ್ಲೂರು ಈ ಚಿತ್ರವನ್ನ ಡೈರೆಕ್ಷನ್ ಮಾಡುತ್ತಿದ್ದಾರೆ.

