ಮುತ್ತು ತಂದ ಕುತ್ತು- ʻಟಾಕ್ಸಿಕ್ʼ ನಟಿ ಜೊತೆ ವೀರ್ ಪಹಾರಿಯಾ ಬ್ರೇಕಪ್
ಚಿತ್ರರಂಗದಲ್ಲಿ ಬ್ರೇಕಪ್, ಡಿವೋರ್ಸ್, ದೋಖಾ ಇವೆಲ್ಲವೂ ಕಾಮನ್. ಒಂದು ಮುತ್ತು ಪ್ರೀತಿಗೆ ಕುತ್ತು ತಂದಿರೋ ವಿಚಾರ ಬಾಲಿವುಡ್ನಲ್ಲಿ ಹಲ್ಚಲ್ ಎಬ್ಬಿಸಿದೆ. ಹೌದು.. ʻಟಾಕ್ಸಿಕ್’ (Toxic) ನಟಿ ತಾರಾ ಸುತಾರಿಯಾ (Tara Sutaria) ಮತ್ತು ನಟ ವೀರ್ ಪಹಾರಿಯಾ (Veer Pahariya) ಲವ್ಗೆ ಬ್ರೇಕ್ ಬಿದ್ದಿದೆ.

ಬಾಲಿವುಡ್ನ ಮುದ್ದಾದ ಜೋಡಿ ತಾರಾ ಮತ್ತು ವೀರ್ ನಡುವೆ ಸಂಬಂಧ ಸರಿಯಿಲ್ಲ ಎಂಬ ಮಾತು ಟಾಕ್ ಆಗ್ತಿದೆ. ಇದಕ್ಕೆ ಕಾರಣವಾಗಿದ್ದು, ಗಾಯಕ ಎ.ಪಿ ಧಿಲ್ಲೋನ್ ಜೊತೆಗಿನ ಆತ್ಮೀಯತೆ.

ಇತ್ತೀಚೆಗೆ ನಡೆದ ಎ.ಪಿ ಧಿಲ್ಲೋನ್ ಮ್ಯೂಸಿಕಲ್ ಕಾನ್ಸರ್ಟ್ನಲ್ಲಿ ಬಾಯ್ಫ್ರೆಂಡ್ ವೀರ್ ಜೊತೆ ತಾರಾ ಸುತಾರಿಯಾ ಭಾಗಿಯಾಗಿದ್ದರು. ಈ ವೇಳೆ, ವೇದಿಕೆಯಲ್ಲಿ ಎ.ಪಿ ಧಿಲ್ಲೋನ್ ಸಾಂಗ್ ಹಾಡುವಾಗ ತಾರಾ ಜೊತೆ ಆತ್ಮೀಯವಾಗಿ ವರ್ತಿಸಿದ್ದಾತೆ. ಧಿಲ್ಲೋನ್ ಜೊತೆ ನಟಿ ಹೆಜ್ಜೆ ಹಾಕುತ್ತಾ ಹಗ್ ಮಾಡಿದ್ದಾರೆ. ಆಗ ತಾರಾಗೆ ಧಿಲ್ಲೋನ್ ಮುತ್ತು ಕೊಟ್ಟಿದ್ದಾರೆ. ಇದನ್ನು ನೋಡಿರೋ ವೀರ್ ರಿಯಾಕ್ಷನ್ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗ್ತಿದೆ.
View this post on Instagram
ಧಿಲ್ಲೋನ್ ಜೊತೆಗಿನ ಆತ್ಮೀಯತೆ ನಟಿಯ ಸಂಬಂಧಕ್ಕೆ ಕುತ್ತು ಬಂದಿದೆ ಎನ್ನಲಾದ ಸುದ್ದಿ ಇದೀಗ ಸೋಷಿಯಲ್ ಮೀಡಿಯಾದಲ್ಲಿ ಚರ್ಚೆಗೆ ಗ್ರಾಸವಾಗಿದೆ. ಹಾಗಾದ್ರೆ ಈ ಸುದ್ದಿ ನಿಜನಾ ಎಂಬುದನ್ನು ತಾರಾ ಮತ್ತು ವೀರ್ ಪ್ರತಿಕ್ರಿಯೆ ನೀಡ್ತಾರಾ ಕಾದುನೋಡಬೇಕಿದೆ.

