ಸುದೀಪ್ ಪ್ರಶಂಸೆಗೆ ಯಶ್ ಸ್ವೀಟ್ ರಿಪ್ಲೈ

ಸುದೀಪ್ ಪ್ರಶಂಸೆಗೆ ಯಶ್ ಸ್ವೀಟ್ ರಿಪ್ಲೈ

ರಾಕಿಂಗ್ ಸ್ಟಾರ್ ಯಶ್ (Yash) ನಟನೆಯ ʻಟಾಕ್ಸಿಕ್’ ಚಿತ್ರದ (Toxic) ಟೀಸರ್ ಜ.8ರಂದು ರಿಲೀಸ್ ಆಗಿ ಗ್ಲೋಬಲ್ ಲೆವೆಲ್‌ನಲ್ಲಿ ಸದ್ದು ಮಾಡಿತ್ತು. ನಟ ಕಿಚ್ಚ ಸುದೀಪ್ ಸೇರಿದಂತೆ ಬಾಲಿವುಡ್ ಸ್ಟಾರ್‌ಗಳು ʻಟಾಕ್ಸಿಕ್’ ಟೀಸರ್‌ಗೆ ಮೆಚ್ಚುಗೆ ಸೂಚಿಸಿದ್ದರು. ಇದೀಗ ಸುದೀಪ್ ವಿಶ್ ಮಾಡಿರೋ ಪೋಸ್ಟ್‌ಗೆ ಯಶ್ ಸಖತ್ ಸ್ವೀಟ್ ಆಗಿ ರಿಪ್ಲೈ ಕೊಟ್ಟಿದ್ದಾರೆ. ಇದು ಫ್ಯಾನ್ಸ್‌ಗೆ ಖುಷಿ ಕೊಟ್ಟಿದೆ.

ಇತ್ತೀಚೆಗೆ ಯಶ್ ನಟನೆಯ ʻಟಾಕ್ಸಿಕ್’ ಚಿತ್ರದ ಟೀಸರ್ ಅನ್ನು ಸುದೀಪ್ ಎಕ್ಸ್ನಲ್ಲಿ ಹಂಚಿಕೊಂಡಿದ್ದರು. ಅಲೆಯ ವಿರುದ್ಧ ಈಜುವುದು ಅಷ್ಟು ಸುಲಭವಲ್ಲ. ಆದರೆ, ನೀವು ಅದನ್ನು ಮಾಡುತ್ತಿದ್ದೀರಿ. ನಿಮ್ಮ ಈ ಒಂದು ಹೊಸ ಹೆಜ್ಜೆ, ನಿಮ್ಮ ಗುರಿಯತ್ತ ತೆಗೆದುಕೊಂಡು ಹೋಗಿಲಿ ಅಂತ ತುಂಬು ಹೃದಯದಿಂದಲೇ ಕಿಚ್ಚ ಪೋಸ್ಟ್ ಮಾಡಿದ್ದರು.

ಇದಕ್ಕೆ ಯಶ್ ರಿಪ್ಲೇ ಮಾಡಿ, ಸುದೀಪ್‌ಗೆ ʻಧನ್ಯವಾದಗಳು ಸರ್’. ನಿಮ್ಮನ್ನು ಸೇರಿ ನಾನು ನಮ್ಮ ಸೀನಿಯರ್ಸ್ ಇಂದ ಕಲಿತ ಒಂದು ವಿಷಯ ಅಂದರೆ ಒಳ್ಳೆಯ ಸಿನಿಮಾ ಮಾಡುವುದು. ಅದಕ್ಕಾಗಿ ಪ್ರಾಮಾಣಿಕವಾಗಿ ಮತ್ತು ಧೈರ್ಯದಿಂದ ಶ್ರಮಿಸುವುದು ಎಂದು ಬರೆದುಕೊಂಡಿದ್ದಾರೆ. ಸುದೀಪ್ ಮತ್ತು ಯಶ್ ಬಾಂಧವ್ಯ ನೋಡಿ ಫ್ಯಾನ್ಸ್ ಖುಷಿಪಡ್ತಿದ್ದಾರೆ. ಈ ಇಬ್ಬರು ಸ್ಟಾರ್ ನಟರ ನಡುವಿನ ಬಾಂಧವ್ಯ ಸರಿಯಿಲ್ಲ ಎಂದು ಹಬ್ಬಿದ ಗಾಸಿಪ್‌ಗೆ ಬ್ರೇಕ್‌ ಬಿದ್ದಿದೆ.

ಅಂದಹಾಗೆ, ಯಶ್ ನಟನೆಯ ʻಟಾಕ್ಸಿಕ್ʼ ಸಿನಿಮಾ ಇದೇ ಮಾ.19ರಂದು ರಿಲೀಸ್ ಆಗಲಿದೆ. ಬಹುಭಾಷೆಗಳಲ್ಲಿ ಚಿತ್ರ ತೆರೆ ಕಾಣ್ತಿದೆ.

News Desk Sandalwood Times

error: Content is protected !!