ಕ್ಷಣ ಕ್ಷಣದ ಸಂಭ್ರಮವು ಮುತ್ತಾಗಿ ಪೋಣಿಸಲಿ- ಸುಹಾನಾಗೆ ಪತಿಯ ಲವ್ಲಿ ವಿಶ್

ಕ್ಷಣ ಕ್ಷಣದ ಸಂಭ್ರಮವು ಮುತ್ತಾಗಿ ಪೋಣಿಸಲಿ- ಸುಹಾನಾಗೆ ಪತಿಯ ಲವ್ಲಿ ವಿಶ್

ಗಾಯಕಿ ಸುಹಾನಾ ಸೈಯದ್‌ಗೆ (Suhana Syed) ಜನ್ಮದಿನದ‌ (ಜ.14) ಸಂಭ್ರಮ. ಈ ಹಿನ್ನೆಲೆ ಪತ್ನಿ ಸುಹಾನಾಗೆ ನಿತಿನ್ ಪ್ರೀತಿಯಿಂದ ಕವನ ಬರೆದು ವಿಶ್ ಮಾಡಿದ್ದಾರೆ. ಈ ಪೋಸ್ಟ್‌ ಅಭಿಮಾನಿಗಳ ಗಮನ ಸೆಳೆದಿದ್ದು, ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗ್ತಿದೆ.

ಸುಹಾನ ಪತಿ ಬರೆದ ಇನ್ಸ್ಟಾಗ್ರಾಂ ಪೋಸ್ಟ್‌ನಲ್ಲಿ,
ತೆರೆ ಏರಲಿ ತೆರೆ ಬೀಳಲಿ, ನಾಟಕ ಸಾಗುತಲಿರಲಿ, ಕ್ಷಣ ಕ್ಷಣದ ಸಂಭ್ರಮವು ಮುತ್ತಾಗಿ ಪೋಣಿಸಲಿ. ಸೋಲು-ಗೆಲುವಿನ ಪಾತ್ರಗಳು ನೂರಾರು ಬರಲಿ, ನಿನ್ನ ನಗುವಿನ ಅಲೆಗಳು ದಡವ ಸೇರಲಿ. ಹಸಿರಾಗಲಿ ನಿನ್ನ ಬಾಳು, ಸಿಹಿಯಾಗಲಿ ನಿನ್ನ ನುಡಿ, ನಗುತಾ ಬಾಳು ನೀ ಸದಾ, ಹೂವಾಗಿ ಅರಳಲಿ ನಿನ್ನ ಹಾದಿ. ಬಾಳ ಪಯಣದಲಿ ನೀನು ಸೂರ್ಯನಂತೆ ಪ್ರಜ್ವಲಿಸು, ನೂರಾರು ಕನಸುಗಳನ್ನು ನನಸಾಗಿಸಿ ನೀ ಮೆರೆಸು. ಸಂತಸದಿ ತುಂಬಿರಲಿ ನಿನ್ನ ಮನ, ಉಲ್ಲಾಸದಿ ಪ್ರತಿಕ್ಷಣ. ಹುಟ್ಟುಹಬ್ಬದ ಶುಭಾಶಯಗಳು ಗುಬ್ಬಿ ಎಂದು ರೊಮ್ಯಾಂಟಿಕ್ ಆಗಿ ವಿಶ್ ಮಾಡಿದ್ದಾರೆ. ಈ ಮೂಲಕ ಪತ್ನಿಗೆ ಕರೆಯೋ ʻಗುಬ್ಬಿ’ ನೀಕ್‌ನೇಮ್ ರಿವೀಲ್ ಮಾಡಿದ್ದಾರೆ.

 

View this post on Instagram

 

A post shared by Nithin Shivansh (@nithin__shivansh)

ಕಳೆದ ವರ್ಷ ನಿತಿನ್ ಶಿವಾಂಶ್ (Nithin Shivansh) ಅವರನ್ನು ಅಕ್ಟೋಬರ್ 17ರಂದು ಸುಹಾನಾ ಮದುವೆಯಾದರು. ಹಲವು ವರ್ಷಗಳ ಪ್ರೀತಿಗೆ ಮದುವೆಯ ಮುದ್ರೆ ಒತ್ತಿದ್ದರು. ಕುವೆಂಪು ಮಂತ್ರ ಮಾಂಗಲ್ಯದಲ್ಲಿ ಸುಹಾನ ಮತ್ತು ನಿತಿನ್ ಮದುವೆಯಾದರು.

News Desk Sandalwood Times

error: Content is protected !!