‘ಮಸ್ತ್ ಮಲೈಕಾ’ ಬಳಿಕ ʼಅರಗಿಣಿಯೇ’ ಎಂದು ಕಂಠ ಕುಣಿಸಿದ ಸುದೀಪ್ ಪುತ್ರಿ

‘ಮಸ್ತ್ ಮಲೈಕಾ’ ಬಳಿಕ ʼಅರಗಿಣಿಯೇ’ ಎಂದು ಕಂಠ ಕುಣಿಸಿದ ಸುದೀಪ್ ಪುತ್ರಿ

ಕಿಚ್ಚ ಸುದೀಪ್ (Kichcha Sudeep) ಸೋದರಳಿಯ ಸಂಚಿತ್ ಸಂಜೀವ್ ನಟನೆಯ ‘ಮ್ಯಾಂಗೋ ಪಚ್ಚ’ ಸಿನಿಮಾದ (Mango Pachcha) ಮೊದಲ ಹಾಡು ರಿಲೀಸ್ ಆಗಿದೆ. ಈ ಚಿತ್ರದಲ್ಲಿ ಸುದೀಪ್ ಪುತ್ರಿ ಸಾನ್ವಿ ‘ಅರಗಿಣಿಯೇ’ (Araginiye) ಹಾಡನ್ನು ಹಾಡಿದ್ದಾರೆ.

 

View this post on Instagram

 

A post shared by Sanchith Sanjeev (@sanchithsanjeev)

‘ಮಾರ್ಕ್’ ಚಿತ್ರದಲ್ಲಿ ಮಸ್ತ್ ಮಲೈಕಾ ಎಂದು ಹಾಡಿ ಸಂಗೀತ ಪ್ರಿಯರನ್ನು ರಂಜಿಸಿದ್ದ ಸಾನ್ವಿ ಈಗ `ಮ್ಯಾಂಗೋ ಪಚ್ಚ’ ಚಿತ್ರದಲ್ಲಿನ ‘ಅರಗಿಣಿಯೇ’ ಹಾಡನ್ನು ಹಾಡಿದ್ದಾರೆ. ಧನಂಜಯ ರಂಜನ್ ಈ ಹಾಡಿಗೆ ಸಾಹಿತ್ಯ ಬರೆದಿದ್ದಾರೆ. ಚರಣ್ ರಾಜ್ ಸಂಗೀತ ಸಂಯೋಜನೆ ಕೇಳುಗರಿಗೆ ಖುಷಿ ಕೊಟ್ಟಿದೆ. ಈ ಸಾಂಗ್‌ಗೆ ಅಭಿಮಾನಿಗಳಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ.

 

View this post on Instagram

 

A post shared by Sanchith Sanjeev (@sanchithsanjeev)

ಇನ್ನೂ ‘ಮ್ಯಾಂಗೋ ಪಚ್ಚ’ ಸಂಜಿತ್ (Sanchith Sanjeev) ಮತ್ತು ಕಾಜಲ್ ಕುಂದರ್ ಜೊತೆಯಾಗಿ ನಟಿಸಿದ್ದಾರೆ. ‘ಅರಗಿಣಿಯೇ’ ಹಾಡು ಸಖತ್ ರೊಮ್ಯಾಂಟಿಕ್ ಆಗಿ ಮೂಡಿ ಬಂದಿದೆ. ಡೆಬ್ಯೂ ಸಿನಿಮಾ ಆಗಿದ್ರು ಕೂಡ ಸಂಜಿತ್ ಲುಕ್ ಮತ್ತು ಸಿನಿಮಾ ಮೇಲೆ ಸಾಕಷ್ಟು ತಯಾರಿ ಮಾಡಿಕೊಂಡೇ ಅಖಾಡಕ್ಕೆ ಇಳಿದಿದ್ದಾರೆ.

ಈ ಚಿತ್ರವನ್ನು ವಿವೇಕ್ ನಿರ್ದೇಶನ ಮಾಡಿದ್ದಾರೆ. ಕೆಆರ್‌ಜಿ ಸ್ಟುಡಿಯೋ ಜೊತೆಗೂಡಿ ಸುದೀಪ್ ಪತ್ನಿ ಪ್ರಿಯಾ ಬಂಡವಾಳ ಹೂಡಿದ್ದಾರೆ. ಸದ್ಯದಲ್ಲೇ ಈ ಚಿತ್ರದ ರಿಲೀಸ್ ಬಗ್ಗೆ ಚಿತ್ರತಂಡ ಅಪ್‌ಡೇಟ್ ಕೊಡಲಿದೆ.

News Desk Sandalwood Times

error: Content is protected !!