ಮತ್ತೆ ಕನ್ನಡಕ್ಕೆ ಬಂದ ಜಿಂಕೆಮರಿ- ಉಗ್ರಾವತಾರದಲ್ಲಿ ನಂದಿತಾ ಶ್ವೇತಾ

ಮತ್ತೆ ಕನ್ನಡಕ್ಕೆ ಬಂದ ಜಿಂಕೆಮರಿ- ಉಗ್ರಾವತಾರದಲ್ಲಿ ನಂದಿತಾ ಶ್ವೇತಾ

ʻನಂದ ಲವ್ಸ್ ನಂದಿತಾ’ (Nanda Loves Nandita) ಖ್ಯಾತಿಯ ನಂದಿತಾ ಶ್ವೇತಾ (Nandita Shwetha) ಮತ್ತೆ ಕನ್ನಡಕ್ಕೆ ಕಮ್ ಬ್ಯಾಕ್ ಆಗಿದ್ದಾರೆ. ಬಹುವರ್ಷಗಳ ನಂತರ ವಿಭಿನ್ನ ಪಾತ್ರದ ಮೂಲಕ ಕನ್ನಡಿಗರನ್ನು ರಂಜಿಸಲು ನಟಿ ಸಜ್ಜಾಗಿದ್ದಾರೆ. ನಂದಿತಾ ನಟನೆಯ ʻಬೆನ್ನಿʼ ಚಿತ್ರದ ಮೋಷನ್ ಪೋಸ್ಟರ್ ರಿಲೀಸ್ ಆಗಿದೆ. ಇದನ್ನೂ ಓದಿ: ಸಂಕ್ರಾಂತಿಯಂದು ಫ್ಯಾನ್ಸ್‌ಗೆ ಗುಡ್ ನ್ಯೂಸ್ ಕೊಟ್ಟ ಚೈತ್ರಾ ಕುಂದಾಪುರ

ಸೌತ್ ಸಿನಿಮಾಗಳಲ್ಲಿ ಬ್ಯಸಿಯಿದ್ದ ನಟಿ, ಕನ್ನಡದ ʻಬೆನ್ನಿ’ (Benny) ಕಥೆಗೆ ಓಕೆ ಎಂದಿದ್ದಾರೆ. ʻಪೆಪೆ’ ಡೈರೆಕ್ಟರ್ ಶ್ರೀಲೇಶ್ ಎಸ್. ನಾಯರ್ ನಿರ್ದೇಶನದ ʻಬೆನ್ನಿ’ ಚಿತ್ರದಲ್ಲಿ ರಕ್ತಸಿಕ್ತವಾದ ಮಚ್ಚು ಹಿಡಿದು ಪಕ್ಕಾ ವೈಲೆಂಟ್ ಅವತಾರದಲ್ಲಿ ಕಾಣಿಸಿಕೊಂಡಿದ್ದಾರೆ. ನಟಿಯ ಉಗ್ರಾವತಾರ ನೋಡಿ ಅಭಿಮಾನಿಗಳು ದಂಗಾಗಿದ್ದಾರೆ. ಕಮ್ ಬ್ಯಾಕ್ ಅಂದ್ರೆ ಇದಪ್ಪಾ ಎಂದು ನಟಿಯ ಪೋಸ್ಟರ್ ಲುಕ್ ಬಗ್ಗೆ ಮೆಚ್ಚುಗೆ ಸೂಚಿಸುತ್ತಿದ್ದಾರೆ.

ರಾಮೇನಹಳ್ಳಿ ಜಗನ್ನಾಥ್ ನಿರ್ಮಾಣದಲ್ಲಿ `ಬೆನ್ನಿ’ ಚಿತ್ರದ ಮೂಡಿ ಬಂದಿದೆ. ಈ ಚಿತ್ರಕ್ಕೆ ಸಚಿನ್ ಬಸ್ರೂರ್ ಸಂಗೀತ ನಿರ್ದೇಶನ ಮಾಡಿದ್ದಾರೆ. ಈ ಚಿತ್ರ ಕನ್ನಡ, ತೆಲುಗು, ತಮಿಳು ಮತ್ತು ಮಲಯಾಳಂನಲ್ಲಿ ಮೂಡಿ ಬರಲಿದೆ.

 

View this post on Instagram

 

A post shared by Nandita Swetha (@nanditaswethaa)

ನಿರೂಪಕಿಯಾಗಿ ಕಾರ್ಯ ನಿರ್ವಹಿಸುತ್ತಿದ್ದ ನಂದಿತಾ 2008ರಲ್ಲಿ ಲೂಸ್ ಮಾದ ಯೋಗಿ ನಟನೆಯ ‘ನಂದ ಲವ್ಸ್ ನಂದಿತಾ’ ಚಿತ್ರಕ್ಕೆ ನಾಯಕಿಯಾಗಿ ಎಂಟ್ರಿ ಕೊಟ್ಟರು. ಆ ನಂತರ ದಕ್ಷಿಣದ ಸಿನಿಮಾದಲ್ಲಿ ಬ್ಯುಸಿಯಾದರು.

News Desk Sandalwood Times

error: Content is protected !!