ಬಾಲಿವುಡ್ ಸಿನಿಮಾಗಾಗಿ ತಾವಾಡಿದ ಮಾತನ್ನೇ ಮುರಿದ ಸಾಯಿ ಪಲ್ಲವಿ

ಬಾಲಿವುಡ್ ಸಿನಿಮಾಗಾಗಿ ತಾವಾಡಿದ ಮಾತನ್ನೇ ಮುರಿದ ಸಾಯಿ ಪಲ್ಲವಿ

ಸೌತ್‌ನ ಸ್ಟಾರ್ ನಟಿ ಸಾಯಿ ಪಲ್ಲವಿ (Sai Pallavi) ನಟನೆಯ ‘ಏಕ್ ದಿನ್’ (Ek Din) ಚಿತ್ರದ ಟೀಸರ್ ರಿಲೀಸ್ ಆಗಿದೆ. ಈ ಮೂಲಕ ಆಮೀರ್ ಖಾನ್ (Aamir Khan) ಪುತ್ರನಿಗೆ ನಾಯಕಿಯಾಗಿ ಬಾಲಿವುಡ್‌ಗೆ ಪಾದಾರ್ಪಣೆ ಮಾಡ್ತಿದ್ದಾರೆ. ಈ ಮೂಲಕ ಇಷ್ಟು ವರ್ಷ ರೂಡಿಸಿಕೊಂಡು ಬಂದ ಸಂಪ್ರದಾಯವೊಂದನ್ನು ನಟಿ ಬ್ರೇಕ್ ಮಾಡಿದ್ದಾರೆ.

ಸಾಯಿ ಪಲ್ಲವಿ ನಟಿಸಿರುವ ಮೊದಲ ಬಾಲಿವುಡ್ ಸಿನಿಮಾ ಮೇ 1ರಂದು ರಿಲೀಸ್‌ಗೆ ಸಜ್ಜಾಗಿದೆ. ಆಮೀರ್ ಪುತ್ರ ಝುನೈದ್ ಖಾನ್‌ಗೆ (Junaid Khan) ನಾಯಕಿಯಾಗಿ ಸಾಯಿ ಪಲ್ಲವಿ ನಟಿಸಿದ್ದಾರೆ. ‘ಏಕ್ ದಿನ್’ ಚಿತ್ರವು ಅಪ್ಪಟ ಪ್ರೇಮಕಥೆ ಹೊಂದಿರುವ ಸ್ಟೋರಿಯಾಗಿದೆ. ಇಬ್ಬರೂ ಭಾರತೀಯರು, ಜಪಾನ್‌ನಲ್ಲಿ ಪರಸ್ಪರ ಪ್ರೀತಿಗೆ ಬೀಳುವ ಕತೆ ಇದಾಗಿದೆ. ಈ ಚಿತ್ರದ ಬಹುತೇಕ ಶೂಟಿಂಗ್ ಜಪಾನ್‌ನಲ್ಲಿಯೇ ನಡೆದಿದೆ.

 

ಟೀಸರ್‌ನಲ್ಲಿ ಸಾಯಿ ಪಲ್ಲವಿ ಮತ್ತು ಝುನೈದ್ ಜೋಡಿ, ಇಬ್ಬರ ಕ್ಯೂಟ್ ಸಂಭಾಷಣೆ ಇವೆಲ್ಲವೂ ಪ್ರೇಕ್ಷಕರಿಗೆ ಖುಷಿ ಕೊಟ್ಟಿದೆ. ಸುನೀಲ್ ಪಾಂಡೆ ನಿರ್ದೇಶನ ಮಾಡಿದ್ದಾರೆ.

ಈ ಹಿಂದೆ ರಿಮೇಕ್ ಸಿನಿಮಾಗಳಲ್ಲಿ ತಾವು ನಟಿಸೋದಿಲ್ಲ ಎಂದು ಕಾರ್ಯಕ್ರಮವೊಂದರಲ್ಲಿ ಹೇಳಿಕೊಂಡಿದ್ದರು. ರಿಮೇಕ್ ಚಿತ್ರ ಎಂಬ ಕಾರಣಕ್ಕೆ ಮೆಗಾಸ್ಟಾರ್ ಚಿರಂಜೀವಿ ಜೊತೆ ನಟಿಸುವ ಅವಕಾಶವನ್ನು ನಟಿ ರಿಜೆಕ್ಟ್ ಮಾಡಿದ್ದರು. ಆದರೆ ಈಗ ‘ಏಕ್ ದಿನ್‌ʼ ಚಿತ್ರವು ಥಾಯ್ ಭಾಷೆಯ `ಒನ್ ಡೇ’ ಚಿತ್ರದ ರಿಮೇಕ್ ಆಗಿದೆ. ಈ ಮೂಲಕ ರಿಮೇಕ್ ಸಿನಿಮಾದಲ್ಲಿ ನಟಿಸೋಲ್ಲ ಎಂದಿದ್ದ ನಟಿ, ಈಗ ತಾವಾಡಿದ ಮಾತನ್ನೇ ಬ್ರೇಕ್ ಮಾಡಿದ್ದಾರೆ.

News Desk Sandalwood Times

error: Content is protected !!