BBK12: ನನ್ನ ಮದುವೆಗೆ ಏನಾದರೂ ತೊಂದರೆ ಆದ್ರೆ ಗಿಲ್ಲಿನೇ ಕಾರಣ- ಕಾವ್ಯ ಎಚ್ಚರಿಕೆ

BBK12: ನನ್ನ ಮದುವೆಗೆ ಏನಾದರೂ ತೊಂದರೆ ಆದ್ರೆ ಗಿಲ್ಲಿನೇ ಕಾರಣ- ಕಾವ್ಯ ಎಚ್ಚರಿಕೆ

‘ಬಿಗ್ ಬಾಸ್ ಕನ್ನಡ 12’ರ (Bigg Boss Kannada 12) ಸೀಸನ್ ಇನ್ನೇನು ಜ.18ರಂದು ಕೊನೆಗೊಳ್ಳಲಿದೆ. ಇದರ ನಡುವೆ ಗಿಲ್ಲಿ ನಟನಿಗೆ ಕಾವ್ಯ (Kavya Shaiva) ಎಚ್ಚರಿಕೆಯೊಂದನ್ನು ಕೊಟ್ಟಿದ್ದಾರೆ. ನನ್ನ ಮದುವೆಗೆ ಏನಾದರೂ ತೊಂದರೆ ಆದರೆ ಅದಕ್ಕೆ ಗಿಲ್ಲಿನೇ (Gilli) ಕಾರಣ ಎಂದಿದ್ದಾರೆ.

‘ಬಿಗ್’ ಮನೆಯಲ್ಲಿ ಗಿಲ್ಲಿ ಮತ್ತು ಕಾವ್ಯ ಶೈವಾ ನಡುವೆ ಉತ್ತಮ ಬಾಂಧವ್ಯವಿದೆ. ‘ಕಾವು ಕಾವು’ ಅಂತ ಆಗಾಗ ಕ್ವಾಟ್ಲೆ ಕೊಡೋ ಗಿಲ್ಲಿಗೆ ಕಾವ್ಯ ವಾರ್ನ್ ಮಾಡಿದ್ದಾರೆ. ಸೋಫಾದಲ್ಲಿ ಗಿಲ್ಲಿ, ಕಾವ್ಯ, ರಘು, ರಕ್ಷಿತಾ ಮಾತನಾಡುತ್ತಾ ಕುಳಿತಿರುತ್ತಾರೆ. ಆಗ ಕಾವ್ಯನ ನೋಡಿ ಗಿಲ್ಲಿ ಕಣ್ ಹೊಡೆಯುತ್ತಾರೆ. ಈ ವೇಳೆ ರಘು ಬಳಿ ಕಾವ್ಯ ಮಾತನಾಡುತ್ತಾ, ನನ್ನ ಮದುವೆಗೆ ಏನಾದರೂ ತೊಂದರೆ ಆದ್ರೆ ಗಿಲ್ಲಿನೇ ಕಾರಣ ಎಂದಿದ್ದಾರೆ.

ಕಾವ್ಯ ಮಾತಿಗೆ ನಾನ್ ಏನ್ ಮಾಡಿದೆ ನಿನಗೆ ಎಂದಿದ್ದಾರೆ. ಅದಕ್ಕೆ ನಾನ್ ಬೇಡ ಅಂದ್ರು ಕಣ್ ಹೊಡಿತಿಯಾ, ನನ್ನಾ ರೇಗಿಸ್ತಿಯಾ ಎಂದಿದ್ದಾರೆ. ಆಗ ನಾನು ಬೇಡ ಅಂದ್ರೆ ತಾನೇ ನಿನಗೆ ಸಮಸ್ಯೆ ಎಂದ ಗಿಲ್ಲಿಗೆ ನೀನ್ ಎಂತಹ ಕಲಾಕರ್ ಅಂದ್ರೆ ಎಂದು ಪ್ರತಿಯುತ್ತರ ನೀಡಿದ್ದಾರೆ ಕಾವ್ಯ. ಇದು ಗಿಲ್ಲಿ ಅಂಡ್ ಕಾವ್ಯ ಫ್ಯಾನ್ಸ್‌ಗೆ ಖುಷಿ ಕೊಟ್ಟಿದೆ. ಇಬ್ಬರ ಸಂಭಾಷಣೆಯ ವಿಡಿಯೋ ವೈರಲ್ ಆಗಿದೆ.

ಅಂದಹಾಗೆ, ಗಿಲ್ಲಿ, ಕಾವ್ಯ, ರಘು, ರಕ್ಷಿತಾ, ಅಶ್ವಿನಿ, ಧನುಷ್ ನಡುವೆ ‘ಬಿಗ್ ಬಾಸ್’ ಪಟ್ಟಕ್ಕಾಗಿ ಪೈಪೋಟಿ ನಡೆಯುತ್ತಿದೆ. ಯಾರಿಗೆ ಗೆಲುವಿನ ವಿಜಯಲಕ್ಷ್ಮಿ ಒಲಿಯುತ್ತಾಳೆ ಎಂದು ಕಾದುನೋಡಬೇಕಿದೆ.

News Desk Sandalwood Times

Related articles

error: Content is protected !!