BBK12: ಗಿಲ್ಲಿನೇ ಗೆಲ್ಲೋದು 100%- ಭವಿಷ್ಯ ನುಡಿದ ದೊಡ್ಮನೆ ಕಿಂಗ್ ಶಿವಣ್ಣ
ಕನ್ನಡ ರಿಯಾಲಿಟಿ ಶೋಗಳ ದೊಡ್ಡಪ್ಪ ಎನಿಸಿಕೊಂಡಿರೋ ಬಿಗ್ ಬಾಸ್ ಸೀಸನ್ 12 (Bigg Boss Kannada) ಫಿನಾಲೆ ಹಂತಕ್ಕೆ ತಲುಪಿದೆ. ಟಾಪ್ ಫೈನಾಲಿಸ್ಟ್ ಗಳ ಮಧ್ಯೆ ಭಾರೀ ಪೈಪೋಟಿ ಏರ್ಪಡಾಗಿರುವಾಗಲೇ ಕರುನಾಡ ಚಕ್ರವರ್ತಿ ಡಾ.ಶಿವರಾಜ್ ಕುಮಾರ್ (Shivarajkumar) ಆಶ್ಚರ್ಯಕರವಾಗಿ ಗಿಲ್ಲಿನಟಗೆ ಜೈ ಅಂತಿದಾರೆ.

‘ಬಿಗ್ ಬಾಸ್ ಸೀಸನ್ 12’ರ ವಿನ್ನರ್ ಯಾರು ಎಂಬ ಪ್ರಶ್ನೆಗೆ ಎಲ್ಲೆಡೆ ಒಂದೇ ಕಾಮನ್ ಉತ್ತರ ಕೇಳಿ ಬರುತ್ತಿದೆ. ತಮ್ಮ ಹಾಸ್ಯಪ್ರಜ್ಞೆ ಹಾಗೂ ಸ್ಪರ್ಧೆಯ ಶೈಲಿಯಿಂದ ಗಿಲ್ಲಿ (Gilli) ಪಕ್ಕಾ ಬಿಗ್ ಬಾಸ್ ಟ್ರೋಫಿ ಎತ್ತುತ್ತಾರೆ ಎಂಬ ಅಭಿಪ್ರಾಯ ವೀಕ್ಷಕರಿಂದ ಕಾಣಿಸ್ತಿದೆ. ಬಿಗ್ ಬಾಸ್ ಮುಗಿಯೋಕೆ 2 ದಿನ ಬಾಕಿಯಿರುವಾಗ್ಲೇ ಡಾ. ಶಿವರಾಜ್ ಕುಮಾರ್ ಗಿಲ್ಲಿಗೆ ಥಮ್ಸ್ ಅಪ್ ಮಾಡಿದ್ದಾರೆ.

ಶಿವಣ್ಣನಿಗೆ ಗಿಲ್ಲಿನಟ ‘ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್’ನಿಂದಲೂ ಪರಿಚಯ. ಅಭಿಮಾನಿಯೊಬ್ಬರ ಹೋಟೆಲ್ ಉದ್ಘಾಟನೆಗೆ ಬಂದಿದ್ದ ಶಿವಣ್ಣ, ಗಿಲ್ಲಿ ಗೆಲ್ಲೋದು 100% ಅಂತ ಟೇಬಲ್ ಗುದ್ದಿ ಹೇಳಿದ್ದಾರೆ. ಅಲ್ಲದೇ, ‘ಗಿಲ್ಲಿ ಹೃದಯ ತುಂಬಾ ಸ್ವಚ್ಛ, ಗಿಲ್ಲಿ ಯಾವತ್ತೂ ಫೇಕ್ ಮಾಡಿಲ್ಲ. ಹಾಗಾಗಿ, ನನ್ನ ವಿಶಸ್ ಗಿಲ್ಲಿಗೆ’ ಅಂತ ಆಲ್ ದಿ ಬೆಸ್ಟ್ ಹೇಳಿದ್ರು.
ಬಿಗ್ ಬಾಸ್ ಬಗ್ಗೆ ಫೈನಲ್ ಬಗ್ಗೆ ಶಿವಣ್ಣ ನುಡಿದಿರೋ ಭವಿಷ್ಯ ಕೇಳಿ ಗಿಲ್ಲಿ ಫ್ಯಾನ್ಸ್ ಥ್ರಿಲ್ ಆಗಿದ್ದಾರೆ. ಶಿವಣ್ಣನ ವಿಶೇಷ ಪ್ರೀತಿ ಗಿಲ್ಲಿಗೆ ಆನೆಬಲ ಕೊಟ್ಟಿದೆ. ಬಿಗ್ ಬಾಸ್ ಸೀಸನ್-12ನಲ್ಲಿ ಫೈನಲ್ ಓಟದಲ್ಲಿರೋ ಅಶ್ವಿನಿ ಗೌಡ, ಧನುಷ್, ರಘು, ರಕ್ಷಿತಾ ಹಾಗೂ ಕಾವ್ಯರನ್ನ ಬೀಟ್ ಮಾಡಿ ಗಿಲ್ಲಿ ಕಪ್ ಎತ್ತುತ್ತಾರ.? ಎಲ್ಲರ ಕುತೂಹಲಗಳಿಗೆ 2 ದಿನದಲ್ಲಿ ಉತ್ತರ ಸಿಗುತ್ತೆ.

