‘ಹುಬ್ಬಳ್ಳಿ ಹಂಟರ್ಸ್’ ಕಥೆ ಹೇಳಲು ಸಜ್ಜಾದ ‘ಬೆಲ್ ಬಾಟಂ’ ನಿರ್ಮಾಪಕ

‘ಹುಬ್ಬಳ್ಳಿ ಹಂಟರ್ಸ್’ ಕಥೆ ಹೇಳಲು ಸಜ್ಜಾದ ‘ಬೆಲ್ ಬಾಟಂ’ ನಿರ್ಮಾಪಕ

ರಿಷಬ್ ಶೆಟ್ಟಿ ನಟಿಸಿದ್ದ ʼಬೆಲ್ ಬಾಟಂ’ ಚಿತ್ರದ ನಿರ್ಮಾಪಕ ಸಂತೋಷ್ ಕುಮಾರ್ ಕೆ.ಸಿ ಈಗ ಹುಬ್ಬಳ್ಳಿ ಹಂಟರ್ಸ್ ಕಥೆ ಹೇಳೋಕೆ ಸಜ್ಜಾಗಿದ್ದಾರೆ. 7 ವರ್ಷಗಳ ಬಳಿಕ ಹೊಸ ಬಗೆಯ ಕಥೆ ಹೇಳೋಕೆ ರೆಡಿಯಾಗಿದ್ದಾರೆ.

ʼಹುಬ್ಬಳ್ಳಿ ಹಂಟರ್ಸ್’ ಚಿತ್ರದ (Hubli Hunters) ಕಥೆಗೆ ʼಎಡಗೈ ಅಪಘಾತಕ್ಕೆ ಕಾರಣ’ ಚಿತ್ರ ಖ್ಯಾತಿಯ ಡೈರೆಕ್ಟರ್ ಸಮರ್ಥ್ ಬಿ.ಕಡಕೋಳ ಆ್ಯಕ್ಷನ್ ಕಟ್ ಹೇಳಲಿದ್ದಾರೆ. ಅವರಿಗೆ ಸಂತೋಷ್ ಕುಮಾರ್ ಸಾಥ್ ನೀಡ್ತಿದ್ದಾರೆ. ಈ ಸಿನಿಮಾಗೆ ʼಕಾಂತಾರ’ ನಟ ಪ್ರಮೋದ್ ಶೆಟ್ಟಿ (Pramod Shetty) ನಾಯಕನಾಗಿದ್ದು, ಅವರಿಗೆ ʼಮಹಾನಟಿ’ ಖ್ಯಾತಿಯ ಧನ್ಯಶ್ರೀ ಸುಜಿತ್ ಜೊತೆಯಾಗಿದ್ದಾರೆ.

ʼಹುಬ್ಬಳ್ಳಿ ಹಂಟರ್ಸ್’ ಟೈಟಲ್‌ಗೆ ತಕ್ಕಂತೆ ಇದು ಉತ್ತರ ಕರ್ನಾಟಕ ಭಾಗದ ಕಥೆ ಎಂದು ಚಿತ್ರತಂಡ ಹೇಳಿದೆ. ಸಮರ್ಥ್ ಕಥೆ ಬರೆದು ನಿರ್ದೇಶನ ಮಾಡುತ್ತಿದ್ದಾರೆ. ಅಭಿಮನ್ಯು ಸದಾನಂದನ್ ಅವರು ಈ ಸಿನಿಮಾಗೆ ಛಾಯಾಗ್ರಹಣ ಮಾಡಲಿದ್ದಾರೆ. ಇದೇ ಜ.26 ಶೂಟಿಂಗ್ ಶುರುವಾಗಲಿದೆ.

News Desk Sandalwood Times

error: Content is protected !!