ಮದುವೆ ಬಗ್ಗೆ ಸಿಹಿಸುದ್ದಿ ಕೊಟ್ರು ʼನಂದಗೋಕುಲʼ ಸೀರಿಯಲ್‌ ನಟಿ

ಮದುವೆ ಬಗ್ಗೆ ಸಿಹಿಸುದ್ದಿ ಕೊಟ್ರು ʼನಂದಗೋಕುಲʼ ಸೀರಿಯಲ್‌ ನಟಿ

ಟಿವಿ ಲೋಕದ ಚೆಂದದ ನಟಿ, ʻನಂದಗೋಕುಲ’ ಸೀರಿಯಲ್ (Nandagokula) ಖ್ಯಾತಿಯ ರಕ್ಷಾ ಅಲಿಯಾಸ್ ಕೃಷ್ಣಪ್ರಿಯಾ ಭಟ್ (Krishnapriya Bhat) ಹಸೆಮಣೆ ಏರೋಕೆ ರೆಡಿಯಾಗಿದ್ದಾರೆ. ಈ ಮೂಲಕ ಫ್ಯಾನ್ಸ್‌ಗೆ ಗುಡ್ ನ್ಯೂಸ್ ಕೊಟ್ಟಿದ್ದಾರೆ.‌

 

View this post on Instagram

 

A post shared by KP🤍 (@krishnapriya.bhat)

ʻನಂದಗೋಕುಲ’ ಸೀರಿಯಲ್ ಮೂಲಕ ಕರ್ನಾಟಕದ ಮನೆ ಮಾತಾಗಿರೋ ಕೃಷ್ಣಪ್ರಿಯಾ ಮದುವೆಗೆ ಸಜ್ಜಾಗಿದ್ದಾರೆ. ಕಳೆದ ವರ್ಷವೇ ನಟಿಗೆ ನಿಶ್ಚಿತಾರ್ಥ ನೆರವೇರಿತ್ತು. ಇದೀಗ ಬಾಲ್ಯದ ಗೆಳೆಯ ಅಮೋಘ್ ಜೊತೆ ಫೆ.6ರಂದು ಸಪ್ತಪದಿ ತುಳಿಯಲಿದ್ದಾರೆ.

 

View this post on Instagram

 

A post shared by KP🤍 (@krishnapriya.bhat)

ನಟನೆ ಜೊತೆ ಎಂಬಿಎ ಓದುತ್ತಿರೋ ಕೃಷ್ಣಪ್ರಿಯಾ ಅವರ ಭಾವಿ ಪತಿ ಅಮೋಘ್ ಖಾಸಗಿ ಕಂಪನಿಯೊಂದರಲ್ಲಿ ಇಂಜಿನಿಯರ್ ಆಗಿದ್ದಾರೆ. ಮನೆಯವರ ನಿಶ್ಚಯಿಸಿದ ಮದುವೆ ಇದಾಗಿದೆ. ನಟಿಯ ಹುಟ್ಟೂರು ಬೆಳ್ತಂಡಿಯ ನಾರಾವಿಯಲ್ಲಿ ವಿವಾಹ ಜರುಗಲಿದೆ.

ಇನ್ನೂ ನಟನೆಯ ವಿಚಾರಕ್ಕೆ ಬರೋದಾದ್ರೆ ಮದುವೆಯ ಬಳಿಕವೂ ಸೀರಿಯಲ್ ಮಾಡೋದಾಗಿ ಹೇಳಿದ್ದಾರೆ. ನಂದಗೋಕುಲದ ನಂದನ ಕೊನೆ ಮಗಳು ರಿಯಲ್ ಲೈಫ್‌ನಲ್ಲಿ ಹಸೆಮಣೆ ಏರೋಕೆ ಸಜ್ಜಾಗಿದ್ದಾರೆ.

News Desk Sandalwood Times

error: Content is protected !!