‘ಸಂಘರ್ಷ’ ಸೀರಿಯಲ್ ನಟಿ ತೇಜಸ್ವಿನಿ, ವಿರಾಟ್ ಪ್ರೀ-ವೆಡ್ಡಿಂಗ್ ಫೋಟೋಶೂಟ್

‘ಸಂಘರ್ಷ’ ಸೀರಿಯಲ್ ನಟಿ ತೇಜಸ್ವಿನಿ, ವಿರಾಟ್ ಪ್ರೀ-ವೆಡ್ಡಿಂಗ್ ಫೋಟೋಶೂಟ್

ಕಿರುತೆರೆ ನಟಿ ತೇಜಸ್ವಿನಿ ಆಚಾರ್‌ (Tejaswini Achar) ದಾಂಪತ್ಯ ಜೀವನಕ್ಕೆ (Wedding) ಕಾಲಿಡಲು ಸಜ್ಜಾಗಿದ್ದಾರೆ. ಇಬ್ಬರ ಸುಂದರ ಪ್ರೀ-ವೆಡ್ಡಿಂಗ್ ಫೋಟೋಶೂಟ್ ಈಗ ನೋಡುಗರ ಗಮನ ಸೆಳೆಯುತ್ತಿದೆ.

‘ಸಂಘರ್ಷ’ ಧಾರಾವಾಹಿ (Sangarsha Serial) ಮೂಲಕ ಪರಿಚಯವಾದ ಜೋಡಿ ತೇಜಸ್ವಿನಿ ಆಚಾರ್ ಮತ್ತು ವಿರಾಟ್‌ ವತ್ಸಲ್.

ವರ್ಷಗಳ ಕಾಲ ಒಟ್ಟಿಗೆ ಕೆಲಸ ಮಾಡಿದ್ದರು. ಸ್ನೇಹಿತರಾಗಿದ್ದ ಇಬ್ಬರ ನಡುವೆ ಪ್ರೇಮಾಂಕುರವಾಗೋಕೆ ಹೆಚ್ಚು ಸಮಯ ಹಿಡಿಯಲಿಲ್ಲ.

ಸದ್ಯ ಮನೆಯವರ ಸಮ್ಮತಿಯೊಂದಿಗೆ ದಾಂಪತ್ಯ ಜೀವನಕ್ಕೆ ಕಾಲಿಡುತ್ತಿದ್ದಾರೆ.

ತೇಜಸ್ವಿನಿ ಅವರು ಮಹಾನದಿ, ಸಂಘರ್ಷ, ರಾಧಿಕಾ ಸೇರಿದಂತೆ ಹಲವು ಧಾರಾವಾಹಿಗಳಲ್ಲಿ ಅಭಿನಯಿಸಿದ್ದಾರೆ. ವಿರಾಟ್‌ ಕೂಡ ಸಂಘರ್ಷ, ರಾಧಿಕಾ ಸೇರಿದಂತೆ ಕೆಲ ಧಾರಾವಾಹಿಗಳಲ್ಲಿ ಗುರುತಿಸಿಕೊಂಡಿದ್ದಾರೆ.

ವಿರಾಟ್‌ ಊರಾದ ದಾವಣಗೆರೆಯಲ್ಲಿ ಮದುವೆ ಜರುಗಲಿದೆ. ಮುಂದಿನ ತಿಂಗಳು ಅಂದರೆ ಫೆಬ್ರವರಿ 8 ರಂದು ಆರತಕ್ಷತೆ ಕಾರ್ಯಕ್ರಮ ಜರುಗಲಿದೆ.

News Desk Sandalwood Times

error: Content is protected !!