Dhurandhar 2 Teaser: ಇದು ಹೊಸ ಭಾರತ, ನುಗ್ಗಿ ಹೊಡೆಯುತ್ತವೆ ಎಂದ ರಣವೀರ್ ಸಿಂಗ್
ನ್ಯಾಷನಲ್ ಸ್ಟಾರ್ ಯಶ್ (Yash) ನಟನೆಯ ʻಟಾಕ್ಸಿಕ್’ (Toxic) ಚಿತ್ರದ ಮುಂದೆ ‘ಧುರಂಧರ್ 2’ (Dhurandhar 2) ರಿಲೀಸ್ಗೆ ಸಜ್ಜಾಗಿದೆ. ‘ಟಾಕ್ಸಿಕ್’ಗೆ ಸೆಡ್ಡು ಹೊಡೆಯಲು ಕನ್ನಡ ವರ್ಷನ್ನಲ್ಲಿ ಟೀಸರ್ ರಿಲೀಸ್ ಆಗಿದೆ. ಇದು ಹೊಸ ಭಾರತ, ನುಗ್ಗಿ ಹೊಡೆಯುತ್ತವೆ, ಕೊಲ್ಲುತ್ತವೆ ಎಂದು ರಣವೀರ್ ಖಡಕ್ ಡೈಲಾಗ್ ಹೊಡೆದಿದ್ದಾರೆ.
ʻಧುರಂಧರ್’ ಪಾರ್ಟ್ 1 ಸಿನಿಮಾ ರಿಲೀಸ್ ಆಗಿ ಯಶಸ್ವಿ ಪ್ರದರ್ಶನ ಕಂಡಿದೆ. ಇದರ ಪಾರ್ಟ್ 2 ಬಗ್ಗೆ ಫ್ಯಾನ್ಸ್ ಸಿಕ್ಕಾಪಟ್ಟೆ ನಿರೀಕ್ಷೆ ಇಟ್ಟುಕೊಂಡಿದ್ದಾರೆ. ಇದೀಗ ರಿಲೀಸ್ ʻಧುರಂಧರ್ 2′ ಟೀಸರ್ನಲ್ಲಿ ಮಾಸ್ ಅವತಾರದಲ್ಲಿ ರಣವೀರ್ ಸಿಂಗ್ (Ranveer Singh) ಎಂಟ್ರಿ ಕೊಟ್ಟಿದ್ದಾರೆ. ಬಿಜಿಎಂ ಕೂಡ ಮಸ್ತ್ ಆಗಿದೆ. ಟೀಸರ್ ಕೊನೆಯಲ್ಲಿ, ಇದು ಹೊಸ ಭಾರತ, ನುಗ್ಗಿ ಹೊಡೆಯುತ್ತವೆ, ಕೊಲ್ಲುತ್ತವೆ ಎಂದಿರೋ ರಣವೀರ್ ಡೈಲಾಗ್ ಕೇಳಿ ಫ್ಯಾನ್ಸ್ ಖುಷ್ ಆಗಿದ್ದಾರೆ. ಪಾರ್ಟ್ 2ನಲ್ಲಿ ರಿವೇಂಜ್ ಸ್ಟೋರಿ ಹೇಳಲು ರಣವೀರ್ ಹೊರಟಿದ್ದಾರೆ.
ಮಾ.19ರಂದು ʻಟಾಕ್ಸಿಕ್’ ಸಿನಿಮಾ ಮುಂದೆ ʻಧುರಂಧರ್ 2′ ರಿಲೀಸ್ ಆಗ್ತಿದೆ. ಕನ್ನಡ ಪ್ರೇಕ್ಷಕರನ್ನು ಸೆಳೆಯಲು ಕನ್ನಡ ವರ್ಷನ್ನಲ್ಲಿ ಚಿತ್ರತಂಡ ಸಿನಿಮಾ ರಿಲೀಸ್ ಮಾಡ್ತಿದೆ. ಚಿತ್ರದಲ್ಲಿ ರಣವೀರ್ ಸಿಂಗ್ ಜೊತೆ ಸಂಜಯ್ ದತ್, ಅಕ್ಷಯ್ ಖನ್ನಾ, ಆರ್. ಮಾಧವನ್ ಸೇರಿದಂತೆ ಅನೇಕರು ನಟಿಸಿದ್ದಾರೆ. ಈ ಸಿನಿಮಾಗೆ ಆದಿತ್ಯಾ ಧರ್ ನಿರ್ದೇಶನ ಮಾಡಿದ್ದಾರೆ.
ಅಂದಹಾಗೆ, ʻಟಾಕ್ಸಿಕ್ʼ ಮತ್ತು ʻಧುರಂದರ್ 2ʼ ಜಿದ್ದಾಜಿದ್ದಿಯಲ್ಲಿ ಯಾವ ಸಿನಿಮಾಗೆ ಗೆಲುವು ಸಿಗಲಿದೆ. ಪ್ರೇಕ್ಷಕ ಪ್ರಭುಗಳು ಯಾವ ಚಿತ್ರಕ್ಕೆ ಅಸ್ತು ಅಂತಾರೆ ಎಂದು ಕಾಯಬೇಕಿದೆ.

