‘ಜೈಲರ್ 2’: ರಜನಿಕಾಂತ್ ಜೊತೆ ನಟಿಸಿ ಬಂದ ಕನ್ನಡತಿ ಮೇಘನಾ ರಾಜ್
ಕನ್ನಡದ ಪ್ರತಿಭಾನ್ವಿತ ನಟಿ ಮೇಘನಾ ರಾಜ್ ಸರ್ಜಾ (Meghana Raj) ಅವರು ಸದ್ದಿಲ್ಲದೇ ‘ಜೈಲರ್ 2’ ಸಿನಿಮಾದಲ್ಲಿ ನಟಿಸಿ ಬಂದಿದ್ದಾರೆ. ರಜನಿಕಾಂತ್ ಜೊತೆ ಪವರ್ಫುಲ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.

13 ವರ್ಷಗಳ ಬಳಿಕ ಮೇಘನಾ ರಾಜ್ ತಮಿಳಿಗೆ ಕಮ್ ಬ್ಯಾಕ್ ಆಗಿದ್ದಾರೆ. ʼಜೈಲರ್ 2’ನಲ್ಲಿ (Jailer 2) ಯಾರು ಊಹಿಸಿರದ ವಿಭಿನ್ನ ಪಾತ್ರಕ್ಕೆ ಮೇಘನಾ ಬಣ್ಣ ಹಚ್ಚಿದ್ದಾರೆ. ಈ ಮೂಲಕ ಫ್ಯಾನ್ಸ್ಗೆ ಬಿಗ್ ನ್ಯೂಸ್ ಕೊಟ್ಟಿದ್ದಾರೆ.

ಮೇಘನಾ ರಾಜ್ ಕುಟುಂಬಕ್ಕೆ ರಜನಿಕಾಂತ್ (Rajinikanth) ಅವರೊಂದಿಗಿನ ಸಂಬಂಧ ದಶಕಗಳಷ್ಟು ಹಳೆಯದು. 1978ರಲ್ಲಿ ತೆರೆಕಂಡ ಪುಟ್ಟಣ್ಣ ಕಣಗಾಲ್ರ ʼತಪ್ಪಿದ ತಾಳ’ ಚಿತ್ರದಲ್ಲಿ ಮೇಘನಾ ತಂದೆ ಸುಂದರ್ ರಾಜ್ ಮತ್ತು ತಾಯಿ ಪ್ರಮೀಳಾ ಅವರು ರಜನಿಕಾಂತ್ ಅವರೊಂದಿಗೆ ನಟಿಸಿದ್ದರು. ಈಗ ಸುಮಾರು 48 ವರ್ಷಗಳ ನಂತರ, ಅದೇ ಸೂಪರ್ಸ್ಟಾರ್ ಜೊತೆ ಸುಂದರ್ ರಾಜ್ ದಂಪತಿಯ ಮಗಳು ಮೇಘನಾ ಬಣ್ಣ ಹಚ್ಚುತ್ತಿರುವುದು ಇವರ ವೃತ್ತಿಜೀವನದ ಮೈಲಿಗಲ್ಲಾಗಿದೆ.
ನೆಲ್ಸನ್ ದಿಲೀಪ್ ಕುಮಾರ್ ನಿರ್ದೇಶನದ ʼಜೈಲರ್ 2′ ಚಿತ್ರದಲ್ಲಿ ರಮ್ಯಾ ಕೃಷ್ಣನ್, ಯೋಗಿ ಬಾಬು, ಶಿವರಾಜ್ಕುಮಾರ್ ಸೇರಿದಂತೆ ಅನೇಕರು ನಟಿಸಿದ್ದಾರೆ. ಈ ವರ್ಷ ಜೂನ್ನಲ್ಲಿ ಜೈಲರ್ 2 ರಿಲೀಸ್ ಆಗಲಿದೆ.

