ʼಕಿಂಗ್ ಆಫ್ ಪಾಪ್’ ಮೈಕಲ್ ಜಾಕ್ಸನ್ ಬಯೋಪಿಕ್‌ ಟ್ರೈಲರ್ ಔಟ್

ʼಕಿಂಗ್ ಆಫ್ ಪಾಪ್’ ಮೈಕಲ್ ಜಾಕ್ಸನ್ ಬಯೋಪಿಕ್‌ ಟ್ರೈಲರ್ ಔಟ್

ʻಕಿಂಗ್ ಆಫ್ ಪಾಪ್ʼ (King Of Pop) ಅಂತಲೇ ಖ್ಯಾತಿ ಗಳಿಸಿದ್ದ ಮೈಕಲ್ ಜಾಕ್ಸನ್ (Michael Jackson) ಜೀವನದ ಕಥೆ ಸಿನಿಮಾ ರೂಪದಲ್ಲಿ ತೋರಿಸಲು ಸಜ್ಜಾಗಿದ್ದಾರೆ. ಮೈಕಲ್ ಬಯೋಪಿಕ್‌ನ (Biopic) ಟ್ರೈಲರ್ ರಿಲೀಸ್ ಆಗಿದೆ.

ವಿಭಿನ್ನ ನೃತ್ಯ ಶೈಲಿಯ ಮೂಲಕ ಅಪಾರ ಸಂಖ್ಯೆಯ ಅಭಿಮಾನಿಗಳನ್ನು ಕುಣಿಸಿದ್ದ ಮೈಕಲ್ ಜಾಕ್ಸನ್ 2009ರಲ್ಲಿ ನಿಧನರಾದರು. ಇಂದಿಗೂ ಮೈಕಲ್ ಮೇಲಿನ ಅಭಿಮಾನ ಫ್ಯಾನ್ಸ್‌ಗೆ ಕಮ್ಮಿಯಾಗಿಲ್ಲ. ಈಗ ಅವರ ಜೀವನಗಾಥೆಯನ್ನು ಸಿನಿಮಾ ರೂಪದಲ್ಲಿ ತೋರಿಸಲು ಮೈಕಲ್ ಸಹೋದರನ ಮಗ ಜಾಫರ್ ಜಾಕ್ಸನ್ ಬರುತ್ತಿದ್ದಾರೆ.

 

View this post on Instagram

 

A post shared by Michael (@michaelmovie)

ಮೈಕಲ್ ಪಾತ್ರಕ್ಕೆ ಜಾಫರ್ (Jaafar Jackson) ಜೀವ ತುಂಬಿದ್ದಾರೆ. ಟ್ರೈಲರ್‌ನಲ್ಲಿ ಮೈಕಲ್ ನೃತ್ಯ, ಜನಪ್ರಿಯತೆ, ಅವರ ನಿಧನದ ದಿನ ನೆರೆದಿದ್ದ ಜನಸಾಗರ ಎಲ್ಲವನ್ನೂ ಪುಟ್ಟ ತುಣುಕಿನಲ್ಲಿ ತೋರಿಸಲಾಗಿದೆ. ಈ ಮೂಲಕ ಚಿತ್ರದ ಮೇಲೆ ನಿರೀಕ್ಷೆ ಹೆಚ್ಚಿಸಿದೆ. ಏ.24ರಂದು ಸಿನಿಮಾ ರಿಲೀಸ್ ಆಗಲಿದೆ.

ಮೈಕಲ್ ಬಯೋಪಿಕ್‌ಗೆ ಆ್ಯಂಟೋನಿ ಫುಕ್ವಾ ನಿರ್ದೇಶನ ಮಾಡಿದ್ದಾರೆ. ಜಾನ್ ಲೊಗಾನ್ ಚಿತ್ರಕಥೆ ಬರೆದಿದ್ದಾರೆ.

News Desk Sandalwood Times

error: Content is protected !!