ಧನುಷ್ ಜೊತೆಗಿನ ಚಿತ್ರದ ಮುಹೂರ್ತ ಸಂಭ್ರಮದಲ್ಲಿ ಸಾಯಿ ಪಲ್ಲವಿ, ಶ್ರೀಲೀಲಾ

ಧನುಷ್ ಜೊತೆಗಿನ ಚಿತ್ರದ ಮುಹೂರ್ತ ಸಂಭ್ರಮದಲ್ಲಿ ಸಾಯಿ ಪಲ್ಲವಿ, ಶ್ರೀಲೀಲಾ

ನುಷ್ (Dhanush) ನಟನೆಯ ಹೊಸ ಸಿನಿಮಾದ ಮುಹೂರ್ತ ಕಾರ್ಯಕ್ರಮವು ಅದ್ಧೂರಿಯಾಗಿ ಜರುಗಿದೆ. ಧನುಷ್ ಜೊತೆ ನಟಿಯರಾದ ಸಾಯಿ ಪಲ್ಲವಿ, ಶ್ರೀಲೀಲಾ (Sreeleela) ಮಿಂಚಿದ್ದಾರೆ.

ರಾಜ್‌ಕುಮಾರ್ ಪೆರಿಯಸ್ವಾಮಿ ನಿರ್ದೇಶನದ D55  ಚಿತ್ರವು ರಿಯಲ್ ಕಥೆಯನ್ನು ಒಳಗೊಂಡಿದೆ. ಈ ಹಿಂದೆ ಸಾಯಿ ಪಲ್ಲವಿ (Sai Pallavi), ಧನುಷ್ ನಟನೆಯ ʻಮಾರಿ’ ಸಿನಿಮಾದಲ್ಲಿ ಡ್ಯಾನ್ಸ್ ನಂಬರ್‌ಗೆ ಹೆಚ್ಚು ಒತ್ತು ಕೊಡಲಾಗಿತ್ತು. ಈಗ D55 ಚಿತ್ರದಲ್ಲೂ ಮೂವರು ಸ್ಟಾರ್‌ಗಳು ಡ್ಯಾನ್ಸ್‌ನಲ್ಲಿ ಸೈ ಎನಿಸಿಕೊಂಡಿರೋದ್ರಿಂದ ನೃತ್ಯಕ್ಕೆ ಹೆಚ್ಚು ಕೊಡುವ ಸಾಧ್ಯತೆಯಿದೆ.

ಫೆ.5ರಂದು ಅದ್ಧೂರಿಯಾಗಿ ಮುಹೂರ್ತ ಕಾರ್ಯಕ್ರಮ ಜರುಗಿದೆ. ಸದ್ಯದಲ್ಲೇ ಚಿತ್ರೀಕರಣ ಶುರುವಾಗಲಿದೆ. ಧನುಷ್, ಶ್ರೀಲೀಲಾ, ಸಾಯಿ ಪಲ್ಲವಿ ಮೂವರ ಪಾತ್ರ ಕೂಡ ಪವರ್‌ಫುಲ್ ಆಗಿದೆ. ಸಿನಿಮಾಗಾಗಿ ಅಭಿಮಾನಿಗಳು ಎದುರು ನೋಡ್ತಿದ್ದಾರೆ.

News Desk Sandalwood Times

error: Content is protected !!