ಮತ್ತೆ ಕನ್ನಡಕ್ಕೆ ಬಂದ್ರು ‘ಯಾರೇ ನೀನು ಚೆಲುವೆ’ ನಟಿ ಸಂಗೀತಾ

ಮತ್ತೆ ಕನ್ನಡಕ್ಕೆ ಬಂದ್ರು ‘ಯಾರೇ ನೀನು ಚೆಲುವೆ’ ನಟಿ ಸಂಗೀತಾ

ಯಾರೇ ನೀನು ಚೆಲುವೆ, ಯಾರೇ ನೀನು ಅಭಿಮಾನಿ ಸಿನಿಮಾಗಳ ಮೂಲಕ ಕನ್ನಡಿಗರನ್ನು ರಂಜಿಸಿದ್ದ ನಟಿ ಸಂಗೀತಾ ಮಾಧವನ್ (Sangeetha Madhavan) ಈಗ ಮತ್ತೆ ಕನ್ನಡಕ್ಕೆ (Sandalwood) ಮರಳಿದ್ದಾರೆ. 25 ವರ್ಷಗಳ ಬಳಿಕ ಕನ್ನಡ ಸಿನಿಮಾದತ್ತ ಮುಖ ಮಾಡಿದ್ದಾರೆ.

‘ಮಹಾನಟಿ’ ಪ್ರಿಯಾಂಕಾ ಆಚಾರ್ (Priyanka Achar) ನಟನೆಯ ಹೊಸ ಸಿನಿಮಾದಲ್ಲಿ ಸಂಗೀತಾ ಕಾಣಿಸಿಕೊಂಡಿದ್ದಾರೆ. ಈ ಚಿತ್ರಕ್ಕೆ ಕಿರಣ್ ವಿಶ್ವನಾಥ್ ನಿರ್ದೇಶನ ಮಾಡ್ತಿದ್ದಾರೆ. ಇದರಲ್ಲಿ ನಾಯಕನ ತಾಯಿ ಪಾತ್ರದಲ್ಲಿ ನಟಿ ಕಾಣಿಸಿಕೊಂಡಿದ್ದಾರೆ. ಭಾಗ್ಯ ಎಂಬ ಪಾತ್ರಕ್ಕೆ ಅವರು ಜೀವತುಂಬಿದ್ದಾರೆ.

ಅಷ್ಟಕ್ಕೂ ಸಿನಿಮಾದ ಹೆಸರೇನು? ಹೀರೋ ಯಾರು ಎಂಬಿತ್ಯಾದಿ ಮಾಹಿತಿಯನ್ನು ಚಿತ್ರತಂಡದವರು ಸದ್ಯಕ್ಕೆ ಗೌಪ್ಯವಾಗಿ ಇಟ್ಟಿದ್ದಾರೆ. ಬಹಳ ಗ್ರ‍್ಯಾಂಡ್ ಆಗಿ ನಾಯಕನ ಪರಿಚಯ ಮಾಡಲು ಸಿದ್ಧತೆ ನಡೆದಿದೆ. ಗೌರಿ ಆರ್ಟ್ಸ್ ಬ್ಯಾನರ್ ಮೂಲಕ ಈ ಸಿನಿಮಾ ನಿರ್ಮಾಣ ಆಗುತ್ತಿದೆ.

News Desk Sandalwood Times

error: Content is protected !!