ಅಣ್ಣಾವ್ರು, ಶಿವಣ್ಣ, ಅಪ್ಪು ಹಾದಿಯಲ್ಲಿ ನಟಿ- ನಂದಿನಿಗೆ ನೂತನ ರಾಯಭಾರಿ ನಟಿ ಸುಧಾರಾಣಿ
ಡಾ.ರಾಜ್ಕುಮಾರ್, ಶಿವಣ್ಣ, ಪುನೀತ್ ರಾಜ್ ಕುಮಾರ್ ಹಾದಿಯಲ್ಲಿ ಹಿರಿಯ ನಟಿ ಸುಧಾರಾಣಿ. ನಂದಿನಿ ಉತ್ಪನಗಳ ನೂತನ ರಾಯಭಾರಿಯಾಗಿ ನಟಿ ಸುಧಾರಾಣಿ (Sudharani) ಆಯ್ಕೆಯಾಗಿದ್ದಾರೆ.
ನಂದಿನಿ ಉತ್ಪನ್ನಗಳಿಗೆ ಪ್ರಚಾರ ರಾಯಭಾರಿಯಾಗಿ ಶ್ರೀಮತಿ ಸುಧಾ ರಾಣಿ ಅವರು ಆಯ್ಕೆಯಾಗಿದ್ದು, ಬಮೂಲ್ ಕುಟುಂಬಕ್ಕೆ ಅವರನ್ನು ಪ್ರೀತಿಯಿಂದ ಸ್ವಾಗತಿಸುತ್ತೇವೆ. #Nandini #BAMUL #KMF pic.twitter.com/xIVaFDJwKP
— DK Suresh (@DKSureshINC) February 9, 2026
ಡಿ.ಕೆ.ಸುರೇಶ್ ಅವರು ಎಕ್ಸ್ ಖಾತೆಯಲ್ಲಿ ಈ ಕುರಿತು ಮಾಹಿತಿ ಹಂಚಿಕೊಂಡಿದ್ದಾರೆ. ಬಮೂಲ್ ಕುಟುಂಬಕ್ಕೆ (BAMUL NANDINI) ನಟಿ ಸುಧಾರಾಣಿ ಅವರನ್ನು ಪ್ರೀತಿಯಿಂದ ಸ್ವಾಗತಿಸುತ್ತೇವೆ ಎಂದು ತಿಳಿಸಿದ್ದಾರೆ.
ನಂಬಿಕೆಯ ಮೇಲೆ ನಿರ್ಮಿತವಾದ ನಂದಿನಿಯು ರೈತರ ಮೇಲಿನ ಬದ್ಧತೆ, ಶುದ್ಧ ಹಾಗೂ ಗುಣಮಟ್ಟದ ಪೌಷ್ಟಿಕ ಆಹಾರದೊಂದಿಗೆ ಇನ್ನಷ್ಟು ಬಲಿಷ್ಠವಾಗುತ್ತದೆ ಎಂದು ತಿಳಿಸಿದ್ದಾರೆ.

