ಡಿವೋರ್ಸ್ ಅನ್ನೋ ವಿಷಯದ ಬಗ್ಗೆ ನನಗೆ ಮಾತನಾಡಲು ಇಷ್ಟವಿಲ್ಲ- ʻಕೃಷ್ಣಲೀಲಾʼ ನಟಿ ಮಯೂರಿ
ಸ್ಯಾಂಡಲ್ವುಡ್ ನಟಿ ಮಯೂರಿ ಕ್ಯಾತರಿ (Mayuri Kyatari) ಸಿನಿಮಾ ವಿಚಾರ ಬಿಟ್ಟು ವೈಯಕ್ತಿಕ ವಿಚಾರವೊಂದಕ್ಕೆ ಸುದ್ದಿಯಾಗ್ತಿದ್ದಾರೆ. ಕಳೆದ ಕೆಲವು ತಿಂಗಳುಗಳಿಂದ ನಟಿಯ ಡಿವೋರ್ಸ್ ಕುರಿತು ರೂಮರ್ಸ್ ಹಬ್ಬಿದೆ. ಈ ಬಗ್ಗೆ ನಟಿ ರಿಯಾಕ್ಟ್ ಮಾಡಿದ್ದು, ರಿಲೇಷನ್ಶಿಪ್ ಸ್ಟೇಟಸ್, ಡಿವೋರ್ಸ್ (Divorce) ಅನ್ನೋ ವಿಷಯದ ಬಗ್ಗೆ ನನಗೆ ಮಾತನಾಡಲು ಇಷ್ಟವಿಲ್ಲ ಎಂದು ಹೇಳಿದ್ದಾರೆ.

ರಾಜೇಶ್ ಗೌಡ ಯೂಟ್ಯೂಬ್ನಲ್ಲಿ ಡಿವೋರ್ಸ್ ಕುರಿತು ಕೇಳಲಾದ ಪ್ರಶ್ನೆಗೆ ನಟಿ ಮಾತನಾಡಿ, ಮೊದಲಿಗೆ ನಾನು ಡಿವೋರ್ಸ್ ಎನ್ನುವ ಹೇಳಿಕೆಯನ್ನೇ ಕೊಟ್ಟಿಲ್ಲ. ನನಗೆ 5 ವರ್ಷದ ಮಗ ಇದ್ದಾನೆ. ನನಗೆ ಅದ್ಭುತವಾದ ಕುಟುಂಬವಿದೆ. ಆರವ್ಗೆ ಒಳ್ಳೆಯ ತಾಯಿಯಾಗಿ ತುಂಬಾ ಚೆನ್ನಾಗಿ ನೋಡಿಕೊಳ್ತೀನಿ. ಒಳ್ಳೆಯ ಅಪ್ಪ ಇದ್ದಾರೆ. ಆರವ್ಗೂ ಅವರ ಅಪ್ಪನಿಗೂ ಒಳ್ಳೆಯ ಒಡನಾಟವಿದೆ. ರಿಲೇಷನ್ಶಿಪ್ ಸ್ಟೇಟಸ್ ಬಗ್ಗೆ ಮಾತಾಡುವುದಕ್ಕೆ ಇಷ್ಟ ಪಡುವುದಿಲ್ಲ. ನನ್ನ ವೈಯಕ್ತಿಕ ಜೀವನದ ಬಗ್ಗೆ ಮಾತಾಡುವುದಕ್ಕೆ ನಾನು ಇಷ್ಟ ಪಡುವುದಿಲ್ಲ ಎಂದು ನಟಿ ಮಯೂರಿ ಹೇಳಿದ್ದಾರೆ.

ನನಗೆ ಈ ಬಗ್ಗೆ ಎಲ್ಲೂ ಉತ್ತರ ಕೊಡುವುದಕ್ಕೆ ಇಷ್ಟವಿಲ್ಲ. ಎಲ್ಲೂ ಈ ಬಗ್ಗೆ ಹೇಳಿಕೆಗಳನ್ನು ನಾನು ಕೊಟ್ಟಿಲ್ಲ, ಕೊಡುವುದೂ ಇಲ್ಲ. ಅದು ನನ್ನ ವೈಯಕ್ತಿಕ ವಿಚಾರ. ಅದು ನಮ್ಮಲ್ಲೇ ಇರಬೇಕು. ಇದೆಲ್ಲ ಏನೇ ಇದ್ದರೂ ನನಗೆ ಏನೂ ಹೇಳುವುದಕ್ಕೆ ಇಷ್ಟವಿಲ್ಲ. ಡಿವೋರ್ಸ್ ಅನ್ನೋ ವಿಷಯದ ಬಗ್ಗೆ ಮಾತನಾಡಲು ನನಗೆ ಇಷ್ಟವಿಲ್ಲ ಎಂದು ಮಯೂರಿ ಹೇಳಿದ್ದಾರೆ.

ನಾನು ಒಬ್ಬ ನಟಿಯಾಗಿ ನನಗೆ ನನ್ನದೇ ಆದ ಜವಾಬ್ದಾರಿಗಳು ಇವೆ. ನಾನು ನನ್ನ ಪರ್ಸನಲ್ ಲೈಫ್ ಬಗ್ಗೆ ಎಲ್ಲೂ ಮಾತನಾಡಿಲ್ಲ. ಮುಂದೆಯೂ ಕೂಡ ಮಾತನಾಡುವುದಿಲ್ಲ. ನನಗೆ ಒಂದು ಒಳ್ಳೆಯ ಕುಟುಂಬವಿದೆ. ನಾನು ನನ್ನ ಮಗನನ್ನು ತುಂಬಾನೇ ಚೆನ್ನಾಗಿ ಬೆಳೆಸುತ್ತಿದ್ದೇನೆ. ಇದನ್ನು ನಾನು ಹೇಳಲೇಬೇಕು. ತುಂಬಾ ಜನರು ಕೇಳ್ತಾರೆ, ಮಗು ಇದೆಯಲ್ಲ. ಅದು ಇದು ಏನು ಅಂತೆಲ್ಲ ಕೇಳ್ತಾರೆ. ವರೆಲ್ಲರಿಗೂ ಹೇಳುವುದು ಒಂದೇ, ನನ್ನ ಮಗನ ಬೆಳವಣಿಗೆ ತುಂಬಾನೇ ಚೆನ್ನಾಗಿ ಆಗುತ್ತಿದೆ. ತಾಯಿಯಾಗಿ ನನ್ನ ಮಗನಿಗೆ ಒಳ್ಳೆಯ ವಾತಾವರಣ ಕೊಡಬೇಕು. ಅವನಿಗೆ ನೆಗೆಟಿವ್ ವಾತಾವರಣ ಬೇಡ ಎನ್ನುತ್ತಾರೆ ಮಯೂರಿ ಕ್ಯಾತರಿ.

ಅರುಣ್ (Arun) ಎಂಬುವವರನ್ನು ಹಲವು ವರ್ಷಗಳಿಂದ ಪ್ರೀತಿಸಿ 2020ರಲ್ಲಿ ಮಯೂರಿ ಮದುವೆಯಾದರು. ನಟ ಜೆಕೆ ಪೋಷಕರು ಮಯೂರಿಗೆ ಕನ್ಯಾದಾನ ಮಾಡಿದ್ದರು. ಮಯೂರಿ ಮತ್ತು ಅರುಣ್ ದಾಂಪತ್ಯಕ್ಕೆ ಆರವ್ ಸಾಕ್ಷಿಯಾಗಿದ್ದಾನೆ.

