ನನಸಾದ ನಟಿಯ ಕನಸು- ‘ಪುಷ್ಪ 2’ ಖ್ಯಾತಿಯ ಶ್ರೀಲೀಲಾ ಇನ್ಮುಂದೆ ಡಾಕ್ಟರ್
ಕನ್ನಡತಿ, ಸೌತ್‌ನ ಖ್ಯಾತ ನಟಿ ಶ್ರೀಲೀಲಾ (Sreeleela) ಅವರು ಬ್ಯೂಟಿ ವಿತ್ ಬ್ರೈನ್ ಅನ್ನೋದನ್ನು ಸಾಧಿಸಿ ತೋರಿಸಿದ್ದಾರೆ. ಶ್ರೀಲೀಲಾ ಈಗ MBBS ಪೂರ್ಣಗೊಳಿಸಿ ವೈದ್ಯೆಯಾಗಿದ್ದಾರೆ.

ನಟಿ ಶ್ರೀಲೀಲಾ ಈಗ ಡಾಕ್ಟರ್ ಪದವಿ ಪೂರ್ಣಗೊಳಿಸಿದ್ದಾರೆ. ಫೆ.10ರಂದು ಡಿವೈ ಪಾಟೀಲ್ ಮೆಡಿಕಲ್ ಕಾಲೇಜಿನಲ್ಲಿ ಎಂಬಿಬಿಎಸ್ ಪೂರ್ಣಗೊಳಿಸಿರೋ ಪದವಿ ಪ್ರಮಾಣ ಪತ್ರವನ್ನು ಖುಷಿಯಿಂದ ತೆಗೆದುಕೊಂಡಿದ್ದಾರೆ. 2020ರ ಬ್ಯಾಚ್‌ನಲ್ಲಿ ನಟಿ ಎಂಬಿಬಿಎಸ್‌ಗೆ ಜಾಯೀನ್ ಆಗಿದ್ದು, ಇದೀಗ ವೈದ್ಯ ಪದವಿ ಪೂರ್ಣಗೊಳಿಸಿದ ಸಂಭ್ರಮದಲ್ಲಿದ್ದಾರೆ. ಸಿನಿಮಾ ಶೂಟಿಂಗ್ ಮತ್ತು ಏಜುಕೇಶನ್ ಎರಡನ್ನು ಅವರು ಬ್ಯಾಲೆನ್ಸ್ ಮಾಡಿರೋದು ನೋಡಿ ಅಭಿಮಾನಿಗಳು ಭೇಷ್ ಎಂದಿದ್ದಾರೆ.

ಕನ್ನಡದ ಕಿಸ್ ಚಿತ್ರದ ಮೂಲಕ ಪರಿಚಿತರಾದ ಶ್ರೀಲೀಲಾ ಈಗ ತೆಲುಗು, ತಮಿಳು, ಬಾಲಿವುಡ್ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಧಮಾಕಾ, ಪುಷ್ಪ 2, ಗುಂಟೂರು ಖಾರಂ, ಪರಾಶಕ್ತಿ ಸೇರಿದಂತೆ ಹಲವು ಸ್ಟಾರ್ ನಟರ ಜೊತೆ ತೆರೆಹಂಚಿಕೊಂಡಿದ್ದಾರೆ.

