ರಗಡ್ ಅವತಾರ ತಾಳಿರೋ ʻಕಿಂಗ್ʼ ಯೋಗಿಗೆ ಹ್ಯಾಟ್ರಿಕ್ ಹೀರೋ ಸಾಥ್
ಲೂಸ್ ಮಾದ ಯೋಗಿ ಅವರ 50ನೇ ಚಿತ್ರ ‘ಕಿಂಗ್’ (King) ಮೂಲಕ ಮತ್ತೆ ಸದ್ದು ಮಾಡುತ್ತಿದ್ದಾರೆ. ಯಶಸ್ಸಿಗಾಗಿ ಪರಿತಪಿಸುತ್ತಿರುವ ಯೋಗಿ ಈಗ ʻಕಿಂಗ್ʼ ಕಥೆ ಹೇಳಲು ಹೊರಟಿದ್ದಾರೆ. ರಗಡ್ ಅವತಾರದಲ್ಲಿ ಕಾಣಿಸಿಕೊಂಡಿರುವ ಯೋಗಿನ (Yogi) ನೋಡಿ ಅಭಿಮಾನಿಗಳಲ್ಲಿ ಭರವಸೆ ಮೂಡಿದೆ. ಶಿವರಾಜ್ಕುಮಾರ್ (Shivaraj Kumar) ಬಿಡುಗಡೆ ಮಾಡಿದ ಚಿತ್ರದ ಟೈಟಲ್ ಟೀಸರ್ ಉತ್ತಮ ಪ್ರತಿಕ್ರಿಯೆ ಗಳಿಸಿದ್ದು, ಕನ್ನಡ, ತೆಲುಗು, ತಮಿಳು ಭಾಷೆಗಳಲ್ಲಿ ‘ಕಿಂಗ್’ ಅಬ್ಬರಿಸಲು ಸಿದ್ಧವಾಗಿದೆ.

ಯೋಗಿ ನಟನೆಯ ʻಕಿಂಗ್ʼ ಚಿತ್ರ ತ್ರಿಭಾಷೆಯಲ್ಲಿ ಮೂಡಿ ಬಂದಿದೆ. ಯೋಗಿ ಈ ಹಿಂದೆ ಎಂದೂ ಕಾಣಿಸಿಕೊಂಡಿರದ ರಾ ಲುಕ್ನಲ್ಲಿ ಫ್ಯಾನ್ಸ್ ಮುಂದೆ ಬಂದಿದ್ದಾರೆ. ಶಿವಣ್ಣ ಟೀಸರ್ ಮೆಚ್ಚಿ ತಂಡಕ್ಕೆ ವಿಶ್ ಮಾಡಿದ್ದಾರೆ.

ಯೋಗಿ ನನ್ನ ತಮ್ಮ, ಜೀವ ಇರೋವರೆಗೂ ಜೋಪಾನ ಮಾಡ್ತೀನಿ. ಯೋಗಿ 50ನೇ ಸಿನಿಮಾ ʻಕಿಂಗ್ʼ ಮೂಲಕ ಬರುತ್ತಿದ್ದಾರೆ. ಅಪ್ಪುಗೆ ಕೂಡ ಯೋಗಿ ಕ್ಲೋಸ್. ಯೋಗಿ ಚೆನ್ನಾರಿರಬೇಕು, ಚೆನ್ನಾಗ ಆಗಬೇಕು. ʻಕಿಂಗ್ʼ ಟೀಸರ್ ಬ್ಯೂಟಿಫುಲ್ ಆಗಿದೆ. ಯೋಗಿ ಸಕಲಕಲಾವಲ್ಲಭ, ಈ ಚಿತ್ರ ಗೆಲ್ಲಬೇಕು. ನಾನು ಈ ಚಿತ್ರದ ಸಕ್ಸಸ್ ಪಾರ್ಟಿಯಲ್ಲಿ ಭಾಗಿಯಾಗುತ್ತೇನೆ ಎಂದು ಹೇಳುತ್ತಾ ತಂಡಕ್ಕೆ ವಿಶ್ ಮಾಡಿದ್ದಾರೆ ಶಿವಣ್ಣ.

ಈ ಸಿನಿಮಾವನ್ನು ಜಾಕ್ ನಿರ್ದೇಶನ ಮಾಡಲಿದ್ದಾರೆ. ಸಿನಿಮಾಗೆ ಶಶಾಂಕ್ ಶೇಷಗಿರಿ ನಿರ್ದೇಶನ ಮಾಡಿದ್ದಾರೆ. ‘ಕಿಂಗ್’ ಅನ್ನೋ ಟೈಟಲ್ 3 ವರ್ಷಗಳ ಹಿಂದೆಯೇ ರಿಜಿಸ್ಟರ್ ಆಗಿದೆ. ಬಾಲಿವುಡ್ನ ಶಾರುಖ್ ನಟನೆಯ ಕಿಂಗ್ ಚಿತ್ರಕ್ಕೂ ನಮ್ಮ ಕನ್ನಡ ಚಿತ್ರಕ್ಕೂ ಯಾವುದೇ ಲಿಂಕ್ ಇಲ್ಲ ಎಂದು ತಂಡ ಸ್ಪಷ್ಟನೆ ನೀಡಿದೆ.

