ರಶ್ಮಿಕಾ ವಿಜಯ್‌ ಕಲ್ಯಾಣ- ಕೊನೆಗೂ ಮದುವೆ ಬಗ್ಗೆ ಶ್ರೀವಲ್ಲಿ ಗ್ರೀನ್‌ ಸಿಗ್ನಲ್

ರಶ್ಮಿಕಾ ವಿಜಯ್‌ ಕಲ್ಯಾಣ- ಕೊನೆಗೂ ಮದುವೆ ಬಗ್ಗೆ ಶ್ರೀವಲ್ಲಿ ಗ್ರೀನ್‌ ಸಿಗ್ನಲ್

ನ್ಯಾಷನಲ್‌ ಕ್ರಶ್‌ ರಶ್ಮಿಕಾ ಮಂದಣ್ಣ- ವಿಜಯ್ ದೇವರಕೊಂಡ ಮದುವೆ ಸುದ್ದಿ ಕೊನೆಗೂ ಅಧಿಕೃತವಾಗಿದೆ. ಇಷ್ಟು ದಿನ ಮೌನದ ಮೊರೆ ಹೋಗಿದ್ದ ರಶ್ಮಿಕಾ ಒಂದು ಪ್ರೀತಿಯ ಅಪ್ಪುಗೆ ಕೊಡ್ತೀನಿ ಎಂಬುದರ ಮೂಲಕ ಮದುವೆ ಕನ್ಫರ್ಮ್ ಮಾಡಿದ್ದಾರೆ. ರಶ್ಮಿಕಾ-ವಿಜಯ್ ಕಲ್ಯಾಣದ ಬಗ್ಗೆ ಇಲ್ಲಿದೆ ನೋಡಿ ಮಾಹಿತಿ.

ಸೌತ್ ಸಿನಿಮಾ ಇಂಡಸ್ಟ್ರಿಯ ಹಾರ್ಟ್ ಥ್ರೋಬ್ಸ್ ಎನಿಸಿಕೊಂಡಿರೋ ರಶ್ಮಿಕಾ ಮಂದಣ್ಣ- ವಿಜಯ್ ದೇವರಕೊಂಡ ಮದುವೆ ಇನ್ನೂ ಗುಟ್ಟಾಗಿ ಉಳಿದಿಲ್ಲ. ಬರೀ ಮದುವೆ ಗಾಸಿಪ್‌ ಗಳನ್ನೇ ಕೇಳಿ ಸುಸ್ತಾಗಿ ಹೋಗಿದ್ದ ಫ್ಯಾನ್ಸ್ ಗೆ ರಶ್ಮಿಕಾ ಕೊನೆಗೂ ಒಂದು ಗ್ರೀನ್ ಸಿಗ್ನಲ್ ತೋರಿಸಿದ್ದಾರೆ. ಅಂತೆಕಂತೆಗಳಿಗೆ ಫುಲ್ ಸ್ಟಾಪ್ ಇಟ್ಟ ರಶ್ಮಿಕಾ ತಮ್ಮ ಬಾಳಪಯಣಕ್ಕೆ ‘ವಿರೋಷ್’ ಎಂದು ಹೆಸರಿಟ್ಟಿದ್ದಾರೆ. ಅಲ್ಲಿಗೆ ರಶ್ಮಿಕಾ-ವಿಜಯ್ ಮದುವೆಯಾಗ್ತಿರೋದು ಆಫೀಶಿಯಲ್ ಆಗಿದೆ.

ʻಗೀತಾ ಗೋವಿಂದಂʼ ಮತ್ತು ʻಡಿಯರ್ ಕಾಮ್ರೆಡ್ʼ ಚಿತ್ರಗಳಲ್ಲಿ ಒಟ್ಟಾಗಿ ಅಭಿನಯಿಸಿದ ಈ ಜೋಡಿ ಬಗ್ಗೆ ಕಳೆದ ನಾಲ್ಕೈದು ವರ್ಷಗಳಿಂದ ಗಾಸಿಪ್ ಹರಿದಾಡ್ತಾನೆ ಇತ್ತು. ಎಲ್ಲಕ್ಕೂ ‘ಮೌನಂ ಸಮ್ಮತಿ ಲಕ್ಷಣಂ’ ಎಂದಿದ್ದ ಈ ಪ್ರೇಮಹಕ್ಕಿಗಳು ಸೀಕ್ರೆಟ್ ಆಗಿ ಡೇಟಿಂಗ್ ನಡೆಸುತ್ತಿದ್ದರು. ಬಟ್, ಈಗ ಆ ಕಾಲ ಕೂಡಿಬಂದಿದೆ. ರಶ್ಮಿಕಾ ಗಾಸಿಪ್ ಗಳಿಗೆ ಜೀವ ತುಂಬಿ ತಮ್ಮ ಮದುವೆ ವಿಷಯ ಅಧಿಕೃತಗೊಳಿಸಿದ್ದಾರೆ. ಫೆ.26ಕ್ಕೆ ಆಗೋ ಮದುವೆ ಸಮಾರಂಭಕ್ಕೆ ಅಭಿಮಾನಿಗಳನ್ನ ಇನ್ವೈಟ್ ಮಾಡದಿದ್ರೂ, ಕೊಟ್ಟ ಪ್ರೀತಿ, ಅಭಿಮಾನಗಳಿಗೆ ಥ್ಯಾಂಕ್ಸ್ ಹೇಳಿದ್ದಾರೆ.

ರಶ್ಮಿಕಾ-ವಿಜಯ್ ಮದುವೆ ಸಮಾರಂಭ ರಾಜಸ್ಥಾನದ ಉದಯಪುರದಲ್ಲಿ ನೆರವೆರುತ್ತಿದೆ. ಫೆ.24ಕ್ಕೆ ಮೆಹಂದಿ ಶಾಸ್ತ್ರ, ಫೆ.25ಕ್ಕೆ ಹಳದಿ ಶಾಸ್ತ್ರ ನಡೆಯುತ್ತದೆ. ಮದುವೆಗೆ ಕೇವಲ 250 ಮಂದಿಗೆ ಮಾತ್ರ ಅವಕಾಶವಂತೆ. ಬರೀ ಕುಟುಂಬ ಮತ್ತು ಆಪ್ತವಲಯಕ್ಕೆ ಮಾತ್ರ ಆಮಂತ್ರಣ ಪತ್ರಿಕೆ ಹೋಗಿದೆ. ಮಾ.4ಕ್ಕೆ ಹೈದ್ರಾಬಾದ್ ನ ತಾಜ್ ಕೃಷ್ಣದಲ್ಲಿ ನಡೆಯೋ ಅದ್ದೂರಿ ಆರತಕ್ಷತೆಗೆ ಭಾರತೀಯ ಚಿತ್ರರಂಗ ಬರೋ ಚಾನ್ಸ್ ಇದೆ. ಭಾರೀ ಭದ್ರತೆಯಲ್ಲೇ ಮದುವೆಯಾಗ್ತಿರೋ ರಶ್ಮಿಕಾ-ವಿಜಯ್ ಗೆ ಮದುವೆಯ ಒಂದ್ ಫೋಟೋ ಲೀಕ್ ಆಗೋದು ಇಷ್ಟವಿಲ್ಲವಂತೆ. ಹೀಗಾಗಿ ಕತ್ರಿನಾ ಕೈಫ್‌, ಕಿಯಾರಾ ಅಡ್ವಾಣಿ ಮದುವೆಯಂತೆ ನೋ ಫೋಟೋ ಪಾಲಿಸಿಗೆ ಡಿಸೈಡ್‌ ಮಾಡಿದ್ದಾರೆ. ಅದೇನೇ ಇರಲಿ ನೆಚ್ಚಿನ ಜೋಡಿ ವಿರೋಷ್‌ ಮದುವೆಗೆ ಫ್ಯಾನ್ಸ್‌ ಶುಭಕೋರುತ್ತಿದ್ದಾರೆ.

News Desk Sandalwood Times

error: Content is protected !!