4 ಸಾವಿರ ಕೋಟಿ ಒಡೆಯನ ಜೊತೆ ಪರಮ ಸುಂದರಿ ಕೃತಿ ಡೇಟಿಂಗ್‌

4 ಸಾವಿರ ಕೋಟಿ ಒಡೆಯನ ಜೊತೆ ಪರಮ ಸುಂದರಿ ಕೃತಿ ಡೇಟಿಂಗ್‌

ಸಿನಿಮಾರಂಗದಲ್ಲಿ ಲವ್‌, ಬ್ರೇಕಪ್‌, ಡೇಟಿಂಗ್ ಎಲ್ಲವೂ ಕಾಮನ್.‌ ಕೆಲವು ಮದುವೆವರೆಗೂ ಹೋದ್ರೆ, ಇನ್ನೂ ಕೆಲವು ಮದುವೆ ಮುಂಚೆಯೇ ಬ್ರೇಕಪ್‌ ಆಗುತ್ತೆ. ಹೀಗಿರುವಾಗ ಬಾಲಿವುಡ್‌ನ ಕ್ರಶ್‌ ಕ್ವೀನ್‌, ಪರಮ ಸುಂದರಿ ಕೃತಿ ಸನೋನ್‌ (Kriti Sanon) ಅವರ ಹೆಸರು 4 ಸಾವಿರ ಕೋಟಿ ಒಡೆಯ ಕಬೀರ್‌ ಜೊತೆ ಕೇಳಿ ಬರುತ್ತಿದೆ. ಅವರು ಲಂಡನ್‌ ಬೀದಿಯಲ್ಲಿ ಕೈ ಹಿಡಿದುಕೊಂಡು ಓಡಾಡಿರುವ ಫೋಟೋಗಳು ವೈರಲ್‌ ಆಗ್ತಿದೆ.

ಕಳೆದ ಕೆಲ ತಿಂಗಳುಗಳಿಂದ ಕಬೀರ್‌ ಜೊತೆ ಕೃತಿ ಹೆಸರು ತಳುಕು ಹಾಕಿಕೊಂಡಿದೆ. ಇತ್ತೀಚೆಗೆ ಕೃತಿ ಸಹೋದರಿ ನೂಪುರ್‌ ಮದುವೆಯಲ್ಲಿ ಕಬೀರ್‌ ಭಾಗಿಯಾಗಿದ್ರು. ನಟಿಯ ಕುಟುಂಬದ ಸಂಭ್ರಮದಲ್ಲಿ ಕಬೀರ್‌ ಕೂಡ ಸಾಥ್‌ ನೀಡಿದ್ದರು. ಈಗ ಲಂಡನ್‌ ಬೀದಿಯಲ್ಲಿ ಇಬ್ಬರೂ ಕೈ ಕೈ ಹಿಡಿದು ಓಡಾಡಿದ್ದಾರೆ. ಹೀಗಾಗಿ ಇಬ್ಬರ ನಡುವೆ ಪ್ರೇಮಾಂಕುರವಾಗಿದೆ ಎಂದು ಫ್ಯಾನ್ಸ್‌ ತಲೆಕೆಡಿಸಿಕೊಂಡಿದ್ದಾರೆ. ಸದ್ಯದಲ್ಲೇ ಇಬ್ಬರೂ ಗುಡ್‌ ನ್ಯೂಸ್‌ ಕೊಡ್ತಾರಾ? ಎಂದು ಕಾದುನೋಡಬೇಕಿದೆ.

ಇನ್ನೂ ಕಬೀರ್‌ ಅವರು ಆಗರ್ಭ ಶ್ರೀಮಂತ, ಲಂಡನ್‌ನಲ್ಲಿ ತಮ್ಮದೇ ಟ್ರಾವೆಲ್‌ ಏಜೆನ್ಸಿ ಹೊಂದಿದ್ದಾರೆ. ಹಲವು ಉದ್ಯಮಗಳಲ್ಲಿ ಅವರು ತೊಡಗಿಸಿಕೊಂಡಿದ್ದಾರೆ.

News Desk Sandalwood Times

error: Content is protected !!