ದುಬೈನಲ್ಲಿ ಗ್ರ್ಯಾಂಡ್‌ ಆಗಿ ಬರ್ತ್‌ಡೇ ಆಚರಿಸಿದ ದೀಪಿಕಾ ದಾಸ್‌

ದುಬೈನಲ್ಲಿ ಗ್ರ್ಯಾಂಡ್‌ ಆಗಿ ಬರ್ತ್‌ಡೇ ಆಚರಿಸಿದ ದೀಪಿಕಾ ದಾಸ್‌

ನಾಗಿಣಿ, ಬಿಗ್‌ ಬಾಸ್‌ ಶೋ ಮೂಲಕ ಮನೆ ಮಾತಾದ ನಟಿ ದೀಪಿಕಾ ದಾಸ್‌ (Deepika Das) ಅವರ ಹುಟ್ಟುಹಬ್ಬವನ್ನು ಪತಿ ದೀಪಕ್‌ ಗೌಡ (Deepak Gowda) ವಿಶೇಷವಾಗಿ ಆಚರಣೆ ಮಾಡಿದ್ದಾರೆ. ಪತ್ನಿಗೆ ದುಬಾರಿ ಉಡುಗೊರೆ ಕೊಟ್ಟು ಸರ್ಪ್ರೈಸ್‌ ಕೊಟ್ಟಿದ್ದಾರೆ.

ನಟಿಯ 30ನೇ ವರ್ಷದ ಬರ್ತ್‌ಡೇ ಪ್ರಯುಕ್ತ ಪತಿಯೊಡನೆ ದುಬೈಗೆ ಹಾರಿದ್ದಾರೆ. ಸಮುದ್ರದ ಮಧ್ಯೆ ಬೋಟ್‌ನಲ್ಲಿ ಗುಲಾಬಿ ಹೂವಿನಿಂದ ಅಲಂಕರಿಸಿದ್ದಾರೆ. ಅಲ್ಲಿ ಕೇಕ್‌ ಕತ್ತರಿಸಿ ಸಂಭ್ರಮಿಸಿದ್ದಾರೆ. ಈ ವೇಳೆ, ನಟಿ ರೆಡ್‌ ಕಲರ್‌ ಡ್ರೆಸ್‌ನಲ್ಲಿ ಸಖತ್‌ ಹಾಟ್‌ ಆಗಿ ಕಾಣಿಸಿಕೊಂಡಿದ್ದಾರೆ.

ಪತ್ನಿಯ ಹುಟ್ಟಹಬ್ಬದಂದು ದುಬಾರಿ ಗಿಫ್ಟ್‌ ಅನ್ನೇ ನೀಡಿದ್ದಾರೆ. ಚಿನ್ನದ ಸರ ಮತ್ತು ಬ್ರೇಸ್‌ಲೆಟ್‌ ಅನ್ನು ನೀಡಿದ್ದಾರೆ. ಇವರೆಡನ್ನು ತಮ್ಮ ಕೈಯಾರೆ ದೀಪಿಕಾಗೆ ತೊಡಿಸಿ ಸಂಭ್ರಮಿಸಿದ್ದಾರೆ. ಈ ಮುದ್ದಾದ ಜೋಡಿಯನ್ನು ನೋಡಿ ಫ್ಯಾನ್ಸ್‌ ಖುಷಿಪಟ್ಟಿದ್ದಾರೆ.

 

View this post on Instagram

 

A post shared by Deepika Das (@deepika__das)

ಸದ್ಯ ದೀಪಿಕಾ ದಾಸ್‌ ಯಾವುದೇ ಸಿನಿಮಾಗಳಲ್ಲಿ ನಟಿಸುತ್ತಿಲ್ಲ. ಸೀರಿಯಲ್ ಮತ್ತು ಟಿವಿ ರಿಯಾಲಿಟಿ ಶೋನಲ್ಲಿ ಮಿಂಚಿ ಗೆದ್ದಿದ್ದಾರೆ. ಸಿನಿಮಾ ಬಗ್ಗೆ ಗುಡ್‌ ನ್ಯೂಸ್‌ ಕೊಡಲಿ ಅಂತ ಫ್ಯಾನ್ಸ್‌ ಕಾಯ್ತಿದ್ದಾರೆ.

News Desk Sandalwood Times

error: Content is protected !!