Vijay & Rashmika Mandanna ಮದುವೆಗೆ ಕನ್ನಡದಲ್ಲಿ ಇವರಿಗಷ್ಟೇ ಆಹ್ವಾನ- ಗೆಸ್ಟ್ ಲಿಸ್ಟ್ ಔಟ್
ವಿಜಯ್ (Vijay Devarakonda) ಮತ್ತು ರಶ್ಮಿಕಾ ಮಂದಣ್ಣ (Rashmika Mandanna) ಜೋಡಿ ಹಲವು ವರ್ಷಗಳ ಸುದೀರ್ಘ ಪ್ರೀತಿಗೆ ಫೆ.26ರಂದು ಮುನ್ನುಡಿ ಬರೆಯುತ್ತಿದ್ದಾರೆ. ನ್ಯಾಷನಲ್ ಸ್ಟಾರ್ ಆಗಿರೋ ಕನ್ನಡತಿ ರಶ್ಮಿಕಾ, ಕನ್ನಡದಲ್ಲಿ ಕೆಲವೇ ಕೆಲವರಿಗೆ ಮದುವೆಗೆ ಆಮಂತ್ರಣ ನೀಡಿದ್ದಾರೆ. ಯಾರಿಗೆಲ್ಲಾ ಮದುವೆ ಕರೆದಿದ್ದಾರೆ ಎಂಬ ವಿವರ ಇಲ್ಲಿದೆ.
ಕನ್ನಡದ ʻಅಂಜನಿಪುತ್ರʼ ಚಿತ್ರದಲ್ಲಿ ಅಪ್ಪುಗೆ ರಶ್ಮಿಕಾ ಜೋಡಿಯಾಗಿದ್ರು. ಪುನೀತ್ ಜೊತೆ ಉತ್ತಮ ಸ್ನೇಹ ಹೊಂದಿದ್ರು. ಹೀಗಾಗಿ ಪುನೀತ್ ಪತ್ನಿ ಅಶ್ವಿನಿಗೆ (Ashwini Puneeth Rajkumar) ಮದುವೆಗೆ ಆಮಂತ್ರಣ ನೀಡಿದ್ದಾರೆ. ನಟ ಶಿವಣ್ಣ, ಸುದೀಪ್, ಯಶ್ – ರಾಧಿಕಾ ಪಂಡಿತ್ ದಂಪತಿ, ವಿ. ರವಿಚಂದ್ರನ್, ಧ್ರುವ ಸರ್ಜಾ, ಗೋಲ್ಡನ್ ಸ್ಟಾರ್ ಗಣೇಶ್, ದೀಕ್ಷಿತ್ ಶೆಟ್ಟಿ, ಆಶಿಕಾ ರಂಗನಾಥ್, ಸಿಂಪಲ್ ಸುನಿ, ನಂದಕಿಶೋರ್, ಎ. ಹರ್ಷ ರನ್ನು ಆಮಂತ್ರಿಸಿದ್ದಾರೆ.

ಇನ್ನೂ ನಟಿಯ ಮೊದಲ ಚಿತ್ರ ʻಕಿರಿಕ್ ಪಾರ್ಟಿʼ. ಈ ಚಿತ್ರದ ನಟ ರಕ್ಷಿತ್ ಶೆಟ್ಟಿ ಆಗಲಿ, ನಿರ್ದೇಶಕ ರಿಷಬ್ ಶೆಟ್ಟಿ ಅವರನ್ನಾಗಲಿ ಅವರು ಆಹ್ವಾನ ನೀಡಿಲ್ಲ. ಶೆಟ್ಟಿ ಗ್ಯಾಂಗ್ ಮದುವೆ ಪತ್ರಿಕೆ ತಲುಪಿಲ್ಲ.

ನಿನ್ನೆ (ಫೆ.24) ಮಂತ್ರಾಲಯಕ್ಕೆ ರಿಷಬ್ ಬಂದ ಸಂಭ್ರಮದಲ್ಲಿ, ರಶ್ಮಿಕಾ ಮದುವೆಗೆ ಆಹ್ವಾನ ಬಂದಿದ್ಯಾ? ಎಂದು ಕೇಳಲಾದ ಪ್ರಶ್ನೆಗೆ ಥ್ಯಾಂಕ್ಯೂ ಎಂದು ಹೇಳಿ ತೆರಳಿದ್ದಾರೆ. ಉತ್ತರಿಸದೇ ನಟ ಹೋಗಿದ್ದಾರೆ.

