Virosh: ಕರ್ನಾಟಕದಲ್ಲೂ ಜರುಗಲಿದೆ ವಿಜಯ್, ರಶ್ಮಿಕಾ ಆರತಕ್ಷತೆ ಕಾರ್ಯಕ್ರಮ
ಕನ್ನಡತಿ ರಶ್ಮಿಕಾ ಮಂದಣ್ಣ- ವಿಜಯ್ (Vijay Devarakonda) ಮದುವೆ ಫೆ.26ರಂದು ಉದಯಪುರದಲ್ಲಿ ನಡೆಯಲಿದೆ. ಹಲವು ವರ್ಷಗಳ ಪ್ರೀತಿಗೆ ನಾಳೆ ಮದುವೆಯ ಮುದ್ರೆ ಒತ್ತಲಿದ್ದಾರೆ. ಉದಯಪುರದಲ್ಲಿ ಮದುವೆ, ಹೈದರಾಬಾದ್ನಲ್ಲಿ ಆರತಕ್ಷತೆ ಮಾತ್ರವಲ್ಲ. ಆದರೆ ಕರ್ನಾಟಕದಲ್ಲೂ ಮದುವೆ ಆರತಕ್ಷತೆ ಕಾರ್ಯಕ್ರಮ ನಿಗದಿಯಾಗಿದೆ.

ಫೆ.26ರಂದು ವಿರೋಷ್ ಜೋಡಿ ಎರಡೆರಡು ಬಾರಿ ಮದುವೆಯಾಗ್ತಿದ್ದಾರೆ. ತೆಲುಗು ಹಾಗೂ ಕೊಡವ ಪದ್ಧತಿಯಂತೆ ಮದುವೆ ನಡೆಯಲಿದೆ. ಆ ನಂತರ ಮಾ.4ರಂದು ಹೈದರಾಬಾದ್ನಲ್ಲಿ ಅದ್ಧೂರಿ ಆರತಕ್ಷತೆ ಕಾರ್ಯಕ್ರಮ ಆಯೋಜಿಸಲಾಗಿದೆ. ಇಡೀ ಭಾರತೀಯ ಚಿತ್ರರಂಗವೇ ಈ ಮದುವೆಗೆ ಸಾಕ್ಷಿಯಾಗಲಿದೆ.

ಇನ್ನೂ ರಶ್ಮಿಕಾ (Rashmika Mandanna) ಮೂಲತಃ ಕರ್ನಾಟಕದ ಕೊಡಗಿನವರು, ಇಲ್ಲಿ ಕದಲೂರು ಗ್ರಾಮದವರಾಗಿದ್ದಾರೆ. ರಶ್ಮಿಕಾ ತಂದೆ ಮದನ್ ಮಂದಣ್ಣ (Madan Mandanna) ಪ್ರಭಾವಿ ಉದ್ಯಮಿ. ಹೀಗಾಗಿ ಅಲ್ಲಿನ ಸ್ನೇಹಿತರ ಬಳಗ, ಕುಟುಂಬಸ್ಥರಿಗೆ, ರಶ್ಮಿಕಾ ಊರಿನ ಸ್ನೇಹಿತರಿಗಾಗಿ ಮತ್ತೊಮ್ಮೆ ಆರತಕ್ಷತೆ ಆಯೋಜಿಸಿದ್ದಾರೆ ಎನ್ನಲಾಗಿದೆ.

ಅವರ ಊರಿನಲ್ಲಿ ಮದನ್ ಮಂದಣ್ಣ ಅವರದ್ದೇ ಐಶಾರಾಮಿ ಕಲ್ಯಾಣ ಮಂಟಪವಿದೆ. ಹೀಗಾಗಿ ಇಲ್ಲೇ ಮದುವೆ ಆರತಕ್ಷತೆ ಮಾಡಲು ಕುಟುಂಬಸ್ಥರು ನಿರ್ಧರಿಸಿದ್ದಾರೆ. ಈ ಕಾರ್ಯಕ್ರಮವು ಏಪ್ರಿಲ್ ಆಯೋಜಿಸಲಾಗಿದೆಯಂತೆ. ವಿಜಯ್- ರಶ್ಮಿಕಾ ಹನಿಮೂನ್ ಮುಗಿಸಿಕೊಂಡು ಬಂದ ಬಳಿಕ ಹುಟ್ಟೂರಿನಲ್ಲಿ ಫಂಕ್ಷನ್ ನಡೆಯಲಿದೆ.

ಇನ್ನೂ ರಶ್ಮಿಕಾ, ಕನ್ನಡದಲ್ಲಿ ಕೆಲವೇ ಕೆಲವರಿಗೆ ಮದುವೆಗೆ ಆಮಂತ್ರಣ ನೀಡಿದ್ದಾರೆ. ಯಾರಿಗೆಲ್ಲಾ ಮದುವೆ ಕರೆದಿದ್ದಾರೆ ಎಂಬ ವಿವರ ಇಲ್ಲಿದೆ.ಕನ್ನಡದ ʻಅಂಜನಿಪುತ್ರʼ ಚಿತ್ರದಲ್ಲಿ ಅಪ್ಪುಗೆ ರಶ್ಮಿಕಾ ಜೋಡಿಯಾಗಿದ್ರು. ಪುನೀತ್ ಜೊತೆ ಉತ್ತಮ ಸ್ನೇಹ ಹೊಂದಿದ್ರು. ಹೀಗಾಗಿ ಪುನೀತ್ ಪತ್ನಿ ಅಶ್ವಿನಿಗೆ ಮದುವೆಗೆ ಆಮಂತ್ರಣ ನೀಡಿದ್ದಾರೆ. ನಟ ಶಿವಣ್ಣ, ಸುದೀಪ್, ಯಶ್ – ರಾಧಿಕಾ ಪಂಡಿತ್ ದಂಪತಿ, ವಿ. ರವಿಚಂದ್ರನ್, ಧ್ರುವ ಸರ್ಜಾ, ಗೋಲ್ಡನ್ ಸ್ಟಾರ್ ಗಣೇಶ್, ದೀಕ್ಷಿತ್ ಶೆಟ್ಟಿ, ಆಶಿಕಾ ರಂಗನಾಥ್, ಸಿಂಪಲ್ ಸುನಿ, ನಂದಕಿಶೋರ್, ಎ. ಹರ್ಷ ರನ್ನು ಆಮಂತ್ರಿಸಿದ್ದಾರೆ.

ಇನ್ನೂ ನಟಿಯ ಮೊದಲ ಚಿತ್ರ ʻಕಿರಿಕ್ ಪಾರ್ಟಿʼ. ಈ ಚಿತ್ರದ ನಟ ರಕ್ಷಿತ್ ಶೆಟ್ಟಿ (Rakshit Shetty) ಆಗಲಿ, ನಿರ್ದೇಶಕ ರಿಷಬ್ ಶೆಟ್ಟಿ ಅವರನ್ನಾಗಲಿ ಅವರು ಆಹ್ವಾನ ನೀಡಿಲ್ಲ. ಶೆಟ್ಟಿ ಗ್ಯಾಂಗ್ಗೆ ಮದುವೆ ಪತ್ರಿಕೆ ತಲುಪಿಸಿಲ್ಲ.

ನಿನ್ನೆ (ಫೆ.24) ಮಂತ್ರಾಲಯಕ್ಕೆ ರಿಷಬ್ ಬಂದ ಸಂಭ್ರಮದಲ್ಲಿ ರಶ್ಮಿಕಾ ಮದುವೆಗೆ ಆಹ್ವಾನ ಬಂದಿದ್ಯಾ? ಎಂದು ಕೇಳಲಾದ ಪ್ರಶ್ನೆಗೆ ಥ್ಯಾಂಕ್ಯೂ ಎಂದು ಹೇಳಿ ತೆರಳಿದ್ದಾರೆ. ಉತ್ತರಿಸದೇ ನಟ ಹೋಗಿದ್ದಾರೆ.

