Rashmika Mandanna ಮದುವೆಗೆ ಹೋಗಲ್ವಾ ಎಂದಿದ್ದಕ್ಕೆ ತಮನ್ನಾ ಭಾಟಿಯಾ ಏನಂದ್ರು ಗೊತ್ತಾ?
ಮಿಲ್ಕಿ ಬ್ಯೂಟಿ ತಮನ್ನಾ ಭಾಟಿಯಾ (Tamannaah Bhatia) ಸದ್ಯ ಬಾಲಿವುಡ್ ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಸದ್ಯ ಮುಂಬೈನಲ್ಲಿ ಕ್ಯಾಮೆರಾ ಕಣ್ಣಿಗೆ ಕಾಣಿಸಿಕೊಂಡ ಚೆಲುವೆಗೆ ರಶ್ಮಿಕಾ (Rashmika Mandanna) ಮದುವೆಗೆ ನೀವು ಹೋಗೋದಿಲ್ವಾ? ಅನ್ನೋ ಪ್ರಶ್ನೆ ತಮನ್ನಾಗೆ ಎದುರಾಗಿದೆ. ಅದಕ್ಕೆ ಮಿಲ್ಕಿ ಬ್ಯೂಟಿ ರಿಯಾಕ್ಟ್ ಮಾಡಿರೋ ವಿಡಿಯೋ ವೈರಲ್ ಆಗಿದೆ.

ಪಾಪರಾಜಿಯೊಬ್ಬರು, ರಶ್ಮಿಕಾ ಮದುವೆಯಿದೆ ನೀವು ಭಾಗಿಯಾಗಲ್ವಾ? ಎಂದು ಪ್ರಶ್ನಿಸಿದ್ದಾರೆ. ಅದಕ್ಕೆ ನಟಿ, ಕಂಗ್ರಾಟ್ಸ್, ಅವರಿಗೆ ಒಳ್ಳೆಯದಾಗಲಿ ಎಂದಿದ್ದಾರೆ. ನೀವು ಅವರ ಆರತಕ್ಷತೆಗೆ ಹೋಗ್ತೀರಾ ಎಂದು ಮತ್ತೆ ಕೇಳಲಾಗಿದೆ. ಇಲ್ಲ.. ಆ ದಿನ ಶೂಟಿಂಗ್ ಇದೆ. ಹೋಗಲು ಆಗೋದಿಲ್ಲ ಎಂದು ಹೇಳಿದ್ದಾರೆ. ಆದರೆ ನವಜೋಡಿಗೆ ಸ್ವೀಟ್ ಆಗಿ ವಿಶ್ ಮಾಡಿದ್ದಾರೆ. ಸದ್ಯ ಅವರು ಸಿದ್ಧಾರ್ಥ್ ಮಲ್ಹೋತ್ರಾ ಜೊತೆ ಸಿನಿಮಾ ಮಾಡ್ತಿದ್ದಾರೆ. ಅದರ ಶೂಟಿಂಗ್ ಮುಂಬೈನಲ್ಲಿ ಭರದಿಂದ ಸಾಗುತ್ತಿದೆ.

ರಶ್ಮಿಕಾ ಮಂದಣ್ಣ- ವಿಜಯ್ ಮದುವೆ ಫೆ.26ರಂದು ಉದಯಪುರದಲ್ಲಿ ನಡೆಯಲಿದೆ. ಹಲವು ವರ್ಷಗಳ ಪ್ರೀತಿಗೆ ನಾಳೆ ಮದುವೆಯ ಮುದ್ರೆ ಒತ್ತಲಿದ್ದಾರೆ. ಉದಯಪುರದಲ್ಲಿ ಮದುವೆ, ಹೈದರಾಬಾದ್ನಲ್ಲಿ ಆರತಕ್ಷತೆ ಮಾತ್ರವಲ್ಲ. ಆದರೆ ಕರ್ನಾಟಕದಲ್ಲೂ ಮದುವೆ ಆರತಕ್ಷತೆ ಕಾರ್ಯಕ್ರಮ ನಿಗದಿಯಾಗಿದೆ.

ಫೆ.26ರಂದು ವಿರೋಷ್ ಜೋಡಿ ಎರಡೆರಡು ಬಾರಿ ಮದುವೆಯಾಗ್ತಿದ್ದಾರೆ. ತೆಲುಗು ಹಾಗೂ ಕೊಡವ ಪದ್ಧತಿಯಂತೆ ಮದುವೆ ನಡೆಯಲಿದೆ. ಆ ನಂತರ ಮಾ.4ರಂದು ಹೈದರಾಬಾದ್ನಲ್ಲಿ ಅದ್ಧೂರಿ ಆರತಕ್ಷತೆ ಕಾರ್ಯಕ್ರಮ ಆಯೋಜಿಸಲಾಗಿದೆ. ಇಡೀ ಭಾರತೀಯ ಚಿತ್ರರಂಗವೇ ಈ ಮದುವೆಗೆ ಸಾಕ್ಷಿಯಾಗಲಿದೆ.

