ಟೀಕೆಗೆಲ್ಲಾ Rashmika Mandanna ಉತ್ತರ- ಮದುವೆ ಫೋಟೋ ಶೇರ್‌ ಮಾಡಿ ಎಮೋಷನಲ್‌ ಪೋಸ್ಟ್

ಟೀಕೆಗೆಲ್ಲಾ Rashmika Mandanna ಉತ್ತರ- ಮದುವೆ ಫೋಟೋ ಶೇರ್‌ ಮಾಡಿ ಎಮೋಷನಲ್‌ ಪೋಸ್ಟ್

ಕೊಡಗಿನ ಬೆಡಗಿ ರಶ್ಮಿಕಾ ಮಂದಣ್ಣ- ವಿಜಯ್‌ ದೇವರಕೊಂಡ (Vijay Devarakonda) ಮದುವೆ ಅದ್ಧೂರಿಯಾಗಿ ಜರುಗಿದೆ. ಈ ಬೆನ್ನಲ್ಲೇ ನಟಿ, ಈ ಹಿಂದೆ ತಾವು ಎದುರಿಸಿದ ಟೀಕೆಗೆಲ್ಲಾ ಉತ್ತರ ನೀಡಿದ್ದಾರೆ. ವಿಜಯ್‌ ಜೊತೆಗಿನ ಮದುವೆ ಪೋಸ್ಟ್‌ ಶೇರ್‌ ಮಾಡಿ ತಕ್ಕ ಉತ್ತರ ನೀಡಿದ್ದಾರೆ.

ಸಿಂಪಲ್‌ ಸ್ಟಾರ್‌ ರಕ್ಷಿತ್‌ ಶೆಟ್ಟಿ (Rakshit Shetty) ಜೊತೆ ಎಂಗೇಜ್‌ಮೆಂಟ್‌ ಆಗಿ ಮದುವೆಗೂ ಮುನ್ನವೇ ಈ ಸಂಬಂಧ ಮುರಿದು ಬಿದ್ದಿತ್ತು. ಅದಕ್ಕೆಲ್ಲಾ ರಶ್ಮಿಕಾರನ್ನೇ (Rashmika Mandanna) ಹೊಣೆ ಮಾಡಿದ್ದರು. ಇವರ ಬ್ರೇಕಪ್‌ಗೆ ಅಸಲಿ ಮ್ಯಾಟರ್‌ ಏನೆಂದು ಇಂದಿಗೂ ರಿವೀಲ್‌ ಆಗದೇ ಇದ್ದರೂ ಕೂಡ ರಶ್ಮಿಕಾ ಮಾತ್ರ ಕನ್ನಡಾಭಿಮಾನಿಗಳ ಕೆಂಗೆಣ್ಣಿಗೆ ಗುರಿಯಾಗಿದ್ರು. ಹೀಗಾಗಿ ಈಗ ತಮ್ಮ ಪ್ರೀತಿಯ ಪತಿಯ ಬಗ್ಗೆ ರಶ್ಮಿಕಾ ಗುಣಗಾನ ಮಾಡಿದ್ದಾರೆ.

ರಶ್ಮಿಕಾ ಮಂದಣ್ಣ ಹಂಚಿಕೊಂಡ ಮದುವೆ ಪೋಸ್ಟ್‌ನಲ್ಲಿ ಏನಿದೆ?.. ನಿಜವಾದ ಪ್ರೀತಿ ಹೇಗಿರುತ್ತೆ ಎಂದು ಕಲಿಸಿದ ವ್ಯಕ್ತಿ ವಿಜಯ್ ಎಂದು ಟೀಕೆಗೆಲ್ಲಾ ರಶ್ಮಿಕಾ ತಿರುಗೇಟು ನೀಡಿದ್ದಾರೆ.

ದೊಡ್ಡ ಕನಸು ಕಾಣುವುದನ್ನು ಹೇಳಿಕೊಟ್ಟಿದ್ದು ವಿಜಯ್‌ ಎಂದು ಪತಿ ಬಗ್ಗೆ ನಟಿ ಗುಣಗಾನ ಮಾಡಿದ್ದು, ನಾನು ಕುಣಿಯೋದನ್ನು, ಪ್ರಯಾಣ ಮಾಡೋದನ್ನು ಎಂದಿಗೂ ತಡೆಯದ ವ್ಯಕ್ತಿ ಎಂದಿದ್ದಾರೆ. ಈ ಮೂಲಕ ನನ್ನನ್ನು ಕಂಟ್ರೋಲ್‌ ಮಾಡಲು ಬಂದಿಲ್ಲ ಎಂಬುದನ್ನು ಕ್ಲ್ಯಾರಿಟಿ ನೀಡಿದ್ದಾರೆ.

ನಾನು ಕಂಡಂತಹ ಕನಸಿನ ಮಹಿಳೆಯಾಗಿ ಇಂದು ನಿಂತಿದ್ದೇನೆ ಅದಕ್ಕೆಲ್ಲಾ ಕಾರಣ ನೀನೇ ಎಂದು ವಿಜಯ್‌ ಬಗ್ಗೆ ಲವ್ಲಿಯಾಗಿ ಹೇಳಿದ್ದಾರೆ. ನಿನ್ನ ಬಗ್ಗೆ ಇರುವ ಫೀಲಿಂಗ್ಸ್ ವಿವರಿಸಲು ನನಗೆ ಪದಗಳೇ ಸಾಲುವುದಿಲ್ಲ ಎನ್ನುತ್ತಾ ಶ್ರೀವಲ್ಲಿ ಎಮೋಷನಲ್‌ ಆಗಿದ್ದಾರೆ.

ನನ್ನ ಸಾಧನೆ, ಕಷ್ಟಗಳಿಗೆ, ಖುಷಿ- ದುಃಖಕ್ಕೆ ಇಂದು ಒಂದು ಅರ್ಥ ಸಿಕ್ಕಿದೆ. ನೀನೀಗ ನನ್ನ ಜೀವನದ ಭಾಗವೇ ಆಗಿದ್ದೀಯಾ. ನಿನ್ನ ಪತ್ನಿ ಎಂದೂ ಕರೆಸಿಕೊಳ್ಳುವುದು ನನಗೆ ಹೆಮ್ಮೆ ಎಂದು ಸಂತಸ ವ್ಯಕ್ತಪಡಿಸಿದ್ದಾರೆ. ಬಳಿಕ ಈಗ ಇದು ಪಾರ್ಟಿ ಟೈಮ್‌ ಎಂದಿದ್ದಾರೆ ಶ್ರೀವಲ್ಲಿ. ಕಾಂಟ್ರವರ್ಸಿಗೆಲ್ಲಾ ಮದುವೆ ಪೋಸ್ಟ್‌ ಮೂಲಕ ಕ್ಲ್ಯಾರಿಟಿ ನೀಡಿದ್ದಾರೆ.

Keep It Private Until Its Permanent ಅನ್ನೋ ಮಾತನ್ನೇ ಈ ಜೋಡಿ ಫಾಲೋ ಮಾಡಿದೆ. ಮದುವೆಗೂ ೩ ದಿನ ಮುಂಚೆ ತಾವು ಮದುವೆಯಾಗೋದನ್ನು ವಿರೋಷ್‌ ಅಫಿಷಿಯಲ್‌ ಆಗಿ ಅನೌನ್ಸ್‌ ಮಾಡಿದ್ದರು.

News Desk Sandalwood Times

error: Content is protected !!