ಹೋದಲೆಲ್ಲ Fans ಅತ್ತಿಗೆ ಹೇಗಿದ್ದಾರೆನ್ನುತ್ತಿದ್ದರು- Rashmika ಬಗ್ಗೆ ಆನಂದ್ ದೇವರಕೊಂಡ ಗುಣಗಾನ
ಟಾಲಿವುಡ್ ಅಂಗಳದಲ್ಲಿ ವಿರೋಷ್ ಮದುವೆ ಸಂಭ್ರಮ ಮುಗಿಲು ಮುಟ್ಟಿದೆ. ರಶ್ಮಿಕಾ-ವಿಜಯ್ ಮದುವೆಗೆ (ಫೆ.26) ಅಧಿಕೃತ ಮುದ್ರೆ ಬಿದ್ದಿದೆ. ಈ ಹಿನ್ನೆಲೆ ವಿಜಯ್ (Vijay Devarakonda) ಸಹೋದರ ಆನಂದ್ ದೇವರಕೊಂಡ (Anand Devarakonda) ತನ್ನ ಅತ್ತಿಗೆ ರಶ್ಮಿಕಾ ಕುರಿತು ಪೋಸ್ಟ್ ಹಂಚಿಕೊಂಡಿದ್ದಾರೆ.
View this post on Instagram
ವಿರೋಷ್ ಜೊತೆಗಿನ ಮದುವೆಯ ಸುಂದರ ಕ್ಷಣಗಳ ಫೋಟೋವನ್ನು ಆನಂದ್ ಇನ್ಸ್ಟಾಗ್ರಾಂನಲ್ಲಿ ಶೇರ್ ಮಾಡಿ, ನಾನು ಹೋದಲ್ಲೆಲ್ಲ ಹಲವಾರು ಬಾರಿ ಅಭಿಮಾನಿಗಳು ‘ಅತ್ತಿಗೆ ಹೇಗಿದ್ದಾರೆ’ ಎಂದು ಕಿರುಚುತ್ತಿದ್ದರು. ಆಗ ಅವರಿಗೆ ಹೇಗೆ ಪ್ರತಿಕ್ರಿಯೆ ನೀಡಬೇಕು ಎಂಬುದು ನನಗೆ ಗೊತ್ತಾಗುತ್ತಿರಲಿಲ್ಲ. ಇಂದು ನನ್ನ ಅಣ್ಣ ಮದುವೆಯಾಗಿದ್ದಾನೆ. ಪಾಸಿಟಿವ್ ಮತ್ತು ಸಹಾನುಭೂತಿಯ ವ್ಯಕ್ತಿಯನ್ನು ಅತ್ತಿಗೆಯಾಗಿ ನಾನು ಪಡೆದುಕೊಂಡಿದ್ದೇನೆ. ತಮ್ಮ ಜೀವನವಿಡಿ ಇವರಿಬ್ಬರು ಹೀಗೆಯೇ ನಗು ನಗುತ್ತಾ ಇರಲಿ. ನಗುತ್ತಲೇ ಜೀವನ ಪರ್ಯಂತ ಜೊತೆಯಾಗಿರಲಿ ಎಂದು ಹಾರೈಸುತ್ತೇನೆ ಎಂದಿದ್ದಾರೆ.
View this post on Instagram
ಆನಂದ್ ಜೊತೆ ರಶ್ಮಿಕಾ (Rashmika Mandanna) ಅವರಿಗೆ ಉತ್ತಮ ಒಡನಾಟವಿದೆ. ಈ ಹಿಂದೆ ಹಲವು ಕಾರ್ಯಕ್ರಮಗಳಲ್ಲಿ ಆನಂದ್‌ರನ್ನು ತನ್ನ ಸಹೋದರ ಎಂದೇ ನಟಿ ಹೇಳಿದ್ದರು. ಆನಂದ್ ಹೊಸ ಸಿನಿಮಾಗಳಿಗೆ ರಶ್ಮಿಕಾ ಆಗಮಿಸಿ ಕ್ಲ್ಯಾಪ್ ಮಾಡಿ ಚಿತ್ರ ಸಕ್ಸಸ್ ಕಾಣಲಿ ಎಂದು ಹೇಳಿ ಹೋಗುತ್ತಿದ್ದರು.

