ಮದುವೆ ಬಳಿಕ ಮೊದಲ ಬಾರಿಗೆ ಪಬ್ಲಿಕ್ ಆಗಿ ಕಾಣಿಸಿಕೊಂಡ ರಶ್ಮಿಕಾ, ವಿಜಯ್ ದಂಪತಿ
ನ್ಯಾಷನಲ್ ಕ್ರಶ್ ರಶ್ಮಿಕಾ ಮಂದಣ್ಣ- ವಿಜಯ್ ದೇವರಕೊಂಡ (Vijay Devarakonda) ಮದುವೆ ಫೆ.26ರಂದು ಅದ್ಧೂರಿಯಾಗಿ ಜರುಗಿದೆ. ಈ ಬೆನ್ನಲ್ಲೇ ಮದುವೆಯ ಬಳಿಕ ವಿರೋಷ್ ಜೋಡಿ ಮೊದಲ ಬಾರಿಗೆ ಕ್ಯಾಮೆರಾ ಕಣ್ಣಿಗೆ ಕಾಣಿಸಿಕೊಂಡಿದ್ದಾರೆ.

ಮದುವೆ ಬಳಿಕ ಹೈದರಾಬಾದ್ ಏರ್ಪೋರ್ಟ್ನಲ್ಲಿ ರಶ್ಮಿಕಾ- ವಿಜಯ್ ಜೋಡಿ ಕ್ಯಾಮೆರಾ ಮುಂದೆ ಬಂದಿದ್ದಾರೆ. ಪಬ್ಲಿಕ್ನಲ್ಲಿ ಪಾಪರಾಜಿಳ ಮುಂದೆ ವಿರೋಷ್ ಜೋಡಿ ಕೈಬೀಸಿದ್ದಾರೆ. ಮದುವೆಯಾದ ಸಂಭ್ರಮ ಇಬ್ಬರ ಮುಖದಲ್ಲೂ ಎದ್ದು ಕಾಣುತ್ತಿತ್ತು. ಇನ್ನೂ ಅಲ್ಲಿದ್ದ ಮಂದಿ ರಶ್ಮಿಕಾ ದೇವರಕೊಂಡ ಎಂದಿದ್ದಕ್ಕೆ ನಟಿ ನಾಚಿ ನೀರಾಗಿದ್ದಾರೆ. ಬಳಿಕ ಇಬ್ಬರೂ ಕ್ಯಾಮೆರಾಗೆ ಪ್ಲೇನ್ ಕಿಸ್ ಮಾಡಿ ಅಲ್ಲಿಂದ ತೆರಳಿದ್ದಾರೆ.

ಮದುವೆ ಆಯ್ತು, ಈಗ ಹೈದರಾಬಾದ್ನ ವಿಜಯ್ ನಿವಾಸದಲ್ಲಿ ಸೊಸೆ ರಶ್ಮಿಕಾರನ್ನು (Rashmika Mandanna) ಮನೆತುಂಬಿಸಿಕೊಳ್ಳೋ ಶಾಸ್ತ್ರವಿದೆ. ಆ ನಂತರ ಮಾ.೪ರಂದು ಹೈದರಾಬಾದ್ನಲ್ಲಿ ಅದ್ಧೂರಿಯಾಗಿ ಆರತಕ್ಷತೆ ಫಂಕ್ಷನ್ ಜರುಗಲಿದೆ.

