ʻಅಮೃತಧಾರೆʼ ಖ್ಯಾತಿಯ ರಾಣವ್‌ ಜೊತೆ ಭಾರ್ಗವಿ LLB ನಟಿ ರಾಧಾ ನಿಶ್ಚಿತಾರ್ಥ

ʻಅಮೃತಧಾರೆʼ ಖ್ಯಾತಿಯ ರಾಣವ್‌ ಜೊತೆ ಭಾರ್ಗವಿ LLB ನಟಿ ರಾಧಾ ನಿಶ್ಚಿತಾರ್ಥ

‘ಭಾರ್ಗವಿ LLB’ ಸೀರಿಯಲ್‌ ಮೂಲಕ ಅಭಿಮಾನಿಗಳ ಮನಗೆದ್ದ ನಟಿ ರಾಧಾ ಭಗವತಿ (Radha Bhagavati) ಫ್ಯಾನ್ಸ್‌ಗೆ ಗುಡ್‌ ನ್ಯೂಸ್‌ ಕೊಟ್ಟಿದ್ದಾರೆ. ರೀಲ್‌ ಹೀರೋ ಜೊತೆ ರಿಯಲ್‌ ಆಗಿ ರಾಧಾ ಎಂಗೇಜ್‌ಮೆಂಟ್‌ ಮಾಡಿಕೊಂಡಿದ್ದಾರೆ.

‘ಅಮೃತಧಾರೆ’ ಸೀರಿಯಲ್‌ನಲ್ಲಿ ಕೆಡಿ ಜೆಡಿಗೆ ಪತ್ನಿಯಾಗಿ ಮಲ್ಲಿ ಪಾತ್ರದಲ್ಲಿ ನಟಿಸಿದ್ರು ರಾಧಾ. ಈ ಧಾರಾವಾಹಿಯಲ್ಲಿ ದೂರ ಆಗಿದ್ರು, ಆದರೆ ರಿಯಲ್‌ ಲೈಫ್‌ನಲ್ಲಿ ಇಬ್ಬರೂ ಜೊತೆಯಾಗಿದ್ದಾರೆ. Finally ಎಂದು ನಟಿ ಕ್ಯಾಪ್ಷನ್‌ ಕೊಟ್ಟು ರಾಣವ್‌ (Raanav Gowda) ಜೊತೆ ನಿಶ್ಚಿತಾರ್ಥ ಆಗಿರೋದನ್ನು ಅಧಿಕೃತಪಡಿಸಿದ್ದಾರೆ. ಹೊಸ ಜೋಡಿಗೆ ಅಭಿಮಾನಿಗಳಿಂದ ಶುಭಾಶಯಗಳ ಸುರಿಮಳೆ ಹರಿದು ಬರುತ್ತಿದೆ.

 

View this post on Instagram

 

A post shared by Radha Bhagavati (@radha_bhagavati)

ʻಭಾರ್ಗವಿ LLB’ ಸೀರಿಯಲ್‌ನಲ್ಲಿ(Bhargavi LLB) ನಾಯಕಿಯಾಗಿರೋ ರಾಧಾ, ಈ ಹಿಂದೆ ʻಅಮೃತಧಾರೆʼ ಸೀರಿಯಲ್‌ನಲ್ಲಿ ಪೋಷಕ ಪಾತ್ರದಲ್ಲಿ ನಟಿಸಿದ್ದರು. ಆಗ ರಾಣವ್‌ ಅವರಿಗೂ ರಾಧಾಗೂ ಪರಿಚಯವಾಗಿದೆ. ಅಂದಿನ ಆ ಸ್ನೇಹವೇ ಇದೀಗ ಮದುವೆಗೆ ಮುನ್ನುಡಿ ಬರೆದಿದೆ. ಹಾಗಾದ್ರೆ ಇಬ್ಬರ ರಿಯಲ್‌ ಕಹಾನಿಯೇನು? ಮದುವೆ ಯಾವಾಗ ಎಂಬುದನ್ನು ಈ ಜೋಡಿ ರಿವೀಲ್‌ ಮಾಡ್ತಾರಾ? ಎಂದು ಕಾದುನೋಡಬೇಕಿದೆ.

News Desk Sandalwood Times

error: Content is protected !!