ವಿಜಯ್‌ಗೆ ‘ಏನಯ್ಯಾ ಸಾಮಿʼ ಎಂದ ರಶ್ಮಿಕಾ- Virosh ಫ್ಯಾನ್ಸ್‌ಗೆ ಮತ್ತೊಂದು ಗುಡ್ ನ್ಯೂಸ್
ವಿಜಯ್, ರಶ್ಮಿಕಾ (Rashmika Mandanna) ಮದುವೆಯ ಮೂಲಕ ಗುಡ್ ನ್ಯೂಸ್ ಕೊಟ್ಟ ಬೆನ್ನಲ್ಲೇ ವಿರೋಷ್ ಅಭಿಮಾನಿಗಳಿಗೆ ಮತ್ತೊಂದು ಸರ್ಪ್ರೈಸ್ ಕೊಟ್ಟಿದ್ದಾರೆ. ವಿಜಯ್‌ಗೆ `ಏನಯ್ಯಾ ಸಾಮಿ’ ಎಂದಿರೋ ರಶ್ಮಿಕಾ ಅವರ ರೊಮ್ಯಾಂಟಿಕ್ ವಿಡಿಯೋವೊಂದನ್ನು ರಿಲೀಸ್ ಮಾಡಿದ್ದಾರೆ. ರಣಬಾಲಿ ಚಿತ್ರದ ಬ್ಯೂಟಿಫುಲ್ ಸಾಂಗ್ ರಿಲೀಸ್ ಆಗಿದೆ.

ಗೀತ ಗೋವಿಂದಂ, ಡಿಯರ್ ಕಾಮ್ರೇಡ್ ಚಿತ್ರಗಳ ಬಳಿಕ ರಣಬಾಲಿ ಮೂಲಕ ವಿಜಯ್ – ರಶ್ಮಿಕಾ ಒಂದಾಗುತ್ತಿದ್ದಾರೆ. ರಿಯಲ್ ಲೈಫ್‌ನಲ್ಲಿ ಜೊತೆಯಾಗಿರೋದು ವಿರೋಷ್ ಫ್ಯಾನ್ಸ್‌ಗೆ ಖುಷಿ ಕೊಟ್ಟಿದೆ. ಈಗ ಮತ್ತೆ ರಣಬಾಲಿ ಚಿತ್ರಕ್ಕಾಗಿ ಕೈಜೋಡಿಸಿದ್ದು ಅಭಿಮಾನಿಗಳಲ್ಲಿ ಖುಷಿ ದುಪ್ಪಟ್ಟು ಮಾಡಿದೆ.

ʻರಣಬಾಲಿʼ (Ranabaali) ಐತಿಹಾಸಿಕ ಸಿನಿಮಾ ಆಗಿದೆ. ದೇವರಕೊಂಡ (Vijay Devarakonda) ಸ್ವಾತಂತ್ರ್ಯ ಹೋರಾಟಗಾರನಾಗಿ ರಣಬಾಲಿ ಪಾತ್ರದಲ್ಲಿ ಕಾಣಿಸಿಕೊಂಡ್ರೆ, ರಶ್ಮಿಕಾ ಅವರ ಪತ್ನಿ ಜಯಮ್ಮ ಪಾತ್ರಕ್ಕೆ ಜೀವ ತುಂಬಿದ್ದಾರೆ. ಈಗ ಚಿತ್ರತಂಡ ಈ ಜೋಡಿಯ ರೊಮ್ಯಾಂಟಿಕ್ ದೃಶ್ಯ ಹೊಂದಿರುವ ನವಜೋಡಿಯ ಸಾಂಗ್ ಅನ್ನು ರಿವೀಲ್ ಮಾಡಿದೆ. ರೆಟ್ರೋ ಸ್ಟೈಲ್‌ನಲ್ಲಿಯೇ ಮೂಡಿ ಬಂದಿದೆ.

‘ಪುಷ್ಪ 2’ (Pushpa 2) ನಿರ್ಮಾಣ ಮಾಡಿದ್ದ ಮೈತ್ರಿ ಮೂವಿ ಮೇಕರ್ಸ್ ಮತ್ತೆ ರಶ್ಮಿಕಾ ಜೊತೆ ಕೈಜೋಡಿಸಿದ್ದಾರೆ. ಸಿನಿಮಾಗೆ ರಾಹುಲ್ ನಿರ್ದೇಶನ ಮಾಡಿದ್ದಾರೆ. ಸೆ.11ರಂದು ಕನ್ನಡ, ತೆಲುಗು ಸೇರಿದಂತೆ ಹಲವು ಭಾಷೆಗಳಲ್ಲಿ ರಿಲೀಸ್ ಆಗಲಿದೆ. ವಿರೋಷ್ ಮದುವೆ ಬಳಿಕ ರಿಲೀಸ್ ಆಗ್ತಿರೋ ಮೊದಲ ಸಿನಿಮಾ ಇದಾಗಿದೆ. ಚಿತ್ರ ನೋಡಲು ಫ್ಯಾನ್ಸ್ ಕೌತುಕದಿಂದ ಕಾಯ್ತಿದ್ದಾರೆ ಫ್ಯಾನ್ಸ್.

