Radhika Pandit Birthday: ಸೊಸೆಗೆ Yash ಅಮ್ಮ ಪುಷ್ಪ ಲವ್ಲಿ ವಿಶ್
ಸ್ಯಾಂಡಲ್‌ವುಡ್ ಸಿಂಡ್ರೇಲಾ ರಾಧಿಕಾ ಪಂಡಿತ್ (Radhika Pandit) ಅವರು ಇಂದು (ಮಾ.7) 42ನೇ ವರ್ಷದ ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾರೆ. ಈ ಹಿನ್ನೆಲೆ ಮುದ್ದು ಸೊಸೆಗೆ ಯಶ್ ಅಮ್ಮ ಪುಷ್ಪ ಅವರು ಪ್ರೀತಿಯಿಂದ ಶುಭಕೋರಿದ್ದಾರೆ.

ಪುಷ್ಪ ಅರುಣ್ ಕುಮಾರ್ ಅವರು ಹಂಚಿಕೊಂಡಿರೋ ಪೋಸ್ಟ್‌ನಲ್ಲಿ, ನಮ್ಮ ಅದ್ಭುತ ಸೊಸೆಗೆ ಹುಟ್ಟುಹಬ್ಬದ ಶುಭಾಶಯಗಳು. ನಿನ್ನ ಜೀವನ ಯಾವಾಗಲೂ ಖುಷಿ ಹಾಗೂ ಆಶೀರ್ವಾದಗಳಿಂದ ತುಂಬಿರಲಿ ಎಂದು ಹಾರೈಸಿದ್ದಾರೆ. ಅಷ್ಟೇ ಅಲ್ಲದೆ ಸೊಸೆಯ ಜೊತೆಗಿದ್ದ ಹಳೆಯ ಫೋಟೋ ಒಂದನ್ನು ಶೇರ್ ಮಾಡಿದ್ದಾರೆ. ಈ ಪೋಸ್ಟ್‌ಗೆ ಅಭಿಮಾನಿಗಳ ಶುಭಾಶಯಗಳ ಸುರಿಮಳೆಯೇ ಹರಿದು ಬರುತ್ತಿದೆ.
View this post on Instagram
2016ರ ಡಿ.9ರಂದು ಯಶ್-ರಾಧಿಕಾ ಅದ್ಧೂರಿಯಾಗಿ ಮದುವೆಯಾದರು. ಹಲವು ವರ್ಷಗಳ ಪ್ರೀತಿಗೆ ಮದುವೆಯ ಮುದ್ರೆ ಒತ್ತಿದ್ರು. ಇದೀಗ 2 ಮಕ್ಕಳೊಂದಿಗೆ ಖುಷಿ ದಾಂಪತ್ಯ ನಡೆಸುತ್ತಿದ್ದಾರೆ.

ಯಶ್ (Yash) ಜತೆ ನಂದಗೋಕುಲ ಸೀರಿಯಲ್, ಮೊಗ್ಗಿನ ಮನಸ್ಸು, Mr & Mrs ರಾಮಾಚಾರಿ, ಡ್ರಾಮಾ, ಸಂತು Straight Forward ಚಿತ್ರಗಳಲ್ಲಿ ಜೊತೆಯಾಗಿ ನಟಿಸಿದ್ದಾರೆ.

