ಸಿನಿಮಾಗೆ ಕಮ್‌ ಬ್ಯಾಕ್‌ ಮಾಡೋದಿಲ್ವಾ ರಾಧಿಕಾ ಪಂಡಿತ್‌?- ರಾಕಿಂಗ್‌ ಸ್ಟಾರ್‌ ವೈಫ್‌ ರಿಯಾಕ್ಷನ್

ಸಿನಿಮಾಗೆ ಕಮ್‌ ಬ್ಯಾಕ್‌ ಮಾಡೋದಿಲ್ವಾ ರಾಧಿಕಾ ಪಂಡಿತ್‌?- ರಾಕಿಂಗ್‌ ಸ್ಟಾರ್‌ ವೈಫ್‌ ರಿಯಾಕ್ಷನ್

ಸ್ಯಾಂಡಲ್‌ವುಡ್‌ ಸಿಂಡ್ರೆಲ್ಲಾ ರಾಧಿಕಾ ಪಂಡಿತ್‌ (Radhik Pandit) ಅವರು ಮತ್ತೆ ಸಿನಿಮಾ ಮಾಡಬೇಕು ಅನ್ನೋದು ಅದೆಷ್ಟೋ ಅಭಿಮಾನಿಗಳ ಕನಸು. ಹೀಗಾಗಿ ಮತ್ತೆ ಸಿನಿಮಾ ಮಾಡುವ ಕುರಿತು ನಟಿ ರಿಯಾಕ್ಟ್‌ ಮಾಡಿದ್ದಾರೆ.

ಕಮ್‌ಬ್ಯಾಕ್‌ ಬಗ್ಗೆ ಫ್ಯಾನ್ಸ್‌ ಕೇಳ್ತಿರೋದು ನನಗೆ ಖುಷಿ ಇದೆ. ರಾಧಿಕಾ ಪಂಡಿತ್‌ ಅವರ ನಟನೆಯನ್ನ ನಾವು ನೋಡಬೇಕು ಅಂತ ಅವರು ಆಸೆ ಪಡ್ತಿದ್ದಾರೆ ಅನ್ನೋದು ತುಂಬಾ ಖುಷಿ ಇದೆ. ಆದರೆ, ಸದ್ಯಕ್ಕೆ ಆ ಬಗ್ಗೆ ನಾನು ಯೋಚನೆ ಮಾಡ್ತಿಲ್ಲ ಎಂದು ರಾಧಿಕಾ ಪಂಡಿತ್ ಹೇಳಿದ್ದಾರೆ.

ಯಶ್‌ (Yash) ನಟನೆಯ ‘ಟಾಕ್ಸಿಕ್‌ ಸಿನಿಮಾ (Toxic) ಬಗ್ಗೆ ಒಂದು ವರ್ಡ್‌ʼ ಅನ್ನೋ ಪ್ರಶ್ನೆಗೆ, ಏನನ್ನೂ ಮಾತನಾಡದೇ, ಕೈಯಲ್ಲಿ ʻನೋʼ ಎಂದು ಸನ್ನೆ ಮಾಡಿ ಹೊರಟೇ ಬಿಟ್ರು ರಾಧಿಕಾ ಪಂಡಿತ್.

ಕಡೆಯದಾಗಿ 2016ರಲ್ಲಿ ತೆರೆಕಂಡ ʻಆದಿಲಕ್ಷ್ಮಿ ಪುರಾಣʼ ಚಿತ್ರದಲ್ಲಿ ನಿರೂಪ್‌ ಭಂಡಾರಿ ಜೊತೆ ರಾಕಿಂಗ್‌ ಕ್ವೀನ್‌ ರಾಧಿಕಾ ಜೋಡಿಯಾಗಿ ಕಾಣಿಸಿಕೊಂಡರು.

News Desk Sandalwood Times

error: Content is protected !!