ಬ್ಯೂಟಿಫುಲ್ ಆಗಿದೆ Vijay, Rashmika ಮೆಹಂದಿ ಫಂಕ್ಷನ್ ಫೋಟೋಸ್
ಕೊಡಗಿನ ಬೆಡಗಿ ರಶ್ಮಿಕಾ ಮಂದಣ್ಣ (Rashmika Mandanna) ಅವರು ದೇವರಕೊಂಡ (Vijay Devarakonda) ಜೊತೆ ಮದುವೆಯಾಗಿ ಖುಷಿಯಾಗಿ ಜೀವನ ನಡೆಸುತ್ತಿದ್ದಾರೆ. ಸದ್ಯ ಅವರ ಮದುವೆಯ ಮೆಹಂದಿ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗ್ತಿದೆ.

ಕಲರ್ಫುಲ್ ಡ್ರೆಸ್ನಲ್ಲಿ ವಿರೋಷ್ (Virosh) ಜೋಡಿ ಮುದ್ದಾಗಿ ಕಾಣಿಸಿಕೊಂಡಿದ್ದಾರೆ. ಮದುವೆಯಂದು ವಧು ರಶ್ಮಿಕಾ ಸಖತ್ ಕ್ಯೂಟ್ ಆಗಿ ಕಾಣಿಸಿಕೊಂಡಿದ್ದಾರೆ.

ತಂಗಿ ಶಿಮನ್ ಮಂದಣ್ಣ ಭುಜದ ಮೇಲೆ ರಶ್ಮಿಕಾ ತಲೆ ಇಟ್ಟು ಭಾವುಕರಾಗಿರೋದು ಫ್ಯಾನ್ಸ್ ಗಮನ ಸೆಳೆದಿದೆ. ನಟಿಯ ಪೋಷಕರು ಅಳಿಯ ವಿಜಯ್ಗೆ ಆರತಿ ಎತ್ತಿರೋದು ಹೈಲೆಟ್ ಆಗಿದೆ.

ರಶ್ಮಿಕಾ ಮುಖದ ಮೇಲೆ ಕುಂಕುಮ ಇಟ್ಟಿರೋದ್ರಿಂದ ನಟಿ ಮತ್ತಷ್ಟು ಮುದ್ದಾಗಿ ಕಾಣ್ತಿದ್ದಾರೆ. ಒಟ್ನಲ್ಲಿ ಮದುವೆ ಫೋಟೋ ಬಳಿಕ ಮೆಹಂದಿ ಫಂಕ್ಷನ್ ಫೋಟೋಗಳು ಕೂಡ ಸೋಶಿಯಲ್ ಮೀಡಿಯಾದಲ್ಲಿ ಹಲ್ಚಲ್ ಎಬ್ಬಿಸಿದೆ.

ಫೆ.26ರಂದು ವಿಜಯ್-ರಶ್ಮಿಕಾ ಉದಯಪುರದಲ್ಲಿ ಅದ್ಧೂರಿಯಾಗಿ ಮದುವೆಯಾದರು. ಹಲವು ವರ್ಷಗಳ ಪ್ರೀತಿಗೆ ಮುನ್ನುಡಿ ಬರೆದರು.

