ಮದುವೆ ಹಿನ್ನೆಲೆ ʻಗಂಧದಗುಡಿʼ ಸೀರಿಯಲ್ಗೆ ಸಂಜನಾ ಗುಡ್ಬೈ- ಹೊಸ ನಾಯಕಿ ಎಂಟ್ರಿ!
ಕಿರುತೆರೆಯ ಮುದ್ದು ಮುಖದ ನಟಿ ಸಂಜನಾ ಬುರ್ಲಿ (Sanjana Burli) ʻಗಂಧದಗುಡಿʼ ಸೀರಿಯಲ್ನ (Gandhadagudi) ಚಂದನಾ ಆಗಿ ಕರ್ನಾಟಕದ ಮನೆಮಾತಾಗಿದ್ರು. ಇದೀಗ ದಿಢೀರ್ ಅಂತ ʻಗಂಧದಗುಡಿʼ ಸೀರಿಯಲ್ಗೆ ನಟಿ ಗುಡ್ಬೈ ಹೇಳಿದ್ದಾರೆ.

ಪುಟ್ಟಕ್ಕನ ಮಕ್ಕಳು, ಗಂಧದಗುಡಿ ಸೀರಿಯಲ್ ಮೂಲಕ ಮನಗೆದ್ದ ನಟಿ ಸಂಜನಾ ಅವರ ರಿಯಲ್ ಲೈಫ್ನಲ್ಲಿ ಮದುವೆಗೆ (Wedding) ಸಿದ್ಧತೆ ನಡೆಯುತ್ತಿದೆ. ಇದೇ ಮಾರ್ಚ್ನಲ್ಲಿ ಕುಟುಂಬಸ್ಥರು ಸಮ್ಮತಿಸಿದ ವರ ಸಮರ್ಥ್ (Samarth) ಜೊತೆ ಹಸೆಮಣೆ ಏರಲು ನಟಿ ರೆಡಿಯಾಗಿದ್ದಾರೆ.

ಹೀಗಾಗಿ ‘ಗಂಧದಗುಡಿ’ ಸೀರಿಯಲ್ನಿಂದ ನಟಿ ಹೊರನಡೆದಿದ್ದಾರೆ. ಅದಷ್ಟೇ ಅಲ್ಲ, ಉನ್ನತ ಶಿಕ್ಷಣ ಕೂಡ ಮಾಡ್ತಿದ್ರು. ಅದರ ಪರೀಕ್ಷೆ ಕೂಡ ಮಾರ್ಚ್ನಲ್ಲೇ ನಿಗದಿಯಾಗಿದೆ. ಈ ಹಿನ್ನೆಲೆ ಸೀರಿಯಲ್ ತೊರೆಯುವ ನಿರ್ಧಾರ ಕೈಗೊಂಡಿದ್ದಾರೆ.

ಇದೀಗ ಚಂದನಾ ಪಾತ್ರಕ್ಕೆ ಹೊಸ ನಟಿಯ ಆಯ್ಕೆ ಆಗಿದೆ. ನಟಿ ಸ್ನೇಹಾ ಮಂಜುನಾಥ್(Sneha Manjunath) ಎಂಬುವವರು ಆಯ್ಕೆ ಆಗಿದ್ದಾರೆ. ಈ ಹಿಂದೆ ಅವರು ರಾಮಾಚಾರಿ, ಶುಭಸ್ಯ ಶೀಘ್ರಂ ಸೀರಿಯಲ್ನಲ್ಲಿ ನಟಿಸಿದ್ದರು.

