Anushka Shetty: 44ನೇ ವಯಸ್ಸಿಗೆ ಮದುವೆಗೆ ಸಿದ್ಧರಾದ್ರಾ ಸ್ವೀಟಿ?

Anushka Shetty: 44ನೇ ವಯಸ್ಸಿಗೆ ಮದುವೆಗೆ ಸಿದ್ಧರಾದ್ರಾ ಸ್ವೀಟಿ?

ರಾವಳಿ ಬೆಡಗಿ ಅನುಷ್ಕಾ ಶೆಟ್ಟಿ (Anushka Shetty) ಅವರು ಸಿನಿಮಾಗಿಂತ ವೈಯಕ್ತಿಕ ವಿಚಾರವಾಗಿಯೇ ಹೆಚ್ಚೆಚ್ಚು ಸುದ್ದಿಯಾಗ್ತಿದ್ದಾರೆ. 44ನೇ ವಯಸ್ಸಿಗೆ ಹಸೆಮಣೆ (Wedding) ಏರಲು ಸಜ್ಜಾಗಿದ್ದಾರೆ ಎನ್ನಲಾದ ಸುದ್ದಿಯೊಂದು ಚರ್ಚೆಗೆ ಗ್ರಾಸವಾಗಿದೆ.

ಸ್ವೀಟಿ ಅನುಷ್ಕಾ ಶೆಟ್ಟಿ ಅವರ ಮದುವೆ ಮ್ಯಾಟರ್‌ ಮತ್ತೆ ಮುನ್ನೆಲೆಗೆ ಬಂದಿದೆ. ಬೆಂಗಳೂರಿನ ಉದ್ಯಮಿ ಜೊತೆ ಅನುಷ್ಕಾ ಮದುವೆ ಮಾಡಲು ಕುಟುಂಬಸ್ಥರು ನಿಶ್ಚಿಯಿಸಿದ್ದಾರೆ ಎನ್ನಲಾಗಿದೆ. ಹೀಗೋಂದು ಸುದ್ದಿ ಹರಿದಾಡುತ್ತಿದೆ.

ಅನುಷ್ಕಾ ಶೆಟ್ಟಿ ಅವರ ಕುಟುಂಬ ಮತ್ತು ವರನ ಕುಟುಂಬದ ನಡುವೆ ಬಹಳ ದಿನಗಳಿಂದ ಉತ್ತಮ ಒಡನಾಟವಿದ್ದು, ಪೋಷಕರ ಒಪ್ಪಿಗೆಯ ಮೇರೆಗೆ ಈ ಮದುವೆ ಫಿಕ್ಸ್‌ ಆಗಿದೆ ಎಂದು ಹೇಳಲಾಗುತ್ತಿದೆ.

ಈ ಹಿಂದೆ ತೆಲುಗು ನಟ ಪ್ರಭಾಸ್‌ (Prabhas) ಜೊತೆ ಅನುಷ್ಕಾ ಹೆಸರು ಕೇಳಿಬಂದಿತ್ತು. ನಾವಿಬ್ಬರು ಜಸ್ಟ್‌ ಫ್ರೆಂಡ್ಸ್‌ ಎಂದು ಹೇಳಿ ಗಾಸಿಪ್‌ ಪ್ರಿಯರ ಬಾಯಿ ಮುಚ್ಚಿಸಿದ್ದರು. ಈ ವಿಚಾರ ಗಾಸಿಪ್‌ಗಷ್ಟೇ ಸೀಮಿತವಾಗಿದೆ.

News Desk Sandalwood Times

error: Content is protected !!