ಮುಂಬೈ ಉದ್ಯಮಿ ಜೊತೆ ಪುಷ್ಪವತಿ ಮದುವೆ- ಏ.6ಕ್ಕೆ ನಿಮಿಕಾ ವಿವಾಹ

ಮುಂಬೈ ಉದ್ಯಮಿ ಜೊತೆ ಪುಷ್ಪವತಿ ಮದುವೆ- ಏ.6ಕ್ಕೆ ನಿಮಿಕಾ ವಿವಾಹ

ಮಾಡೆಲ್ ಆಗಿ ಮಿಂಚುತ್ತಲೇ ಕನ್ನಡ ಚಿತ್ರರಂಗದಲ್ಲಿ ನಾಯಕಿಯಾಗಿಯೂ ನೆಲೆ ಕಂಡುಕೊಂಡಿರುವವರು ನಿಮಿಕಾ ರತ್ನಾಕರ್. ನಟಿಸಿರೋ ಒಂದಷ್ಟು ಸಿನಿಮಾಗಳು ಬಿಡುಗಡೆಯ ಹಂತದಲ್ಲಿರುವಾಗಲೇ ನಿಮಿಕಾ (Nimika Ratnakar) ಶುಭ ಸುದ್ದಿಯೊಂದನ್ನು ಕೊಟ್ಟಿದ್ದಾರೆ. ನಿಮಿಕಾ ರತ್ನಾಕರ್ ಇದೇ ಏಪ್ರಿಲ್ 6ರಂದು ವೈವಾಹಿಕ ಜೀವನಕ್ಕೆ ಕಾಲಿಡಲು ಸಜ್ಜಾಗಿದ್ದಾರೆ.

ಮುಂಬೈ ಮೂಲದ ಉದ್ಯಮಿಯನ್ನು ನಿಮಿಕಾ (Nimika Ratnakar) ಮದುವೆಯಾಗಲಿದ್ದಾರೆ. ವಿವಾಹ ಮಹೋತ್ಸವ ನೆರವೇರಲಿರುವ ಸ್ಥಳದ ವಿವರ ಶೀಘ್ರದಲ್ಲಿಯೇ ರಿವೀಲ್‌ ಆಗಲಿದೆ. ಮಾಡೆಲಿಂಗ್ ಕ್ರೇತ್ರದಲ್ಲಿ ಹೆಸರು ಮಾಡಿದ್ದ ನಿಮಿಕಾ ʻರಾಮಧಾನ್ಯʼವೆಂಬ ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟಿದ್ದರು.

ಆ ಬಳಿಕ ಒಂದಷ್ಟು ಸಿನಿಮಾಗಳಲ್ಲಿ ನಟಿಸಿದ್ದ ಅವರಿಗೆ ʻಕ್ರಾಂತಿʼ ಚಿತ್ರದ ʻಶೇಕ್ ಇಟ್ ಪುಷ್ಪವತಿʼ ಹಾಡು ಭಾರೀ ಪ್ರಸಿದ್ಧಿ ತಂದುಕೊಟ್ಟಿತ್ತು. ವೈಲ್ಡ್ ಟೈಗರ್ ಸಫಾರಿ ಸೇರಿದಂತೆ ಅನೇಕ ಸಿನಿಮಾಗಳಲ್ಲಿ ನಾಯಕಿಯಾಗಿ ಬ್ಯುಸಿಯಾಗಿರೋ ನಿಮಿಕಾ ಕಡೆಯಿಂದೀಗ ಮದುವೆ (Wedding) ಸುದ್ದಿ ಹೊರಬಿದ್ದಿದೆ.

News Desk Sandalwood Times

error: Content is protected !!