ಅಂದು ಟ್ರೋಲ್, ಇಂದು ಅವಾರ್ಡ್- ರಾಜ್ಯ ಪ್ರಶಸ್ತಿ ಪಡೆದ Rashmika Mandanna ಭಾವುಕ
ಕನ್ನಡದ ನಟಿ ರಶ್ಮಿಕಾ ಮಂದಣ್ಣ, ದೇವರಕೊಂಡ ಜೊತೆ ಮದುವೆಯಾಗಿ ಮೊದಲ ಯುಗಾದಿಯ ಸಂಭ್ರಮದಲ್ಲಿದ್ದಾರೆ. ಈ ಖುಷಿಯ ನಡುವೆ ಅವರಿಗೆ ದಿ ಗರ್ಲ್ಫ್ರೆಂಡ್ ಚಿತ್ರದ ನಟನೆಗೆ ರಾಜ್ಯ ಪ್ರಶಸ್ತಿ ಸಿಕ್ಕಿದೆ. ಒಂದು ಟೈಮ್ನಲ್ಲಿ ನನ್ನ ನಟನೆಯನ್ನು ಟ್ರೋಲ್ ಮಾಡಿದ್ರು, ಇಂದು ಪ್ರಶಸ್ತಿ ದಕ್ಕಿದೆ ಎನ್ನುತ್ತಾ ವೇದಿಕೆಯಲ್ಲಿ ನಟಿ ಎಮೋಷನಲ್ ಆಗಿದ್ದಾರೆ.

ʻದಿ ಗರ್ಲ್ಫ್ರೆಂಡ್ʼ ಚಿತ್ರದ ನಟನೆಗೆ ರಶ್ಮಿಕಾ ಮಂದಣ್ಣ ಅವರಿಗೆ ತೆಲಂಗಾಣ ಸರ್ಕಾರ ರಾಜ್ಯ ಪ್ರಶಸ್ತಿ ನೀಡಿ ಗೌರವಿಸಲಾಗಿದೆ. ಈ ವೇಳೆ ಮಾತನಾಡಿದ ರಶ್ಮಿಕಾ ಮಂದಣ್ಣ, ಒಂದು ಸಮಯದಲ್ಲಿ ನನ್ನ ನಟನೆಯನ್ನು ಟ್ರೋಲ್ ಮಾಡುತ್ತಿದ್ದರು. ಈಗ ಸರ್ಕಾರ ನನ್ನನ್ನು ಗುರುತಿಸಿ ರಾಜ್ಯ ಪ್ರಶಸ್ತಿ ಕೊಟ್ಟಿರೋದು ಖುಷಿಯಿದೆ ಎಂದಿದ್ದಾರೆ.

ಈ ಸಿನಿಮಾ ನನ್ನ ಪಾಲಿಗೆ ತುಂಬಾನೇ ಸ್ಪೆಷಲ್. ಈ ಪ್ರಶಸ್ತಿಯಿಂದ ಮತ್ತಷ್ಟು ಹೊಸ ಪ್ರಯೋಗಗಳನ್ನು ಮಾಡಲು ಸ್ಫೂರ್ತಿ ಸಿಕ್ಕಿದೆ. ಚಿತ್ರದ ಡೈರೆಕ್ಟರ್ ರಾಹುಲ್, ಸಹನಟ ದೀಕ್ಷಿತ್ ಶೆಟ್ಟಿ ಹಾಗೂ ಚಿತ್ರತಂಡಕ್ಕೆ ಧನ್ಯವಾದಗಳು ಎಂದಿದ್ದಾರೆ ಶ್ರೀವಲ್ಲಿ.
View this post on Instagram
ನಾನು ಕೆಲವು ವರ್ಷಗಳ ಹಿಂದೆ ಮಗಳಾಗಿ ಬಂದಿದ್ದೆ, ಈಗ ಸೊಸೆಯಾಗಿ ಎದುರಿಗೆ ನಿಂತಿದ್ದೀನಿ, ಆ ಬಗ್ಗೆ ನನಗೆ ಹೆಮ್ಮೆಯಿದೆ, ನನ್ನನ್ನು ಸ್ವೀಕರಿಸಿದ್ದಕ್ಕೆ ಬಹಳ ಧನ್ಯವಾದಗಳು. ನನಗೆ ಈಗ ಇರುವ ಆಸೆಯೆಂದರೆ ನನ್ನ ಕುಟುಂಬಕ್ಕೆ ಇದೇ ಪ್ರೀತಿ ಕೊಡಿ, ನನ್ನ ಕುಟುಂಬವನ್ನು ಚೆನ್ನಾಗಿ ನೋಡಿಕೊಳ್ಳಿ’ ಎಂದರು ನಟಿ. ರಶ್ಮಿಕಾ ಅವರು ಪ್ರಶಸ್ತಿ ಸ್ವೀಕರಿಸುವಾಗ ಅವರ ಅತ್ತೆ ಮಾಧವಿ ಸಮಾರಂಭದಲ್ಲಿ ಹಾಜರಿದ್ದರು. ಜೋರಾಗಿ ಚಪ್ಪಾಳೆ ತಟ್ಟುತ್ತಾ ಸೊಸೆಯ ಸಾಧನೆಗೆ ಮೆಚ್ಚುಗೆ ವ್ಯಕ್ತಪಡಿಸಿದರು. ಪ್ರಶಸ್ತಿ ಸ್ವೀಕರಿಸಿದ ಬಳಿಕ ನಟಿ ಭಾವುಕರಾದ ಅತ್ತೆಯನ್ನು ತಬ್ಬಿ ಸಂತೈಸಿದ್ದಾರೆ. ಒಟ್ನಲ್ಲಿ ಟ್ರೋಲ್ ಮಾಡಿ ಟೀಕಿಸಿದವರಿಗೆ ರಾಜ್ಯ ಪ್ರಶಸ್ತಿ ಗಿಟ್ಟಿಸಿಕೊಳ್ಳುವ ಮೂಲಕ ನಟಿ ಉತ್ತರ ನೀಡಿದ್ದಾರೆ.

