Love Mocktail Series: ನಟ ಕಮ್‌ ನಿರ್ದೇಶಕನಾಗಿ ಡಾರ್ಲಿಂಗ್‌ ಕೃಷ್ಣ ಹ್ಯಾಟ್ರಿಕ್‌ ಗೆಲುವು

Love Mocktail Series: ನಟ ಕಮ್‌ ನಿರ್ದೇಶಕನಾಗಿ ಡಾರ್ಲಿಂಗ್‌ ಕೃಷ್ಣ ಹ್ಯಾಟ್ರಿಕ್‌ ಗೆಲುವು

ಟ ಕಮ್‌ ನಿರ್ದೇಶಕನಾಗಿ ಡಾರ್ಲಿಂಗ್‌ ಕೃಷ್ಣ (Darling Krishna) ʻಲವ್‌ ಮಾಕ್ಟೈಲ್‌ 3ʼನಿಂದ (Love Mocktail 3) ಹ್ಯಾಟ್ರಿಕ್‌ ಗೆಲುವನ್ನು ಸಾಧಿಸಿದ್ದಾರೆ. ‘ಲವ್‌ ಮಾಕ್ಟೈಲ್‌’ ಸಿನಿಮಾ 3 ಭಾಗಗಳು ಸೂಪರ್‌ ಸಕ್ಸಸ್‌ ಕಂಡಿದೆ. ಕೃಷ್ಣ ನಟನೆಯ ಜತೆ ನಿರ್ದೇಶನದ ಮೂಲಕ ಗೆದ್ದು ಬೀಗಿದ್ದಾರೆ.

ಈ ಚಿತ್ರದ ಮೊದಲ ಮತ್ತು ಎರಡನೇ ಭಾಗದಲ್ಲಿ ಆದಿ, ನಿಧಿಮಾ ಜೋಡಿ ಮೋಡಿ ಮಾಡಿತ್ತು. 3ನೇ ಭಾಗದಲ್ಲಿ ಅಪ್ಪ- ಮಗಳ ಬಾಂಧವ್ಯದ ಕಥೆ ಹೇಳಿದ್ದಾರೆ. ಪುಟ್ಟ ಮಗಳಲ್ಲಿ ನಿಧಿಮಾನ ನೋಡ್ತಿದ್ದ ಆದಿಯ ಒಡನಾಟದ ಕಥೆ ಬಿಚ್ಚಿಟ್ಟಿದ್ದಾರೆ. ಇದು ಪ್ರೇಕ್ಷಕರನ್ನು ಅಳಿಸಿದೆ. ಡಾರ್ಲಿಂಗ್‌ ಕೃಷ್ಣ ಹೇಳಿದಂತೆ ಲವ್‌ ಮಾಕ್ಟೈಲ್‌ನ ಕೊನೆಯ ಭಾಗ ಕೂಡ ಯಶಸ್ಸು ತಂದು ಕೊಟ್ಟಿದೆ.

 

View this post on Instagram

 

A post shared by Darling Krishna (@darling_krishnaa)

ಲವ್‌ ಮಾಕ್ಟೈಲ್‌ನ ಸಕ್ಸಸ್‌ ಬೆನ್ನಲ್ಲೇ ಡಾರ್ಲಿಂಗ್‌ ಕೃಷ್ಣ, ಮಿಲನಾ ಹಸೆಮಣೆ ಏರಿದರು. ರೀಲ್‌ ಲೈಫ್‌ ಮಾತ್ರವಲ್ಲ, ರಿಯಲ್‌ ಲೈಫ್‌ನಲ್ಲೂ ಕೃಷ್ಣನ ಬಾಳಿಗೆ ಮಿಲನಾ ಬೆಳಕಾಗಿ ಬಂದ್ರು. ಕೃಷ್ಣನ ಬದುಕಿಗೆ ಮಿಲನಾ ಲಕ್ಕಿ ಚಾರ್ಮ್‌ ಎಂದರೆ ತಪ್ಪಾಗಲಾರದು. ಗಂಡ- ಹೆಂಡ್ತಿ ಎಂದರೆ ಹೇಗಿರಬೇಕು ಅನ್ನೋದ್ದಕ್ಕೆ ತಾಜಾ ಉದಾಹರಣೆಯೇ ಕೃಷ್ಣ, ಮಿಲನಾ (Milana Nagaraj) ಜೋಡಿ. ಈಗ ಮಗಳು ಪರಿ ಕಾಲ್ಗುಣದಿಂದ ಚಿತ್ರದ ಭರ್ಜರಿ ಯಶಸ್ಸು ಕಂಡಿದೆ. ಕರ್ನಾಟಕ ಜನತೆ ಈ ಚಿತ್ರ ನೋಡಿ ಮೆಚ್ಚಿ ಕೈಹಿಡಿದಿದ್ದಾರೆ.

 

View this post on Instagram

 

A post shared by Anand Audio (@aanandaaudio)

ಇನ್ನೂ ಮೊದಲ ಭಾಗ 5 ಕೋಟಿ ರೂ, ಎರಡನೇ ಭಾಗ 15 ಕೋಟಿ ಕಲೆಕ್ಷನ್‌ ಎಂದು ಇತ್ತೀಚೆಗೆ ಕೃಷ್ಣ ಸಂದರ್ಶನವೊಂದರಲ್ಲಿ ರಿವೀಲ್‌ ಮಾಡಿದ್ರು. ಹಾಗಾದ್ರೆ 3ನೇ ಭಾಗ ಕೂಡ ಎರಡು ಭಾಗಗಳ ಕಲೆಕ್ಷನ್ ಅನ್ನು ಬ್ರೇಕ್‌ ಮಾಡಿದೆ ಎನ್ನಲಾಗಿದೆ. ಈ ಬಗ್ಗೆ ಕ್ರಿಸ್‌ಮಿ ಜೋಡಿಯೇ ತಿಳಿಸಬೇಕಿದೆ.

News Desk Sandalwood Times

error: Content is protected !!