AI ಫೋಟೋ ಬಳಸಿ ಎಡಿಟ್ ಮಾಡಿ- ನಿಶ್ಚಿತಾರ್ಥದ ಬಗ್ಗೆ ಪುಕಾರು ಹಬ್ಬಿಸಿದವರಿಗೆ ಅನುಪಮಾ ಕೌಂಟರ್
ಕಿರುತೆರೆ ನಟಿ ಅನುಪಮಾ ಗೌಡ (Anupama Gowda) ಅವರಿಗೆ ನಿಶ್ಚಿತಾರ್ಥ (Engagement) ಆಯ್ತು ಎಂದು ಸುಳ್ಳು ಸುದ್ದಿ ಹಬ್ಬಿಸಿದವರಿಗೆ ಕೆಂಡ ಕಾರಿದ್ದಾರೆ. ನನ್ನ ನಿಶ್ಚಿತಾರ್ಥ ಆಯ್ತು, ಆದರೆ ನನಗೆ ಹೋಗೋಕೆ ಆಗಿಲ್ಲ ಅಂತ ವದಂತಿ ಹಬ್ಬಿಸಿದವರಿಗೆ ವಿಡಿಯೋ ಮೂಲಕ ನಟಿ ಕೌಂಟರ್ ಕೊಟ್ಟಿದ್ದಾರೆ.

ಗೆಳೆಯ ರಾಘವ್ (Raghava) ಎಂಬುವವರು ಅನುಪಮಾ ಜತೆಗಿನ ಫೋಟೋ ಶೇರ್ ಮಾಡಿ ಆಕೆಯ ಹುಟ್ಟುಹಬ್ಬಕ್ಕೆ ವಿಶ್ ಮಾಡಿದ್ದರು. ಈ ಬೆನ್ನಲ್ಲೇ ರಾಘವ್ ಜೊತೆ ಎಂಗೇಜ್ಮೆಂಟ್ ಆಯ್ತು ಅಂತ ಪುಕಾರು ಹಬ್ಬಿತ್ತು. ಹೀಗಾಗಿ ನಟಿ ತುಸು ವ್ಯಂಗ್ಯವಾಗಿಯೇ ವೀಡಿಯೋ ಮೂಲಕ ಈ ವದಂತಿ ಸುಳ್ಳು ಎಂದು ಕ್ಲ್ಯಾರಿಟಿ ಕೊಡುವ ಕೆಲಸ ಮಾಡಿದ್ದಾರೆ.

ಹಾಯ್.. ಸಾಮಾನ್ಯವಾಗಿ ನಾನು ರಿಯಾಕ್ಟ್ ಮಾಡಲ್ಲ. ಬೆಳಗ್ಗೆಯಿಂದಲೂ ಶೂಟಿಂಗ್ ಸೆಟ್ನಲ್ಲೂ ಎಲ್ಲರೂ Congratulations ಅಂತ ಅನ್ನೋಕೆ ಶುರು ಮಾಡಿದ್ದಾರೆ. ಒಂದೆರಡು ದಿನದಿಂದ ಒಂದಷ್ಟು ಜನ ಮೆಸೇಜ್ನಲ್ಲೂ ಕಂಗ್ರ್ಯಾಜುಲೇಷನ್ಸ್ ಹೇಳ್ತಾ ಇದ್ದಾರೆ. ಏನು ಅಂತಂದರೆ, 2 ದಿನದ ಹಿಂದೆ ನನ್ನ ಎಂಗೇಜ್ಮೆಂಟ್ ಆಯ್ತು. ನನ್ನ ಬೆಸ್ಟ್ಫ್ರೆಂಡ್ ರಾಘವ್ ಅವರ ಜೊತೆಗೆ. ಆದರೆ ನಮ್ಮ ಎಂಗೇಜ್ಮೆಂಟ್ಗೆ ನಾವು ಅಟೆಂಡ್ ಮಾಡೋಕಾಗಲಿಲ್ಲ. ಯಾಕೆಂದರೆ, ನಮಗೆ ಯಾರೂ ಕೂಡ Inform ಮಾಡಲಿಲ್ಲ ನಮ್ಮ ಎಂಗೇಜ್ಮೆಂಟ್ ಅಂತ ಎಂದು ಇನ್ಸ್ಟಾಗ್ರಾಮ್ನಲ್ಲಿ ಅನುಪಮಾ ವಿಡಿಯೋ ಹಂಚಿಕೊಂಡಿದ್ದಾರೆ.
View this post on Instagram
ಒಂದಷ್ಟು ಸೋಶಿಯಲ್ ಮೀಡಿಯಾ ಪೇಜ್ಗಳಲ್ಲಿ ನನ್ನ ಬರ್ತ್ಡೇಗೆ ಅಂತ ಪೋಸ್ಟ್ ಮಾಡಿದ್ದ ಫೋಟೋಗಳನ್ನ ತಗೊಂಡು ಇವರಿಬ್ಬರದ್ದು ಎಂಗೇಜ್ಮೆಂಟ್ ಆಯ್ತು. ಅನುಪಮಾ ಬಾಯ್ಫ್ರೆಂಡ್ ಹಾ ಇವರು? ಅನುಶ್ರೀ ಅವರ ಮದುವೆಯಾಯ್ತು, ಈಗ ಅನುಪಮಾ ಎಂಗೇಜ್ಮೆಂಟ್ ಆಗಿದೆ ಅಂತ ಪೋಸ್ಟ್ ಮಾಡುತ್ತಿದ್ದಾರೆ. ಆದರೆ, ನನಗೆ ಬೇಜಾರಾಗಿದ್ದು ಯಾಕೆಂದರೆ AI ಎಲ್ಲಾ ಇರ್ಬೇಕಾದರೆ, ನಾವು ಇಷ್ಟೆಲ್ಲಾ ಮುಂದುವರೆದಿರಬೇಕಾದರೆ, ಅಟ್ಲೀಸ್ಟ್ ಒಂದೊಳ್ಳೆ ಫೋಟೋವನ್ನ ಕ್ರಿಯೇಟ್ ಮಾಡಿ, ರಿಂಗ್ ಹಾಕೋ ತರಹ ಫೋಟೋವನ್ನ ಎಡಿಟ್ ಮಾಡಿ, ನಮಗೆ ಕಂಗ್ರ್ಯಾಜುಲೇಷನ್ಸ್ ಅಂತ ವಿಷಸ್ ಕಳಿಸಿದ್ರೆ ನಮಗೆ ಇನ್ನೂ ಖುಷಿಯಾಗುತ್ತಿತ್ತು. ಆದರೆ, ಇನ್ನೂ ಟೈಮ್ ಇದೆ ಎಂದು ಕೌಂಟರ್ ನೀಡಿದ್ದಾರೆ ಅನುಪಮಾ.
View this post on Instagram
2 ದಿನದ ಹಿಂದೆ ಎಂಗೇಜ್ಮೆಂಟ್ ಆಗಿದೆ. ಕೂಡಲೇ ಮದುವೆ ಮಾಡಿಸೋದಕ್ಕೆ ಹೋಗಬೇಡಿ. ಯಾಕೆಂದರೆ, ಸ್ವಲ್ಪ ಡೌಟ್ ಆಗುತ್ತೆ. ಒಂದಷ್ಟು ಲೈಕ್, ಕಾಮೆಂಟ್ ಎಲ್ಲಾ ನಿಮಗೆ ಸಿಕ್ಕಿರುತ್ತೆ. ಇಮಿಡಿಯೇಟ್ ಆಗಿ ಪೋಸ್ಟ್ ಮಾಡಿದ್ರೆ, ಅದು ಚೆನ್ನಾಗಿ ಅನಿಸಲ್ಲ. ಒಂದೆರಡು ತಿಂಗಳು ಬಿಟ್ಟು ಪೋಸ್ಟ್ ಮಾಡಿ. ಮತ್ತೆ ನಿಮಗೆ ಒಳ್ಳೆಯ ವಿವ್ಸ್ ಸಿಗುತ್ತೆ. ಜನ ಎಲ್ಲಾ ನೋಡ್ತಾರೆ. ಶೇರ್ಸ್ ಆಗುತ್ತೆ. ಆದರೆ, ನನಗೆ ಬೇಜಾರಾಗಿದ್ದು ಅದೇ. ಮದುವೆ ಇನ್ನೆರಡು ತಿಂಗಳು ಬಿಟ್ಟು ಮಾಡಿ. ನಮಗೆ ಟ್ರೆಡಿಷನಲ್ ಔಟ್ಫಿಟ್ ಎಲ್ಲಾ ಹಾಕಿ, ಮದುವೆ ಪೋಸ್ಟ್ನ ಕ್ರಿಯೇಟ್ ಮಾಡಿ, ಆಮೇಲೆ ನೀವು ಎರಡು ತಿಂಗಳಾದ್ಮೇಲೆ ಎಲ್ಲಾ ಕಡೆ ಪೋಸ್ಟ್ ಮಾಡಬಹುದು. ಸಾಧ್ಯವಾದರೆ, ನನ್ನ ಮತ್ತು ರಾಘವ್ನ ಮದುವೆಗೆ ಕರೀರಿ. ಖಂಡಿತವಾಗಿಯೂ ಬಂದು ನಾವು ಬರುತ್ತೇವೆ. ಖುಷಿಯಾಗುತ್ತೆ ನಮಗೆ. ಇಷ್ಟೆಲ್ಲಾ ಇಂಟ್ರೆಸ್ಟ್ ತೋರಿಸ್ತೀರ ಅಲ್ವಾ ಲೈಕ್ಸ್, ಕಾಮೆಂಟ್ಸ್ ಮತ್ತು ಪೇಜ್ ರೀಚ್ ಆಗಲಿ ಅನ್ನೋ ಕಾರಣಕ್ಕೆ ಇಷ್ಟೆಲ್ಲಾ ಬೇರೆಯವರ ಪರ್ಸನಲ್ ಲೈಫ್ನಲ್ಲಿ ಇಂಟ್ರೆಸ್ಟ್ ತೋರಿಸ್ತೀರ. ನನ್ನ ಮದುವೆಯಲ್ಲಿ ಎಷ್ಟು ಆಸಕ್ತಿ ತೋರಿಸ್ತೀರ ಅಂತ ನೋಡೋದಕ್ಕೆ ಆಸೆ. ದಯಮಾಡಿ ನಮ್ಮನ್ನ ಇನ್ವೈಟ್ ಮಾಡಿ ಎಂದು ಅನುಪಮಾ ಗೌಡ ತಿರುಗೇಟು ನೀಡಿದ್ದಾರೆ. ಸದ್ಯ ಈ ವಿಡಿಯೋ ಸಖತ್ ವೈರಲ್ ಆಗ್ತಿದೆ.

