ಪ್ರೇಕ್ಷಕರ ನೆಚ್ಚಿನ ‘ಸುವರ್ಣ ಗೃಹಮಂತ್ರಿ ಸೀಸನ್ 3’ ಮಾ.25ರಿಂದ ಶುರು

ಪ್ರೇಕ್ಷಕರ ನೆಚ್ಚಿನ ‘ಸುವರ್ಣ ಗೃಹಮಂತ್ರಿ ಸೀಸನ್ 3’ ಮಾ.25ರಿಂದ ಶುರು

ರ್ನಾಟಕದ ಗೃಹಿಣಿಯರ ಮನಗೆದ್ದು ಮನೆಮಾತಾಗಿರೋ ಸ್ಟಾರ್ ಸುವರ್ಣ ವಾಹಿನಿಯ ಜನಪ್ರಿಯ ಕಾರ್ಯಕ್ರಮ ಸುವರ್ಣ ಗೃಹಮಂತ್ರಿ. ಖ್ಯಾತ ನಟ ರವಿಶಂಕರ್ ಗೌಡ (Ravishankar Gowda) ನಿರೂಪಣೆಯಲ್ಲಿ ಮೂಡಿ ಬರುತ್ತಿರುವ ಈ ಕಾರ್ಯಕ್ರಮ ಕನ್ನಡ ಕಿರುತೆರೆಯಲ್ಲಿ ಪ್ರತಿದಿನ ಪ್ರಸಾರವಾಗುವ ಸಾಮಾನ್ಯ ಜನರ (ಕಾಮನ್ ಮ್ಯಾನ್) ರಿಯಾಲಿಟಿ ಶೋ. ಇದೀಗ ಸುವರ್ಣ ಗೃಹಮಂತ್ರಿ ತನ್ನ ಮೂರನೇ ಸೀಸನ್ ನೊಂದಿಗೆ ಹೊಸತನದ ಹುರುಪಲ್ಲಿ ಬರಲು ಸಜ್ಜಾಗಿದೆ.

ಈಗಾಗಲೇ ಸುವರ್ಣ ಗೃಹಮಂತ್ರಿಯು ಎರಡು ಸೀಸನ್ ಗಳನ್ನು ಯಶಸ್ವಿಯಾಗಿ ಪೂರೈಸಿದ್ದು 700 ಸಂಚಿಕೆಗಳ ಹೊಸ್ತಿಲಲ್ಲಿದೆ. ಇನ್ನು ಈ ಹೊಸ ಸೀಸನ್ ನ ಪ್ರಮುಖ ಆಕರ್ಷಣೆ ಅಂದ್ರೆ ಪ್ರತೀ ಸಂಚಿಕೆಯಲ್ಲೂ ಇನ್ಮುಂದೆ ‘ಸುವರ್ಣ ಪರಿವಾರ’ದ ತಾರೆಯರು ಭಾಗಿಯಾಗಲಿದ್ದಾರೆ. ಸುವರ್ಣ ಸ್ಟಾರ್ ಗಳ ಜೊತೆ ಜನಸಾಮಾನ್ಯರ ಭರ್ಜರಿ ಜಟಾಪಟಿಯೇ ನಡೆಯಲಿದೆ. ಮೊದಲ ಸಂಚಿಕೆಯಲ್ಲಿ ‘ಆಸೆ’ ಧಾರಾವಾಹಿ ಖ್ಯಾತಿಯ ‘ಮೀನಾ’ ಅಲಿಯಾಸ್‌ ಪ್ರಿಯಾಂಕಾ (Priyanka) ಪಾಲ್ಗೊಂಡಿದ್ದು ವೀಕ್ಷಕರಿಗೆ ಭರ್ಜರಿ ಮನರಂಜನೆಯೇ ಸಿಗಲಿದೆ.

ಇನ್ನು ಈ ಶೋ ಬಗ್ಗೆ ಹೇಳೋದಾದ್ರೆ, ತನಗಾಗಿ ಏನನ್ನೂ ಬಯಸದೇ ತನ್ನವರ ಖುಷಿಗಾಗಿ ನಿರಂತರವಾಗಿ ಹಂಬಲಿಸುವ ಗೃಹಿಣಿಯರನ್ನು ಗೌರವಿಸುವ ನಿಟ್ಟಿನಲ್ಲಿ ಕರ್ನಾಟಕದ ಮನೆ ಮನೆಗೆ ಹೋಗಿ ದಿನಕ್ಕೊಂದು ಕುಟುಂಬವನ್ನು ಭೇಟಿ ಮಾಡಿ, ಗಂಡ-ಹೆಂಡತಿಯನ್ನು ಆಟ ಆಡಿಸಿ , ಮಾತನಾಡಿಸಿ, ಆಕೆಯ ಕುಟುಂಬದವರ ಪರಿಚಯ ಮಾಡಿಕೊಂಡು, ಅವರಿಗಾಗಿ ಆ ದಿನವನ್ನು ಮೀಸಲಿಟ್ಟು ರಾಣಿ ಸೀಟ್ ನಲ್ಲಿ ಅವರನ್ನ ಕೂರಿಸಿ ಗೌರವಿಸುತ್ತಾ ಥ್ಯಾಂಕ್ಸ್ ಹೇಳುವ ಕಾರ್ಯಕ್ರಮವೇ ಈ “ಸುವರ್ಣ ಗೃಹಮಂತ್ರಿ”. ಅಂತಹ ಮನೆ ಬೆಳಗೋ ಗೃಹಿಣಿಯರನ್ನು ಗುರುತಿಸಿ, ನಟ ರವಿ ಶಂಕರ್ ಗೌಡ ರವರು ಅಣ್ಣನ ಸ್ಥಾನದಲ್ಲಿ ನಿಂತು ತವರು ಮನೆಯ ಉಡುಗೊರೆಯಾಗಿ ಬಾಗಿನ ನೀಡಿ ಗೌರವಿಸಿ ಇಡೀ ಕುಟುಂಬವನ್ನು ಒಗ್ಗೂಡಿಸಿ ಸಂಭ್ರಮಿಸುವುದೇ ‘ಸುವರ್ಣ ಗೃಹಮಂತ್ರಿ’ ಕಾರ್ಯಕ್ರಮದ ವಿಶೇಷತೆ.

ಹೊಸ ಸೀಸನ್, ಹೊಸ ಆರಂಭ, ಆಟ-ತುಂಟಾಟದ ಜೊತೆ ಮಸ್ತ್ ಮನರಂಜನೆಯನ್ನೊಳಗೊಂಡಿರುವ “ಸುವರ್ಣ ಗೃಹಮಂತ್ರಿ” ಸೀಸನ್ 3 ಇದೇ ಬುಧವಾರದಿಂದ (ಮಾರ್ಚ್ 25) ಪ್ರತಿದಿನ ಸಂಜೆ 5 ಗಂಟೆಗೆ ನಿಮ್ಮ ನೆಚ್ಚಿನ ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗಲಿದೆ ತಪ್ಪದೇ ವೀಕ್ಷಿಸಿ.

News Desk Sandalwood Times

error: Content is protected !!