ಸ್ಕ್ರೀನ್ಪ್ಲೇ, ಸೀನ್ಸ್, ಡೈಲಾಗ್ಸ್ ಯಾವುದು ಸೇಮ್ ಇಲ್ಲದಿರುವಾಗ ಕಥೆ ಕದ್ದಿದ್ದಾರೆನ್ನಲು ಹೇಗೆ ಸಾಧ್ಯ?- ಡಾರ್ಲಿಂಗ್ ಕೃಷ್ಣ ಕೆಂಡ
ʻಲವ್ ಮಾಕ್ಟೈಲ್ 3ʼ ಸಿನಿಮಾ (Love Mocktail 3) ಕಥೆ ನನ್ನದು, ಅದನ್ನು ಕಾಪಿ ಮಾಡಿದ್ದಾರೆ ಎಂದ ರಾಘವೇಂದ್ರ ನಾಯ್ಕ್ (Raghavendra Naik) ಆರೋಪಕ್ಕೆಲ್ಲಾ ಡಾರ್ಲಿಂಗ್ ಕೃಷ್ಣ, ಮಿಲನಾ ದಂಪತಿ ತಕ್ಕ ಉತ್ತರ ಕೊಟ್ಟಿದ್ದಾರೆ. ಸ್ಕ್ರೀನ್ಪ್ಲೇ, ಸೀನ್ಸ್, ಡೈಲಾಗ್ಸ್ ಯಾವುದು ಸೇಮ್ ಇಲ್ಲದಿರುವಾಗ ಕಥೆ ಕದ್ದಿದ್ದಾರೆ ಎನ್ನಲು ಹೇಗೆ ಸಾಧ್ಯ? ಲೀಗಲ್ ಆಗಿ ಹೆಜ್ಜೆ ಇಡ್ತೀನಿ ಅಂತ ಬರಹಗಾರ ಕಮ್ ನಿರ್ದೇಶಕ ಕೃಷ್ಣ ಎಚ್ಚರಿಕೆ ನೀಡಿದ್ದಾರೆ.

ʻಲವ್ ಮಾಕ್ಟೈಲ್ 3ʼ ವಿವಾದಕ್ಕೆ ಸಂಬಂಧಿಸಿದಂತೆ ಡಾರ್ಲಿಂಗ್ ಕೃಷ್ಣ, ಮಿಲನಾ ಜೋಡಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ್ದಾರೆ. ರಾಘವೇಂದ್ರ ಮಾತಲ್ಲಿ ಏನಾದರೂ ಲಾಜಿಕ್ ಇದೆಯಾ. ಸ್ಕ್ರೀನ್ ಪ್ಲೇ ಏನಾದರೂ ನಿಮ್ಮ ತರಹ ಇದೆಯಾ? ಸೀನ್ಸ್ ಏನಾದರೂ ತಗೊಂಡಿದ್ದಾರಾ? ಡೈಲಾಗ್ಸ್? ಎಂದು ಅಲ್ಲೇ ಮಾಧ್ಯಮದವರು ಪ್ರಶ್ನೆ ಕೇಳಿದ್ರು. ಅದಕ್ಕೆ ಅವರು, ಯಾವ ಡೈಲಾಗ್ಸ್ ಕೂಡ ಇಲ್ಲ ಎಂದಿದ್ದಾರೆ. ಮತ್ತೆ ಏನಯ್ಯಾ ನಿನ್ನದು? ಯಾಕಯ್ಯ ಬಂದಿದ್ದೀಯಾ? ಲವ್ ಮಾಕ್ಟೇಲ್ನ ನಿಲ್ಲಿಸಿ, ಗೆಲ್ಲಿಸಿ ಪ್ರತಿಯೊಂದು ಎಫರ್ಟ್ನ ನಾವು ಎಷ್ಟು ಹಾಕಿದ್ದೀವಿ ಅನ್ನೋದು ನಮಗೆ ಗೊತ್ತು. ಲವ್ ಮಾಕ್ಟೇಲ್ ಸಕ್ಸಸ್ನ ಮಾತ್ರ ನೀವು ನೋಡಿದ್ದೀರಾ. ಅದರ ಹಿಂದೆ ಹತ್ತು ವರ್ಷ ನಾವು ಏನು ಕಷ್ಟ ಪಟ್ಟಿದ್ದೀವಿ? ಲವ್ ಮಾಕ್ಟೇಲ್ ಸುಮ್ಮನೆ ಆಗಿಲ್ಲ. ಫ್ರಾಂಚೈಸಿ ಸುಮ್ಮನೆ ಮೂರು ಸಲ ಬಂದಿಲ್ಲ. ಅಷ್ಟು ವರ್ಷದಿಂದ ಹಾನೆಸ್ಟ್ ಆಗಿ ಎಫರ್ಟ್ ಮಾಡಿಕೊಂಡು ಬಂದಿರೋದಕ್ಕೆ ಇವತ್ತು ನಾವು ಇಲ್ಲಿ ಬಂದು ಕೂತಿರೋದು. ಇವಾಗ ಯಾರೋ ಬಂದು ಹಿಂಗೆ ಹೇಳಿದ್ರೆ ಹೇಗೆ? ಎಂದು ಡಾರ್ಲಿಂಗ್ ಕೃಷ್ಣ (Darling Krishna) ಸಿಡಿದೆದ್ದಿದ್ದಾರೆ.
View this post on Instagram
ನಾನೊಬ್ಬ ರೈಟರ್ ಕಮ್ ಡೈರೆಕ್ಟರ್. ಡೈರೆಕ್ಟ್ ಮಾಡೋಕ್ಕಿಂತ ಮುಂಚೆ ನಾನು ರೈಟರ್. 4 ವರ್ಷ ಈ ಕಥೆಯನ್ನ ನಾವು ಬರೆದಿದ್ದೇವೆ. ಬರೆದ ಮೇಲೆಯೇ ನಾನು ಡೈರೆಕ್ಟರ್ ಆಗಿರೋದು. ಅನ್ಯಾಯ ಆಗಬಾರದು ಯಾರಿಗೆ? ನಿಜವಾದ ರೈಟರ್ಗಳಿಗೆ. ಸೋಶಿಯಲ್ ಮೀಡಿಯಾದಲ್ಲಿ ಸಿಗೋ ಕಥೆ ಹಿಡಿದುಕೊಂಡು ಗೂಗಲ್ನಲ್ಲಿ ಸಿಗೋ ಕಥೆಯನ್ನ ಹಿಡ್ಕೊಂಡು ಬಂದು, ಇದು ನನ್ನ ಕಥೆ ಅಂತ ಹಾಳ್ತಿದ್ದಾರಲ್ಲ ಇವರಿಗೆ ತಲೆಯಲ್ಲಿ ಕಾಮನ್ ಸೆನ್ಸ್ ಅನ್ನೋದು ಇದೆಯಾ?. 2011ರಲ್ಲಿ ನಡೆದ ಲಕ್ನೋ ಕೇಸ್ ತಗೊಂಡು ಬಂದು, ನಾನು ಬರೆದಿರೋದು ನಿಮಗೆ. ನೀವು ತಗೊಂಡಿದ್ದೀರ ಅಂತಾರೆ. ಒಂದು ಸೀನ್ ಹೇಳು ಅಂದರೆ, ಯಾವ ಸೀನ್ ಕೂಡ ಇಲ್ವಂತೆ, ಇನ್ನೇನು ನಿನ್ನ ಪ್ರಾಬ್ಲಂ ಎಂದಿದ್ದಾರೆ ಕೃಷ್ಣ.

ನಮ್ಮ ಸಿನಿಮಾ ಅಷ್ಟು ದೊಡ್ಡ ಸಕ್ಸಸ್ ಆಗಿದೆ. ಅದನ್ನ ಎಂಜಾಯ್ ಮಾಡೋಣ ಅಥವಾ ಇವರುಗಳು ಕೇಳೋ ಪ್ರಶ್ನೆಗೆ ಉತ್ತರ ಕೊಡೋದಾ? ಟೈಮ್ಸ್ ಅಲ್ಲಿ ಸಿನಿಮಾ ಚೆನ್ನಾಗಿದೆ ಅಂತ ರಿವ್ಯೂ ಬರೆದು ಹಾಕಿದ್ದಾರೆ. ಕೆಳಗಡೆ ಒಂದು ಐದು ಕಾಮೆಂಟ್ ಇದೆ. ಅದರಲ್ಲಿ ಒಬ್ಬ ಸೆಕೆಂಡ್ ಹಾಫ್ ಕದ್ದಿದ್ದಾರೆ ಅಂತ ಕಾಮೆಂಟ್ ಮಾಡಿದ್ದಾನೆ. ಯಾರು ಸರ್ ಕದ್ದಿರೋದು? ಒಬ್ಬ ಮೇಕರ್ಗೆ ಇದಕ್ಕಿಂತ ಅವಮಾನ ಮಾಡೋದು ಇದೆಯಾ? ನಾನು ದೊಡ್ಡ ರೈಟರ್ ಅಂತ ಏನೋ ಹೇಳಿಕೊಂಡು ತಿರುಗಾಡ್ತಿದ್ದಾರಲ್ಲ. ನಮಗೆ ಎಷ್ಟು ಮರ್ಯಾದೆ ಹೋಗಿದೆ ಹೇಳಿ. ನಾನು ಅದಕ್ಕೋಸ್ಕರ ಮಿಸ್ಟರ್ ದ ಲೆಜೆಂಡರಿ ಡೈರೆಕ್ಟರ್ ಗುರು ದೇಶಪಾಂಡೆ, ಲೆಜೆಂಡರಿ ರೈಟರ್ ಸೋ ಕಾಲ್ಡ್ ರಾಘವೇಂದ್ರ ನಾಯ್ಕ್, ಇವರ ಮೇಲೆ ಲೀಗಲ್ ಆಗಿ ನಾನು ಆಕ್ಷನ್ ತಗೊಳ್ಳುತ್ತಿದ್ದೇನೆ. ನಾನು ಯಾವ ಕಾಂಪ್ರಮೈಸ್ ಕೂಡ ಮಾಡಿಕೊಳ್ಳಲ್ಲ. ಅದಕ್ಕೆ ನಾನು ಸುಮ್ಮನೆ ಇದ್ದಿದ್ದು, ಇಂಥವರಿಗೆಲ್ಲಾ ಲೀಗಲಿ ಉತ್ತರ ಕೊಡಬೇಕು ಎಂದು ಕೃಷ್ಣ ತುಸು ಖಾರವಾಗಿಯೇ ಉತ್ತರ ನೀಡಿದ್ದಾರೆ.

