Dhurandhar 2 ಚಿತ್ರ ನೋಡಿ ಭೇಷ್‌ ಎಂದ ಶಿವಣ್ಣ- ಧನ್ಯವಾದ ತಿಳಿಸಿದ ಡೈರೆಕ್ಟರ್‌ ಆದಿತ್ಯ

Dhurandhar 2 ಚಿತ್ರ ನೋಡಿ ಭೇಷ್‌ ಎಂದ ಶಿವಣ್ಣ- ಧನ್ಯವಾದ ತಿಳಿಸಿದ ಡೈರೆಕ್ಟರ್‌ ಆದಿತ್ಯ

ಬಾಲಿವುಡ್‌ನಲ್ಲಿ ʻಧುರಂಧರ್‌ 2ʼ ಸಿನಿಮಾ (Dhurandhar 2) ಗಲ್ಲಾಪೆಟ್ಟಿಗೆ ಶೇಕ್‌ ಮಾಡ್ತಿದೆ. ಈ ಸಿನಿಮಾ ನೋಡಿ ಭಾರತೀಯ ಚಿತ್ರರಂಗದ ಕಲಾವಿದರು ಹಾಡಿ ಹೊಗಳ್ತಿದ್ದಾರೆ. ಇದೀಗ ಈ ಚಿತ್ರವನ್ನು ಶಿವರಾಜ್‌ಕುಮಾರ್‌ ನೋಡಿ ಮೆಚ್ಚುಗೆ ಸೂಚಿಸಿದ್ದಾರೆ. ಶಿವಣ್ಣನ ಹೊಗಳಿಕೆಗೆ ಡೈರೆಕ್ಟರ್‌ ಆದಿತ್ಯಾ ಧರ್‌ (Adithya Dhar)  ಫುಲ್‌ ಖುಷಿಯಾಗಿದ್ದಾರೆ.

ಶಿವಣ್ಣನ ಬ್ಯಾಕ್‌ ಟು ಬ್ಯಾಕ್‌ ಶೂಟಿಂಗ್‌ ನಡುವೆ ಬಿಡುವು ಮಾಡಿಕೊಂಡು ಧುರಂಧರ್‌ ಪಾರ್ಟ್‌ 2 ವೀಕ್ಷಿಸಿದ್ದಾರೆ. ‘ಧುರಂಧರ್: ದಿ ರಿವೇಂಜ್’ ಸಿನಿಮಾ ಬಹಳ ಚೆನ್ನಾಗಿದೆ. ಈ ಸಿನಿಮಾದಲ್ಲಿನ ಪ್ರತಿಯೊಂದು ಅಂಶ ಕೂಡ ಚೆನ್ನಾಗಿ ತೋರಿಸಿದ್ದಾರೆ. ರಣವೀರ್ ಸಿಂಗ್ ಬ್ರಿಲಿಯಂಟ್. ಹಳೇ ಸಾಂಗ್ ಬಳಸಿಕೊಂಡಿರುವ ಸಂಗೀತ ನಿರ್ದೇಶಕ ಶಾಶ್ವತ್ ಸಚ್​ದೇವ್ ಅವರ ಕೆಲಸ ಉತ್ತಮವಾಗಿದೆ. ನಿರ್ದೇಶಕ ಆದಿತ್ಯ ಧರ್ ಅವರ ಕೆಲಸಕ್ಕೆ ಗೌರವ ಸಲ್ಲಬೇಕು. ಸೈನಿಕನ ದೇಶಭಕ್ತಿಯೇ ಈ ಸಿನಿಮಾದ ಜೀವಾಳ. ಇಡೀ ಧುರಂಧರ್ 2 ಚಿತ್ರತಂಡಕ್ಕೆ ಅಭಿನಂದನೆಗಳು ಎಂದು ಶಿವಣ್ಣ ಮೆಚ್ಚುಗೆ ಸೂಚಿಸಿದ್ದಾರೆ.

ಈ ಹಿಂದೆ ‘ಧುರಂಧರ್’ ಮೊದಲ ಭಾಗವನ್ನು ವೀಕ್ಷಿಸಿ ಶಿವಣ್ಣ ಕೊಂಡಾಡಿದ್ದರು. ರಣವೀರ್ ಸಿಂಗ್ ಅವರು ಮಾಡಿದ ಪಾತ್ರ ಸುಲಭವಲ್ಲ. ಅದನ್ನು ಅವರು ಬಹಳ ಬ್ರಿಲಿಯಂಟ್ ಆಗಿ ನಿಭಾಯಿಸಿದ್ದಾರೆ ಎಂದಿದ್ದರು.

ಇನ್ನೂ ಶಿವಣ್ಣನ ಪ್ರತಿಕ್ರಿಯೆ ನೋಡಿ ಆದಿತ್ಯಾ ಧರ್‌ಗೆ ಖುಷಿಯಾಗಿ ರಿಯಾಕ್ಟ್‌ ಮಾಡಿದ್ದಾರೆ. ನಿಮ್ಮ ಈ ಮಾತುಗಳಿಗೆ ಧನ್ಯವಾದಗಳು ಸರ್. ನಿಮ್ಮಿಂದ ಈ ಮೆಚ್ಚುಗೆ ಬರುತ್ತಿರುವುದು ನಿಜಕ್ಕೂ ಅರ್ಥಪೂರ್ಣವಾಗಿದೆ. ಪ್ರಾಮಾಣಿಕತೆಯಿಂದ ಕೆಲಸ ಮಾಡಲು ನಿಮ್ಮ ಬೆಂಬಲವು ನಮಗೆ ಪ್ರೋತ್ಸಾಹ ನೀಡಿದೆ. ನಿಮ್ಮ ಪ್ರೀತಿಗೆ ಧನ್ಯವಾದಗಳು ಎಂದು ಆದಿತ್ಯ ಧರ್ ಅವರು ಟ್ವೀಟ್ ಮಾಡಿದ್ದಾರೆ.

News Desk Sandalwood Times

error: Content is protected !!