KD ಕಾಂಟ್ರವರ್ಸಿ ನಡುವೆ ಸುದೀಪ್‌ ಪಾತ್ರದ ಫಸ್ಟ್‌ ಲುಕ್‌ ರಿವೀಲ್‌ ಮಾಡಿದ ಚಿತ್ರತಂಡ

KD ಕಾಂಟ್ರವರ್ಸಿ ನಡುವೆ ಸುದೀಪ್‌ ಪಾತ್ರದ ಫಸ್ಟ್‌ ಲುಕ್‌ ರಿವೀಲ್‌ ಮಾಡಿದ ಚಿತ್ರತಂಡ

ಪ್ರೇಮ್‌ ನಿರ್ದೇಶನದ ಕೆಡಿ (KD) ಸಿನಿಮಾದ ಸಾಂಗ್‌ನ ವಿವಾದ ದೊಡ್ಡ ಮಟ್ಟದಲ್ಲಿ ಸದ್ದು ಮಾಡ್ತಿದೆ. ಇದರ ನಡುವೆಯೇ ಕಿಚ್ಚ ಸುದೀಪ್‌ (Kiccha Sudeep) ಪಾತ್ರದ ಲುಕ್‌ ಅನ್ನು ಕೆಡಿ ಚಿತ್ರತಂಡ ರಿವೀಲ್‌ ಮಾಡಿದೆ. ಪೋಸ್ಟರ್‌ನಿಂದಲೇ ಸುದೀಪ್‌ ಪಾತ್ರದ ಮೇಲೆ ಅಭಿಮಾನಿಗಳಲ್ಲಿ ಭರವಸೆ ಮೂಡಿದೆ.

 

View this post on Instagram

 

A post shared by KVN Productions (@kvn.productions)

ಧ್ರುವ ಸರ್ಜಾ ನಟನೆಯ (Dhruva Sarja) ಈ ಸಿನಿಮಾದಲ್ಲಿ ಸುದೀಪ್ ಪವರ್‌ಫುಲ್‌ ರೋಲ್‌ನಲ್ಲಿ ನಟಿಸಿದ್ದಾರೆ. ಕಾಲಭೈರವ ಎಂಬ ಪಾತ್ರಕ್ಕೆ ಅವರು ಜೀವ ತುಂಬಿದ್ದಾರೆ. ಸಿನಿಮಾಗೆ ಕಿಚ್ಚನ ಪಾತ್ರ ತಿರುವು ಕೊಡಲಿದೆ. ಈ ಮೂಲಕ ಅಭಿಮಾನಿಗಳ ಕುತೂಹಲಕ್ಕೆ ತೆರೆಬಿದ್ದಿದೆ.

ಏ.30ಕ್ಕೆ ಈ ಸಿನಿಮಾ ರಿಲೀಸ್‌ ಆಗಲಿದೆ. ಧ್ರುವ, ರೀಷ್ಮಾ, ರವಿಚಂದ್ರನ್‌, ಶಿಲ್ಪಾ ಶೆಟ್ಟಿ, ಸಂಜಯ್‌ ದತ್‌, ರಮೇಶ್‌ ಅರವಿಂದ್‌ ಸೇರಿದಂತೆ ಅನೇಕರು ನಟಿಸಿದ್ದಾರೆ.

News Desk Sandalwood Times

error: Content is protected !!