ನಿಶಾ ರವಿಕೃಷ್ಣನ್‌ ಫ್ಯಾನ್ಸ್‌ಗೆ ಗುಡ್‌ ನ್ಯೂಸ್-‌ ಏನದು?

ನಿಶಾ ರವಿಕೃಷ್ಣನ್‌ ಫ್ಯಾನ್ಸ್‌ಗೆ ಗುಡ್‌ ನ್ಯೂಸ್-‌ ಏನದು?

ಟ್ಟಿಮೇಳ, ಅಣ್ಣಯ್ಯ (Annayya) ಸೀರಿಯಲ್‌ ಮೂಲಕ ಮನೆ ಮಾತಾಗಿರುವ ನಟಿ ನಿಶಾ ರವಿಕೃಷ್ಣನ್‌ (Nisha Ravikrishnan) ಅಭಿಮಾನಿಗಳಿಗೆ ಗುಡ್‌ ನ್ಯೂಸ್‌ವೊಂದನ್ನು ಕೊಟ್ಟಿದ್ದಾರೆ. ಪೃಥ್ವಿ ಅಂಬರ್‌ (Pruthvi Ambaar) ನಟನೆಯ ಹೊಸ ಸಿನಿಮಾಗೆ ನಾಯಕಿಯಾಗಿ ರೌಡಿ ಬೇಬಿ ಸೆಲೆಕ್ಟ್‌ ಆಗಿದ್ದಾರೆ.


ಕನ್ನಡ, ತೆಲುಗು ಸೀರಿಯಲ್‌ಗಳಲ್ಲಿ ಮನೆ ಮಾತಾಗಿರುವ ನಟಿ ನಿಶಾ ರವಿಕೃಷ್ಣನ್‌ ಹೊಸ ಸಿನಿಮಾ ಮೂಲಕ ಬರುತ್ತಿದ್ದಾರೆ. ದರ್ಶನ ಎಂಬ ಚಿತ್ರಕ್ಕೆ ಅವರು ನಾಯಕಿಯಾಗಿ ಸೆಲೆಕ್ಟ್‌ ಆಗಿದ್ದಾರೆ. ದಿಯಾ ಹೀರೋ ಪೃಥ್ವಿ ಜೊತೆ ನಿಶಾ ಡ್ಯುಯೇಟ್‌ ಹಾಡಲಿದ್ದಾರೆ. ಪ್ರೀತಿ ಎಂಬ ಬಬ್ಲಿ ಪಾತ್ರಕ್ಕೆ ನಟಿ ಜೀವತುಂಬಲಿದ್ದಾರೆ.

ಈ ಹಿಂದೆ ಅಂದೊಂದಿತ್ತು ಕಾಲ, ಅಂಶು ಎಂಬ ಚಿತ್ರಗಳಲ್ಲಿ ನಟಿಸಿದ್ದರು. ಈ ದರ್ಶನ (Darshana) ಸಿನಿಮಾದ ಮೂಲಕ ಮೋಡಿ ಮಾಡಲು ರೆಡಿಯಾಗಿದ್ದಾರೆ.

ಪ್ರಸ್ತುತ ನಿಶಾ, ಅಣ್ಣಯ್ಯ ಸೀರಿಯಲ್‌ನಲ್ಲಿ ಶಿವು ಹೆಂಡ್ತಿ ಪಾರು ಆಗಿ ನಟಿಸುತ್ತಿದ್ದಾರೆ. ಡಾಕ್ಟರ್‌ ಪಾರು ಪಾತ್ರಕ್ಕೆ ಜೀವತುಂಬುತ್ತಿದ್ದಾರೆ.

News Desk Sandalwood Times

error: Content is protected !!