Malashree ಫ್ಯಾನ್ಸ್‌ಗೆ ಗುಡ್‌ ನ್ಯೂಸ್‌- ರಿಲೀಸ್‌ಗೆ ಸಜ್ಜಾಯ್ತು ʻಕೆಂಡದ ಸೆರಗುʼ ಚಿತ್ರ

Malashree ಫ್ಯಾನ್ಸ್‌ಗೆ ಗುಡ್‌ ನ್ಯೂಸ್‌- ರಿಲೀಸ್‌ಗೆ ಸಜ್ಜಾಯ್ತು ʻಕೆಂಡದ ಸೆರಗುʼ ಚಿತ್ರ

ಸಾಮಾಜಿಕ ಸಂದೇಶದ ಜೊತೆಗೆ ಕ್ರೈಂ ತನಿಖೆಯ ಕಥೆಯನ್ನು ಒಳಗೊಂಡಿರುವ ‘ಕೆಂಡದ ಸೆರಗು’ ಸಿನಿಮಾದ (Kendada Seragu) ಟ್ರೇಲರ್ ರಿಲೀಸ್ ಆಗಿದೆ. ಸ್ಯಾಂಡಲ್​​ವುಡ್​ನ ಆ್ಯಕ್ಷನ್ ಕ್ವೀನ್ ಖ್ಯಾತಿಯ ಮಾಲಾಶ್ರೀ ಖಾಕಿಯಲ್ಲಿ ಖದರ್ ತೋರಿಸಿದ್ದು, ಕಿರುತೆರೆ ಹಾಗೂ ರಿಯಾಲಿಟಿ ಶೋ ಮೂಲಕ ಗಮನ ಸೆಳೆದಿರುವ ಭೂಮಿ ಶೆಟ್ಟಿ (Bhoomi Shetty) ಕುಸ್ತಿಪಟುವಾಗಿ ಅಭಿನಯಿಸಿದ್ದಾರೆ.

ಚೊಚ್ಚಲ ನಿರ್ದೇಶನದಲ್ಲಿ ರಾಕಿ ಸೋಮ್ಲಿ ಗಟ್ಟಿಕಥೆಯನ್ನು ಹೇಳಲು ಹೊರಟಿದ್ದಾರೆ. ಮಹಿಳೆಯ ಆತ್ಮಗೌರವ ಮತ್ತು ಹೋರಾಟದ ಕಥೆಯ ಜೊತೆಗೆ ಇಂದಿನ ಸಮಾಜದಲ್ಲಿ ಕೆಲ ಯುವತಿಯರು ಎದುರಿಸುವ ಮೋಸ ಮತ್ತು ಅಪಾಯಗಳನ್ನೂ ತೆರೆ ಮೇಲೆ ತರುವ ಪ್ರಯತ್ನ ನಡೆಯುತ್ತಿದೆ.

ಚಿತ್ರದಲ್ಲಿ ಮಾಲಾಶ್ರೀ (Malashree) ಮತ್ತು ಭೂಮಿ ಶೆಟ್ಟಿ ಅಲ್ಲದೇ ಶೋಭಿತಾ, ಪ್ರತಿಮಾ ಠಾಕೂರ್, ಮೋಹನ್ ಕುಮಾರ್, ವರ್ಧನ್, ಯಶ್ ಶೆಟ್ಟಿ, ಸಿಂಧು ಲೋಕನಾಥ್, ಹರೀಶ್ ಅರಸು ತಾರಾ ಬಳಗದಲ್ಲಿದ್ದಾರೆ.

ಶ್ರೀ ಮುತ್ತು ಟಾಕೀಸ್ ಮತ್ತು ಎಸ್.ಕೆ ಪ್ರೊಡಕ್ಷನ್ಸ್ ಬ್ಯಾನರ್ ಅಡಿ ಕೆ.ಕೋಟ್ರೆಶ್ ಗೌಡ ನಿರ್ಮಿಸುತ್ತಿರುವ ಈ ಸಿನಿಮಾಗೆ ವಿಪಿನ್ ವಿ ರಾಜ್ ಛಾಯಾಗ್ರಹಣ, ವೀರೇಶ್ ಕಂಬ್ಲಿ ಸಂಗೀತ ನಿರ್ದೇಶನ, ಶ್ರೀಕಾಂತ್ ಸಂಕಲನ ಇದೆ. ಏಪ್ರಿಲ್ 17ಕ್ಕೆ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ.

News Desk Sandalwood Times

error: Content is protected !!