47ನೇ ವಯಸ್ಸಿಗೆ ದಿಲೀಪ್ ರಾಜ್ ಹೃದಯಾಘಾತದಿಂದ ನಿಧನ
ಖ್ಯಾತ ನಟ ಕಮ್ ನಿರ್ಮಾಪಕ ದಿಲೀಪ್ ರಾಜ್ (Dileep Raj) ಅವರು ಇಂದು (ಮೇ 13) ಹೃದಯಾಘಾತದಿಂದ ನಿಧನರಾಗಿದ್ದಾರೆ. 47ನೇ ವಯಸ್ಸಿಗೆ ದಿಲೀಪ್ ಇಹಲೋಕ ತ್ಯಜಿಸಿದ್ದಾರೆ.

ಮನೆಯಲ್ಲೇ ಅವರಿಗೆ ಹಾರ್ಟ್ ಅಟ್ಯಾಕ್ ಆಗಿತ್ತು. ಆ ಕೂಡಲೇ ಅವರನ್ನು ಆಸ್ಪತ್ರೆಗೆ ಸೇರಿಸಲಾಯ್ತು. ಆದರೂ ದಿಲೀಪ್ ಬದುಕುಳಿಯಲಿಲ್ಲ. ಅವರ ನಿಧನದಿಂದ ಪತ್ನಿ ಶ್ರೀವಿದ್ಯಾ, ಆಪ್ತರಿಗೆ, ಚಿತ್ರರಂಗಕ್ಕೆ ಆಘಾತವಾಗಿದೆ.
ಹಿಟ್ಲರ್ ಕಲ್ಯಾಣ ಸೀರಿಯಲ್, ಲವ್ ಗುರು ಸಿನಿಮಾ, ಮಿಲನಾ, ಲವ್ ಮಾಕ್ಟೈಲ್ 3, ಯೂ ಟರ್ನ್ ಸೇರಿದಂತೆ ಹಲವು ಸಿನಿಮಾಗಳಲ್ಲಿ ನಟಿಸಿದ್ರು. ಕಿರುತೆರೆಯಲ್ಲಿ ಪಾರು, ಹಿಟ್ಲರ್ ಕಲ್ಯಾಣ, ಕೃಷ್ಣ ರುಕ್ಕು ಸೀರಿಯಲ್ ಅನ್ನು ದಿಲೀಪ್ ದಂಪತಿ ನಿರ್ಮಾಣ ಮಾಡಿದ್ರು.

